Posts

ಹೀಗೆ ಸಮಯ ಜಾರುತ್ತಿದೆ  ನಿರಾಡಂಬರವಾಗಿ ಕಲ್ಪನೆಗಳೇ ಕನಸುಗಳಾಗಿ ಕನಸುಗಳು ನನಸುಗಳಾಗಿ   ಸಮಯಾಸಮಯಗಳ  ಕಾಲದ ನಡಿಗೆಯಲ್ಲಿ  ಮರೆತರು ಮರೆಯಲು ಬಿಡದ  ಕಳಚಿಟ್ಟ ಗಡಿಯಾರಗಳು  ನಿದ್ದೆಗೆ ಜಾರಿವೆ  ಯಾವುದೋ ನಿರ್ಭರತೆಯಲ್ಲಿ  ಕಳೆದ ಕಾಲದ ಸೊಗಡು  ನಾಳೆಯೆನ್ನುವ ಕಲ್ಪನೆಗಳ  ಕನಸಿಗೆ ಜಾರಿದೆ! ಹೀಗೊಂದು ಸಂದೇಶ:       ದುಬಾರಿ ಜಂಬದಚೀಲದಲ್ಲಿ ಏನೊಂದು ಇಲ್ಲಾ       ಸಣ್ಣ ಕೈಚೀಲದಲ್ಲಿ  ಎಷ್ಟೊಂದು ಖಾಜಾ  ಅಹಹಾ! ಎಂತಾ ಮಾತು! ತಂತಮ್ಮ ಸ್ವಂತಿಕೆಯ ಜೀವಿಸಿ  ಅನುಭವಿಸೆ ಮನವಿರಬೇಕಷ್ಟೇ  ಯಾರ ಮೆಚ್ಚಿಸಲೋ ಈ ನಾಟಕ  ಬಣ್ಣ ಕಳಚಿದರಷ್ಟೇ  ಪರಮ ಸುಖವಿಹುದೆಂಬ ಸಂಗತ ಮೂಡಿಸಿತೆನೆಗೆ  ಬಂದ ಭಾಗ್ಯದ-ಭೋಗ  ಅನುಭವಿಸೆ ಸಾಕಲ್ಲವೇ  ಈ ಜನುಮ! ಯಾರೋ ದಾಸ  ಹಾಡಿದ್ದೇ ಹಾಡಿದಂತೆ  ದಿನವೂ ಅದೇ ಸಂದೇಶಗಳು  ಅಸಭ್ಯ ಜೋಕುಗಳು  ಜನರ ಮೆಚ್ಚಿಗೆ ಪಡೆಯಲು  ಕಳಚಿದ ವಸ್ತ್ರಗಳು  ಕಾಫಿಯಲ್ಲಿ ಬಿದ್ದ  ನೊಣ ಮುಳುಗುವ ಮುನ್ನ  ಪ್ರಪಂಚಕ್ಕೆಲ್ಲಾ ತೋರಿಸಿ  ಸತ್ತ ನೊಣದ ಕಾಫಿಯ  ರುಚಿಯ ಸವಿಯುವ  ಮೋಹ ಈ ಶತಮಾನದ ಸಾಧನೆ! ನಮ್ಮ ಪುರೋಗತಿಗೆ ಹಿಡಿದ ಕನ್ನಡಿ! ಅವನತಿಯ ದ್ವಂದ್ವ!  
ಜೀವ ಕೊಡುವ  ಮಳೆಯು ಜಿನುಗುತ್ತಿದೆ  ಭಾವನೆಗಳು ಬಯಲಾಗುತ್ತಿವೆ ಕಂಗಳು ದಣಿಯುವಷ್ಟು ದೂರ  ಹಸಿರೋ ಹಸಿರು... ಗಿರಿ-ವನ-ಕಂದಕಗಳು  ನೋಡ ನೋಡುತ್ತಲೇ  ಎಲ್ಲವೂ ಮಟಮಾಯ ಯಾರೋ ಪರದೆಯೆಳೆದಂತೆ  ಶುದ್ಧ ಬಿಳಿಯ ಮಂಜು...  ಇಳಿಬಿಟ್ಟ ತೋರಣದಂತೆ ಮುತ್ತುಗಳು ಜಾರುತ್ತಿವೆ  ಒಂದೊಂದೇ ಅಂಗಳದ ಮುಂದೆ  ನಮ್ಮ ಕಿವಿಗಿಂಪಾಗಿಸಿದೆ   ಟಪ ಟಪ ಸದ್ದು  ನಿಂತ ನೀರ ಮೇಲೆ ನಿರಂತರ  ವರ್ತುಲಗಳ ಚಿತ್ತಾರ ಮಾತ್ರ  ಕಣ್ತುಂಬಿಸಿ ಮತ್ತೆಲ್ಲ ವಿಶಾಲ ನೋಟ  ಮುಸುಕಾಗಿಸಿ ಕವಿದ ಮಂಜು ಸೃಜಿಸಿದ ಪವಾಡ ಸದೃಶ ಕ್ಷಣಗಳ ನೆನೆಯುತ ನಾ ಬರೆದ ಚಿತ್ರಣವಿದು! ಮರಳಿ ಬಾರದ ಬಾಲ್ಯದ  ನೆನಪಿನ ಹಂಗ್ಯಾಕೆ  ತಿಳಿಯಾಗಿಸೇ ಮನವ ನಲಿಯುವುದು ಈ ಜೀವ - ನಲಿಸುವುದು ಎಲ್ಲರನು  ಮಗುವಿನಂತೆ ಮನವಿಟ್ಟು  ಕುಣಿದು ತಣಿದು ನಲಿದೊಡೆ  ವಯಸೆಂಬುದು ಕೇವಲ  ಎಣಿಕೆಯ ಸಂಖ್ಯೆ ಆಗದೆ ಮುಪ್ಪಡರುವುದೇ ಕಷ್ಟ-ಸುಖ-ದುಃಖಗಳ  ಮನನ ಮಾಡದೆ  ಪಾಲಿಗೆ ಬಂದಂತೆ ಸ್ವೀಕರಿಸಿ  ಪರಿಪೂರ್ಣ ಜೀವನ ನಡೆಸಿ  ಕಾಲಾಯ ತಸ್ಮೈ ಎಂದರಾಗದೇ? ದಿನದ ಕೆಲಸ ಮುಗಿಸಿ  ಮನೆಗೆ ಹಿಂತಿರುಗುತ್ತಿದ್ದೆ  ಕಟ್ಟೆಯ ಮೇಲಿನ ಮರದ ಕೆಳಗೆ  ಕತ್ತರಿಸಿದ ತೆಂಗಿನ ಗರಿಗಳು ಒಣಗಿದ ಬೊಂಬು, ಧೂಳಿಡಿದ ಮಡಕೆಗಳು  ಯಾರ ವ್ಯಾಪಾರಕ್ಕೊ ಸಂಸ್ಕಾರಕ್ಕೋ  ...

Gelati!

Image
  ೧.  ಗೆಳತಿ ನಿನ್ನ ಕಂಗಳ ತುಂಬಾ ನೂರಾರು ತರಂಗಳು ಹೊರ ಹೊಮ್ಮಲಿ ಬಿಡು ಒಲುಮೆಯ ಸಂಕೇತಗಳು ನಾ ಕಾದಿರುವೆ ಬೆಸೆಯಲು ಗಾಢಪ್ರೇಮದ ತಂತುಗಳು! ೨.  ಗೆಳತಿ ನಿನ್ನ ನಾಸಿಕ  ಮೆಚ್ಚಿದ ರಸಿಕ ನಾ  ಕರಗಲಿ ಬಿಡು  ಎನ್ನ ಮನ  ನಿನ್ನ ಬಿಸಿಯುಸಿರಿನಲಿ  ನಾನಿರಲಾರೆ ನಿನ್ನ ವಿನಾ! ೩.  ಗೆಳತಿ ನಿನ್ನ ಅಧರಗಳ ತುಂಬಾ ಮಕರಂದ  ಮೊಗೆದುಕೊಳಲು ಬಿಡು  ಮನದಾಸೆಯ ತುಂಬಾ   ಆಸೆಗಳು ಬರಿದಾಗದು  ಈ ಜೀವನದ ತುಂಬಾ! ೪.  ಗೆಳತಿ ನಿನ್ನ  ಗಲ್ಲ  ದೇಸಿ ತಾಟಿ ಬೆಲ್ಲ  ಎನಗೆ ಹಂಚಿ ಬಿಡು  ಆ ಸಿಹಿಯ ಬಲ್ಲವನಲ್ಲವೇ ಈ ಮಲ್ಲ! ೫.  ಗೆಳತಿ ನಿನ್ನ ಕೆನ್ನೆಗಳು  ಬಲು ನುಣುಪು  ಜಾರಿಕೊಳಲು ಬಿಡು  ಆ ಚಿಕ್ಕ ಗುಳಿಗಳಲಿ  ನಗುತ ನಲಿಯುತಾ  ನಲ್ಮೆಯ ಸಿರಿಯಲಿ! ೬.  ಗೆಳತಿ ನಿನ್ನ ಕಿರುನಗೆ ಆಸರೆ ಎನಗೆ ಹಬ್ಬಿಕೊಳಲು ಬಿಡು ಮೈಮನಗಳಲಿ ನವ ವಸಂತಕೆ ಬಿರಿಯಲಾರೆನೆ ಸಾವಿರ ಹೂನಗೆ! ೭.  ಗೆಳತಿ ನಿನ್ನ ಮುಂಗುರುಳು ಹೊಂಗನಸಿನುಂಗುರಗಳು ತೊಡಿಸಲು ಬಿಡು ನೀಳ ಬೆರಳಿಗೆ  ನಿನಗೆಂದೇ ಮುಡಿಪಿಟ್ಟ ಬಂಗಾರದ ಬಾಳ್ವೆಗೆ!
ಯಾರು ಯಾರೋ ಏನೇನೋ ಮಾಡಿ ಅಕ್ರಮವಾಗಿ ಗಳಿಸಿಹರು ಸಾವಿರಾರು ಕೋಟಿ ಪ್ರಾಮಾಣಿಕ ಆದರ್ಶಕ್ಕೆ ಜೋತುಬಿದ್ದೂ ನಾ ಪಟ್ಟ ಅಸೂಯೆ ಈ ನನ್ನ ಕವನ! ಇರುವುದರಲ್ಲಿ  ತೃಪ್ತಿ ಕಾಣದೇ ದುರಾದೃಷ್ಟ ಬೆನ್ನುಹತ್ತಿದ್ದಾಗ ಗಳಿಸುವೆನೆಂದು ಬೆನ್ನಟ್ಟಿದ  ಮರೀಚಿಕೆ  ಈ ನನ್ನ ಕವನ! ತೇಲಿಬಿಟ್ಟ  ಕಾಗದದ ದೋಣಿಗೆ ಗೊತ್ತು ಗುರಿ ಉಂಟೇನು  ಮುಳುಗದೇ ಹಳ್ಳದೆಡೆಗೆ  ತೇಲುವ  ಸಮತೋಲನ  ಈ ನನ್ನ ಕವನ! ಮಲೆನಾಡಿನ  ಮಳೆಯಂತೆ  ನಿಲ್ಲಲೊಲ್ಲದು  ಭಾವನೆಗಳ  ಮಹಾಪೂರ  ಹಿಡಿದಿಟ್ಟ  ಕೆಲವೇ ಪದಗಳು  ಈ ನನ್ನ ಕವನ! ಪೂರ್ವ ಜನ್ಮಗಳ  ಸುಕೃತ ಪುಣ್ಯವೋ  ಈ ಜನ್ಮ ಕೊಟ್ಟ  ಅದೃಷ್ಟದ ಫಲವೋ  ಜೀವನದಲ್ಲಿ  ನಾನೂ ಗೆಲುವೆ  ನೆನ್ನುವ ಭರವಸೆ  ಈ ನನ್ನ ಕವನ! ಬೆಚ್ಚನೆಯ  ಹಾಸಿಗೆಯಲಿ  ಬಿಸಿಯಪ್ಪುಗೆಯ  ಕನಸು ಕಾಣುತ್ತಾ  ಕಳೆದ ರಾತ್ರಿಗಳ  ವಿರಹದ ಸಿಹಿ  ನೆನಪು  ಈ ನನ್ನ ಕವನ! ರಾಶಿ ರಾಶಿ ಹಸಿರು ಗುಡ್ಡ, ಕಾಡುಗಳಲಿ ಅಲೆಯುತ ಕಂಡ ಜಲಪಾತಗಳ  ಅಪೂರ್ವ  ಸೊಬಗು  ನಾ ಬೆಳೆಸಿಕೊಂಡ  ಪ್ರಕೃತಿಯ ಒಡೆನಾಟ ಈ ನನ್ನ ಕವನ! ಜೀವನದ  ಸ...
ಕಂಡದ್ದಲ್ಲವೇ  ಈ ನೋವು  ಕಾಣದಿದ್ದಲ್ಲವೇ  ಈ ನಲಿವು ಜೀವನದ ನೆನಪು  ನೆಡೆದಿದ್ದಲ್ಲವೇ ಜೀವನದ ಸೋಲು ನಡೆವುದಲ್ಲವೇ  ಇದನುಳಿದು ಬೇರೇನಿಹುದು ಕೊನೆಯ ತೀರ ಸೇರುವುದಲ್ಲವೇ! ಕಂಡದ್ದಲ್ಲವೇ  ಈ ನೋವು  ಕಾಣದಿದ್ದಲ್ಲವೇ  ಈ ನಲಿವು ಜೀವನದ ಸೋಲು   ನೆಡೆದಿದ್ದಲ್ಲವೇ ಜೀವನದ ಗೆಲವು ನಡೆವುದ್ದಲ್ಲವೇ  ಇದನುಳಿದು  ಬೇರೇನಿಹುದು ಸಾವು ನಿಶ್ಚಯ  ಬದುಕೂ ನಿಶ್ಚಯ ಸಾಧನೆ  ಶೂನ್ಯ  ಸಂಪಾದನೆ  ಅನನ್ಯ   ಇದಲ್ಲವೇ ಜೀವನ!

FEAR vs STAMINA

Image
FEAR vs STAMINA ನಾನೀಗ ಹೇಳಹೊರಟಿರುವುದು ಒಂದು ಸಣ್ಣ ಚಾರಣದ ಕಥೆ, ಒಂದಿಷ್ಟು ವಿಚಾರಗಳು. ಆಗಾಗ್ಗೆ ಚೆನ್ನಾಗಿರುವ, ಮಜಾ ಕೊಡುವ ಟ್ರೆಕ್ ಮಾಡಬೇಕು, ಫೋಟೋ ತೆಗಿಯಬೇಕೆನ್ನುವುದು ನನ್ನ ಗೀಳು. ಅದಕ್ಕೆ ಒಂಟಿಯಾದರೂ ಸರಿಯೇ ಹೋಗಬೇಕೆನ್ನುವ ಮನೋಭಾವ. ಅಥವ ಸರಿಯಾದ ಜೊತೆಗಾರರನ್ನು ಹುಡುಕಿಕೊಳ್ಳಲಾಗದ ಮೈಗಳ್ಳತನ. ಇಲ್ಲವಾದಲ್ಲಿ ಈಗ ಟ್ರೆಕ್ಕರ್ಸ್ ಗೇನೂ ಕಡಿಮೆ ಇಲ್ಲಾ, ಅಂತಾದ್ರದಲ್ಲಿ ಯಾರನ್ನು ಜೊತೆ ಮಾಡಿಕೊಳ್ಳಲಿಲ್ಲ ಅಂದರೆ ಅದೇ ಅನುಕಂಪ, ಅದೂ ಒಂದು ರೀತಿಯ ಸಾಹಸ ಅಂತಂದುಕೊಂಡ್ರೆ ಅದರ ವಿಚಾರನೇ ಬೇರೆ. ಆದ್ರೆ ಒಮ್ಮೊಮ್ಮೆ ಆಗುವ ಅನುಭವಗಳು, ಈ ದೇಹದಂಡಿಸುವ ಕ್ರಮ ನನ್ನನ್ನು ಹಲವು ಬಾರಿ ಈ ರೀತಿಯ ವಿಚಾರಗಳಲ್ಲಿ ಮುಳುಗಿಸುತ್ತವೆ. "ಇಷ್ಟೊಂದು ದುಡ್ಡು ಕಾಸಿದ್ದೂ ಈ ರೀತಿ ನಡೆಯೋದ್ರದಲ್ಲಿ ಏನಿದೆ ಅರ್ಥ?" ಇದು ನಮ್ಮನ್ನು ಸ್ಥಳಿಯರೊಮ್ಮೆ ಚಾರಣದ ಮಧ್ಯೆ ಕೇಳಿದ ಪ್ರಶ್ನೆ. ಚಾರಣ ಹೋಗಲೇಬೇಕೆನ್ನುವ ನನ್ನ ಹಂಬಲಕ್ಕೆ ಈ ಬಾರಿಯು ಹಲವು ಸಿದ್ಧತೆಗಳು ನಡೆದಿದ್ದವು. ಆದರೂ ಹೊರಡುವುದಕ್ಕೆ ತೀರಾ ಹತ್ತಿರಕ್ಕೆ ಬಂದಾಗ ಏನೋ ಅನ್ಯಮನಸ್ಕತೆ ಮನತುಂಬಿ, ಎರಡು ದಿನ ಸಮಯ ವ್ಯರ್ಥ ಮಾಡಿದೆ. ಹೋಗುತ್ತೇನೆಂದು ಎಲ್ಲರ ಬಳಿಯು ಹೇಳಿಯಾಗಿದೆ, ಹೋಗಲೇ ಬೇಕಿತ್ತು. ಅಂತೂ ಹೊರಟೆ. ಬಸ್ಸು ಸಕಾಲಕ್ಕೆ ಸಿಗಲಿಲ್ಲ. ಅದೂ ಊರಿಗೆ ಇನ್ನು ಇಪ್ಪತ್ತು ಕಿ.ಮಿ. ಇರುವಾಗ ಮಾರ್ಗ ಮಧ್ಯೆ ಕೆಟ್ಟು ನಿಂತಿತು. ಬೇರೊಂದು ಬಸ್ಸು ದೊರೆತರು, ನಿಂತ...

ದುಡಿಮೆಯ ಮೋಜು, ಮಜಾ!

ದುಡಿಮೆಯ ಮೋಜು, ಮಜಾ!!! ಆ ಜಮಾನ ಹಣದ ಬಗ್ಗೆ ಹೇಳುತ್ತಾ ಹೊರಟರೆ ಬಹಳಷ್ಟು. ನನ್ನ ನೆನಪುಗಳಿಂದ, ನನ್ನ ಸಂಪಾದನೆಯ ಖುಷಿಯ ಮೆಲಕು ಹಾಕುವ ಪ್ರಯತ್ನ. ಅಪ್ಪ ಅಮ್ಮನದೋ ಕೂಲಿ ಕಾಯಕದ ಪ್ರಪಂಚ. ವಾರದ ದುಡಿಮೆಯಲ್ಲಿ ನಮಗೆ ಕೊಡುತ್ತಿದ್ದುದು ಬಿಡಿಗಾಸು, ಎಷ್ಟು ಸಂಪಾದನೆಯೋ ತಿಳಿಯದು, ಅಮ್ಮನ ಜೊತೆ ಭಾನುವಾರದ ಬಟವಾಡೆಗೆ ಬೆಳಿಗ್ಗೆಯೆ ಎದ್ದು ಜೊತೆ ಹೋದರೆ ಮಧ್ಯಾನ್ಹದವರೆಗೂ ರೇಶಿಮೆ ಹುರಿಮಾಡುವ ಫ್ಯಾಕ್ಟರಿಯಲ್ಲಿ ಅದು ಇದು ನೋಡುತ್ತಾ ಕಾಲಹರಣ, ಬಟವಾಡೆ ಆದ ನಂತರ ನಾಗಪ್ಪ ಬ್ಲಾಕ್‍ನ ಮಾರುಕಟ್ಟೆಯಲ್ಲಿ ವಾರಕ್ಕಾಗುವ ದಿನಸಿ ಸಾಮಾನು ಖರೀದಿಸಿ, ಬಟ್ಟೆಯ ಚೀಲದಲ್ಲಿ ಹೊತ್ತುತಂದರೆ ಸಿಗುತ್ತಿದ್ದ ಐದತ್ತು ಪೈಸೆಗಳೇ ನನ್ನ ಮೊದಲ ಆದಾಯವೆನ್ನಬಹುದು. ಆ ಜಮಾನದಲ್ಲಿ ೧, ೨, ೩, ೫ ಮತ್ತು ೧೦ ಪೈಸೆಯ ನಾಣ್ಯಗಳಿರುತ್ತಿದ್ದವು. ಪೈಸೆಗೆ ಎರಡು ಚಿಕ್ಕ ಬಿಸ್ಕತ್ತುಗಳು ಸಿಗುತ್ತಿದ್ದವು. ಐದು ಪೈಸೆಗೆ ಹತ್ತು ನಿಂಬೆ ಹುಳಿಯ ಚಿಕ್ಕ ಚಿಕ್ಕ ಮಿಠಾಯಿಗಳು ದೊರೆಯುತ್ತಿದ್ದವು. ಐದು ಪೈಸೆಗಳಿಗೆ ಕುಣಿಯುವ ಬೊಂಬೆ ಮಿಠಾಯಿಯ ವಾಚ್ ಕಟ್ಟಿಸಿಕೊಂಡು ನೆಕ್ಕುತ್ತಿದ್ದೆವು, ಅಥವಾ ಕಡಲೆ ಬೆಲ್ಲ ಜೇಬಿನಲ್ಲಿರಿಸಿಕೊಂಡು ಒಂದೊಂದೆ ಬಾಯಿಗೆ ಎಸೆದುಕೊಂಡು ಬೆಲ್ಲ ಇಷ್ಟಿಷ್ಟೆ ತಿನ್ನುತ್ತಿದ್ದೆವು. ಜೇಬು ತುಂಬಾ ಚಟಾಕು ಕಡಲೆ ಮತ್ತು ಒಂದುಂಡೆ ಬೆಲ್ಲ, ನಮ್ಮ ಪ್ರಪಂಚವೇ ಬೇರೆ ಇರುತ್ತಿತ್ತು. ಜಮಾನ ೧೯೭೫-೮೫ ಆಗ ದುಡಿಮೆಯ ಕಾಲವಲ್ಲ, ಒಮ್ಮೆ ಯಾರೋ ನೆಂಟನೊಬ್ಬ ಬಂದ,...