ದುಡಿಮೆಯ ಮೋಜು, ಮಜಾ!
ದುಡಿಮೆಯ ಮೋಜು, ಮಜಾ!!!
ಆ ಜಮಾನ
ಹಣದ ಬಗ್ಗೆ ಹೇಳುತ್ತಾ ಹೊರಟರೆ ಬಹಳಷ್ಟು. ನನ್ನ ನೆನಪುಗಳಿಂದ, ನನ್ನ ಸಂಪಾದನೆಯ ಖುಷಿಯ ಮೆಲಕು ಹಾಕುವ ಪ್ರಯತ್ನ.
ಅಪ್ಪ ಅಮ್ಮನದೋ ಕೂಲಿ ಕಾಯಕದ ಪ್ರಪಂಚ. ವಾರದ ದುಡಿಮೆಯಲ್ಲಿ ನಮಗೆ ಕೊಡುತ್ತಿದ್ದುದು ಬಿಡಿಗಾಸು, ಎಷ್ಟು ಸಂಪಾದನೆಯೋ ತಿಳಿಯದು, ಅಮ್ಮನ ಜೊತೆ ಭಾನುವಾರದ ಬಟವಾಡೆಗೆ ಬೆಳಿಗ್ಗೆಯೆ ಎದ್ದು ಜೊತೆ ಹೋದರೆ ಮಧ್ಯಾನ್ಹದವರೆಗೂ ರೇಶಿಮೆ ಹುರಿಮಾಡುವ ಫ್ಯಾಕ್ಟರಿಯಲ್ಲಿ ಅದು ಇದು ನೋಡುತ್ತಾ ಕಾಲಹರಣ, ಬಟವಾಡೆ ಆದ ನಂತರ ನಾಗಪ್ಪ ಬ್ಲಾಕ್‍ನ ಮಾರುಕಟ್ಟೆಯಲ್ಲಿ ವಾರಕ್ಕಾಗುವ ದಿನಸಿ ಸಾಮಾನು ಖರೀದಿಸಿ, ಬಟ್ಟೆಯ ಚೀಲದಲ್ಲಿ ಹೊತ್ತುತಂದರೆ ಸಿಗುತ್ತಿದ್ದ ಐದತ್ತು ಪೈಸೆಗಳೇ ನನ್ನ ಮೊದಲ ಆದಾಯವೆನ್ನಬಹುದು.
ಆ ಜಮಾನದಲ್ಲಿ ೧, ೨, ೩, ೫ ಮತ್ತು ೧೦ ಪೈಸೆಯ ನಾಣ್ಯಗಳಿರುತ್ತಿದ್ದವು. ಪೈಸೆಗೆ ಎರಡು ಚಿಕ್ಕ ಬಿಸ್ಕತ್ತುಗಳು ಸಿಗುತ್ತಿದ್ದವು. ಐದು ಪೈಸೆಗೆ ಹತ್ತು ನಿಂಬೆ ಹುಳಿಯ ಚಿಕ್ಕ ಚಿಕ್ಕ ಮಿಠಾಯಿಗಳು ದೊರೆಯುತ್ತಿದ್ದವು. ಐದು ಪೈಸೆಗಳಿಗೆ ಕುಣಿಯುವ ಬೊಂಬೆ ಮಿಠಾಯಿಯ ವಾಚ್ ಕಟ್ಟಿಸಿಕೊಂಡು ನೆಕ್ಕುತ್ತಿದ್ದೆವು, ಅಥವಾ ಕಡಲೆ ಬೆಲ್ಲ ಜೇಬಿನಲ್ಲಿರಿಸಿಕೊಂಡು ಒಂದೊಂದೆ ಬಾಯಿಗೆ ಎಸೆದುಕೊಂಡು ಬೆಲ್ಲ ಇಷ್ಟಿಷ್ಟೆ ತಿನ್ನುತ್ತಿದ್ದೆವು. ಜೇಬು ತುಂಬಾ ಚಟಾಕು ಕಡಲೆ ಮತ್ತು ಒಂದುಂಡೆ ಬೆಲ್ಲ, ನಮ್ಮ ಪ್ರಪಂಚವೇ ಬೇರೆ ಇರುತ್ತಿತ್ತು.
ಜಮಾನ ೧೯೭೫-೮೫
ಆಗ ದುಡಿಮೆಯ ಕಾಲವಲ್ಲ, ಒಮ್ಮೆ ಯಾರೋ ನೆಂಟನೊಬ್ಬ ಬಂದ, ಅಪ್ಪ ಮನೆಯಲ್ಲಿರಲಿಲ್ಲ, ಮನೆಗೆ ಬಂದು ಹೊರಡುವಾಗ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಬೀದಿಯ ಕೊನೆಯವರೆಗೆ ಹೋಗಿ, ಇಲ್ಲಿ ಸಾರಾಯಿ ಅಂಗಡಿ ಎಲ್ಲಿದೆ ಗೊತ್ತಾ, ತೋರಿಸು, ಮನೆಯಲ್ಲಿ ಯಾರಿಗೂ ಹೇಳಬೇಡ, ನಿನಗೆ ಹತ್ತು ಪೈಸೆ ಕೊಡುವೆ ಎಂದ. ನನಗೆ ಗೊತ್ತಿರುತ್ತದೆ ಎಂದು ಹೇಗೆ ಊಹಿಸಿದನೋ ತಿಳಿಯದು. ತೋರಿಸಿದ ನಂತರ ಹತ್ತು ಪೈಸೆ ದಕ್ಕಿತು, ಜೇಬಿಗೆ ಕಡಲೆ ಬೆಲ್ಲ ಬಂದಿತ್ತು. ಅಹಾ! ಏನು ಖುಷಿಯೋ ಖುಷಿ!
ನಾಲ್ಕಾಣೆ, ಎಂಟಾಣೆ ಕೊಡುವ ಕಾಲಕ್ಕೆ ಐದು ಮತ್ತು ಹತ್ತು ರೂಪಾಯಿಯ ಶೆಟ್ಟರ ಚೀಟಿ ಕಟ್ಟುತ್ತಿದ್ದೆವು. ಅಕ್ಕಂದಿರು ತಾವು ಕಟ್ಟುವಾಗ ನನ್ನ ಕಾರ್ಡಿಗೂ ಐದತ್ತು ಪೈಸೆ ಕಟ್ಟಬೇಕಾಗುತ್ತಿತ್ತು, ಇಲ್ಲವಾದಲ್ಲಿ ಅಳು, ಕೋಪ, ಹೊಡೆದಾಟ ರಗಳೆ ಎಲ್ಲ ನಡೆದು ನನ್ನೆರೆಡು ಕೆನ್ನೆಗಳು ಎಷ್ಟು ಬಾರಿ ಗಿಲ್ಲಿಸಿಕೊಂಡಿವೆಯೋ. ಅಂತೂ ಹಣ ಪಡೆದಾಗ ಅವೆಲ್ಲಾ ಮರೆತುಹೋಗುತ್ತಿತ್ತು. ಒಂದು ರೂಪಾಯಿ ನಾಣ್ಯಗಳು ಬಂದ ಕಾಲದಲ್ಲಿ ಅವುಗಳನ್ನು ತಗಡಿನ ಅಮುಲ್ ಮಿಲ್ಕ್ ಪೌಡರ್ ಡಬ್ಬದಲ್ಲಿ ಕೂಡಿಡುತ್ತಿದ್ದೆವು. ಅವುಗಳನ್ನು ಪದೇ ಪದೇ ತೆಗೆದು ಒಂದೊಂದೆ ಎಣಿಸುವಾಗ ಆಗುತ್ತಿದ್ದ ಆನಂದ ಅಪಾರ.
ರೇಶಿಮೆ ಸೀರೆ ನೇಯ್ಗೆಯ ಕೆಲಸದಲ್ಲಿ ಮನೆ ಮಂದಿ ಎಲ್ಲ ದುಡಿದರೂ ಸಾಕಾಗುವಷ್ಟು ಕೆಲಸವಿರುತ್ತಿತ್ತು. ಸ್ಕೂಲಿನ ನಂತರ ಮತ್ತು ರಜಾ ದಿನಗಳಲ್ಲಿ ಯಾವುದಾದರೊಂದು ಕೆಲಸ ಮಾಡಿದರೆ ಮಾತ್ರ ವಾರಾಂತ್ಯಕ್ಕೆ ಅಮ್ಮನ ಜೊತೆ ಕೇವಲ ೬೦ ಪೈಸೆಗೆ ಟೆಂಟ್ ನಲ್ಲಿ ಸಿನೆಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಮರಳಿನ ನೆಲದ ಮೇಲೆ ಕುಳಿತು, ೧೦ ಪೈಸೆಯ ಕಡಲೆಕಾಯಿ ತಿನ್ನುತ್ತಾ ರಾಜ್ ಕುಮಾರ್ ಸಿನಿಮಾ ನೋಡಿ ತಣಿಯುತ್ತಿದ್ದೆವು.
ಜಮಾನ ೧೯೮೫-೯೦
ನನಗೆ ನೆನಪಿರುವ ಹಾಗೆ, ನನ್ನ ಮೊದಲ ಸಂಪಾದನೆ ಐದು ರೂಪಾಯಿ, ಅಪ್ಪನ ಗೆಳೆಯರೊಬ್ಬರ ಮಗ್ಗದ ಮನೆಯಲ್ಲಿ ಸಹಾಯ ಮಾಡಿದ್ದಕ್ಕೆ ಕೊಟ್ಟದ್ದು!!! ಎರಡನೆಯದು, ನನ್ನೊಬ್ಬ ಗೆಳೆಯನ ತಾತ ಹಾಕುತ್ತಿದ್ದ ಮಂಟಪದ ಡೆಕೋರೇಷನ್ನಿನ ಸಾಮಾನುಗಳನ್ನು ಟೆಂಪೊಗೆ ಎತ್ತಿಹಾಕಿ, ರಾಗಿಗುಡ್ಡ ಆಂಜನೇಯನ ಗುಡಿ ಮೆಟ್ಟಿಲುಗಳನ್ನೇರಿ ಅಲ್ಲಿ ಮಂಟಪ ಹಾಕಲು ಮಾಡಿದ ಸಹಾಯಕ್ಕೆ ದೊರೆತ ಇಪ್ಪತ್ತು ರೂಪಾಯಿಗಳು!!! ಆ ಡುಡಿಮೆಯಲ್ಲಿ ಮಜಾ ಇತ್ತು, ಮನೆಗೆ ಕೊಡಲೇ ಬೇಕಾದ ಬಲವಂತವಿರುತ್ತಿರಲಿಲ್ಲ, ಬೇಕಾದ ಪೆನ್ನು ಪುಸ್ತಕ, ಆಟದ ಸಾಮಾನು, ಅಥವಾ ಟೆಂಟಿನಲ್ಲಿ ಸಿನೆಮಾ ಹೀಗೆ ಏನಾದರು ಆಗುತ್ತಿತ್ತು.
ಬಡತನದ ಕಾಲ, ಹಣ ಸಂಪಾದನೆಗೆ ಅಪ್ಪ ಅಮ್ಮ ಪಡುತ್ತಿದ್ದ ಕಷ್ಟಗಳನ್ನು ಹತ್ತಿರದಿಂದ ನೋಡಿ ಮತ್ತು ಮನೆಯಲ್ಲಿ ಅವರಿವರು ಬಂದಾಗ ತೋಡಿಕೊಳ್ಳುತ್ತಿದ್ದ ಬವಣೆಗಳನ್ನು ನೋಡಿ ಬೆಳೆದ ನನಗೆ ಹಣದ ಮೇಲೆ ಅಷ್ಟಾಗಿ ವ್ಯಾಮೋಹವಿರಲಿಲ್ಲ. ಬೆಳೆಯುವ ವಯಸ್ಸಿನಲ್ಲಿ ಮನೆಯ ಸಾಕಷ್ಟು ಕಷ್ಟಗಳನ್ನು, ನಮ್ಮ ಚಿಕ್ಕಪ್ಪರನ್ನು ಓದಿಸಿ, ಅತ್ತೆಯರನ್ನು ಸಾಕಿದ, ಮದುವೆ ಮಾಡಿದ, ಸೀಮೆ ಎಣ್ಣೆಯ ಬುಡ್ಡಿಯ ಮಂದ ಬೆಳಕಿನಲ್ಲಿ ಸರಿ ರಾತ್ರಿಯವರೆಗೂ, ವಾರದ ಬಿಡುವು ಕೂಡ ತೆಗೆದುಕೊಳ್ಳದೆ ಕೂಲಿ ಮಾಡಿ ಅಡವಿಟ್ಟ ಮನೆಯನ್ನು ಬಿಡಿಸಿಕೊಂಡ ಕತೆಗಳನ್ನು ಕೇಳಿದ್ದೆ. ನಮ್ಮೂರಿನಲ್ಲಿ ಆಗ ಖೋಟಾನೋಟಿನ ದಂಧೆ, ಮನೆಗೆ ಬಂದ ಸೂಟ್ ಕೇಸಿನಲ್ಲಿದ್ದ ಅಪಾರ ಹಣವನ್ನು ಅಪ್ಪ ತಿರಸ್ಕರಿಸಿದ್ದ ಕತೆಗಳನ್ನು ಕೇಳಿದ್ದೆ. ನಮ್ಮೂರಿನಲ್ಲಿ ರೇಶಿಮೆ ಸೀರೆ ಉದ್ಯಮ ನಿಂತುಹೋದಾಗ ಅಮ್ಮನ ವಾಲೆಯನ್ನು ಅಡವಿಟ್ಟು, ಬೆಂಗಳೂರಿಗೆ ಬಂದು ರಾಮ್ ಕುಮಾರ್ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿಕೊಂಡು ನಮ್ಮನ್ನೆಲ್ಲಾ ಸಾಕಿದ ನಮ್ಮಪ್ಪನ ಆದರ್ಶಗಳಿಂದ ಪುಳಕಿತನಾಗಿದ್ದೆ. ನಮ್ಮ ಕಷ್ಟ ನಮಗಿರಲಿ, ನೀನು ಚೆನ್ನಾಗಿ ಓದು ಎಂದಷ್ಟೇ ಹೇಳುತ್ತಿದ್ದರು ಅಪ್ಪ ಅಮ್ಮ. ಹೀಗಿರುವಾಗಲೂ ನಾನು ದುಡಿಯಬೇಕು ಎನ್ನುವ ಛಲವಾಗಲಿ, ಶ್ರೀಮಂತನಾಗಬೇಕು ಎನ್ನುವ ಆಸೆಯಾಗಲಿ ಖಂಡಿತ ನನಗಿರಲಿಲ್ಲ.
ಡಿಗ್ರಿ ಓದುತ್ತಿರುವಾಗ, ನಮ್ಮೂರಿನ ಚಿಕ್ಕ ರೆಡಿಮೇಡ್ ಗಾರ್ಮೆಂಟ್ ಗಳಲ್ಲಿ ಅರ್ಧದಿನ ಕೆಲಸ ಮಾಡಿ, ಮದ್ಯಾನ್ಹ ಕಾಲೇಜಿಗೆ ಹೋಗುತ್ತಿದ್ದೆ. ಒಂದು ಖಾಕಿ ನಿಕ್ಕರ್ ಹೊಲಿದರೆ ೭೫ ಪೈಸೆ, ಟೆರಿಕಾಟ್ ನಿಕ್ಕರಿಗೆ ೧ ರೂಪಾಯಿ ಸಿಗುತ್ತಿತು, ಮನೆಗೆ ತಂದು ಹೊಲಿದರೆ ಹತ್ತು ಪೈಸೆ ಜಾಸ್ತಿ. ದಿನಕ್ಕೆ ಮೂರು ನಾಲ್ಕು ನಿಕ್ಕರ್ ಹೊಲಿದು ಕಾಲೇಜಿಗೆ ಹೋಗಿ, ವಾರಂತ್ಯಕ್ಕೆ ೨೦, ೩೦ರೂ ಸಂಪಾದನೆ ಮಾಡುತ್ತಿದ್ದೆ, ಇದೆಲ್ಲಾ ನನ್ನ ಸಿನೆಮಾ ಖರ್ಚಿಗೆ ಸಾಕಾಗುತ್ತಿತ್ತು. ಆಗ ಬರಿಯ ೧ ರೂಪಾಯಿ ೬೦ ಪೈಸೆಗೆ ಬೆಂಚ್ ಮತ್ತು ೨.೫೦ ರೂಪಾಯಿ ಗಳಿಗೆ ಚೇರ್ ನಲ್ಲಿ ಕುಳಿತು ಸಿನೆಮಾದ ಮಜಾ ಉಡಾಯಿಸುತ್ತಿದ್ದೆವು. ಇಂಟರ್ವೆಲ್ ನಲ್ಲಿ ಆಚೆ ಬಂದರೆ ನಾಲ್ಕಾಣೆಯ ಸೂರ್ಯಕಾಂತಿ ಬೀಜ, ಇಲ್ಲವೆ ಕಡಲೆ ಬೀಜ, ಇಲ್ಲವೇ ಒಂದು ರೂಪಾಯಿಗೆ ನಾಲ್ಕು ಬೋಂಡಾ. ತಿಂಗಳ ೧೦೦ ರೂಪಾಯಿಯ ಸಂಪಾದನೆಯಲ್ಲಿ ಸುತ್ತಾ ಇರುವ ಬೆಟ್ಟಗಳಿಗೆ ವನ ವಿಹಾರಕ್ಕೋ, ಪಕ್ಕದ ಊರಿಗೊ ಹೋಗಿ ೧೬ ರೂ.ಗಳ ಒಂದು ಬಾಟಲ್ ಬೀರ್ ನಲ್ಲಿ ನಾಲ್ಕು ಜನರು ಟೈಟು ಆಗುತ್ತಿದ್ದೆವು.
ಹಲವರು ಚೌಕ ಬಾರಾ, ಹೆಡ್ ಬುಷ್, ಗೋಲಿ, ಮೀರಿಗಳಲ್ಲಿ ಪಂದ್ಯಗಳಲ್ಲಿ ಹಣ ಗಳಿಸುತ್ತಿದ್ದರು ಇಲ್ಲವೇ ಕಳೆದುಕೊಳ್ಳುತ್ತಿದ್ದರು.
ಹಬ್ಬದ ರಾಜಾ ದಿನಗಳಲ್ಲಿ, ಕಾಲೇಜಿನಲ್ಲಿದ್ದಾಗ ಇಸ್ಪೀಟ್ ಕೂಡ ಆಡುತ್ತಿದ್ದವರ ಗೆಳೆತನದಲ್ಲಿದ್ದಾಗೂ ನನಗೆ ಸದ್ಯ ಬೇರೆ ಯಾವ ಚಟ ಅಂಟಿಕೊಳ್ಳಲಿಲ್ಲ. ಅಡಿದಾಗಲೆಲ್ಲಾ ಸೋಲುತ್ತಿದ್ದೆ. ಪಂದ್ಯಗಳಲ್ಲಿ ಬಾಜಿ ಕಟ್ಟುತ್ತಿರಲಿಲ್ಲ. ಯಾವ ಆದರ್ಶವೋ ಏನೋ. ದುಡಿದು ತಿನ್ನುವ ಹಟ, ಹಣ ಕೂಡಿಡುವ ಯೋಚನೆಯೇ ಬರಲಿಲ್ಲ. ಮನೆಯ ಗೋಡೆಯ ಮೇಲಿರುವ ಲಕ್ಷ್ಮಿ ಚಿತ್ರವಿರುವ ಕ್ಯಾಲೆಂಡರ್ ನೋಡಿದಾಗಲೆಲ್ಲಾ ಅಂದುಕೊಳ್ಳುತ್ತಿದ್ದೆ, ನಿನಗೆ ಅಷ್ಟೊಂದು ಐಶ್ವರ್ಯವಿದೆ, ನನಗಾಗಿ ನಿನ್ನ ಮೂಗುತಿಯ ಭಾರದಷ್ಟಾದರೂ ಕೊಡಬಾರದೆ ಎಂದು.
ಜಮಾನ ೧೯೯೫ - ೨೧೧೦
ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿದಾಗ ಕೇವಲ ರೂ. ೪೦೦ ಸಂಬಳ. ಒಂದಕ್ಕಾದರೆ ಇನ್ನೊಂದಕ್ಕೆ ಸಾಲುತ್ತಿರಲಿಲ್ಲ. ನಾಲ್ಕಂಕಿ ಸಂಬಳ ಆಗ ನನ್ನ ಕನಸು. ನನ್ನೊಂದಷ್ಟೇ ಅಲ್ಲ, ಬಹು ಜನರ ದುಡಿಮೆಯ ಪರಮಾವದಿಯ ಕಾಲವದು. ಓವರ್ ಟೈಮ್ ದುಡಿಮೆಯಿಂದ ನೂರು ನೂರೈವತ್ತು ಬಂದರೆ ಅದು ಮನೆಗೆ ಕೊಡುತ್ತಿರಲಿಲ್ಲ, ೧೦೦-೧೨೦ಕ್ಕೆ ಒಂದು ಷರ್ಟ್ ಕೊಂಡಾಗ ಏನೋ ಖುಷಿ, ರೇಮಂಡ್, ದಿನೇಶ್ ಬ್ರಾಂಡ್ ಬಿಟ್ಟು ಈಗಿನಂತೆ ಬ್ರಾಂಡೆಡ್ ಬಗ್ಗೆ ಚಿಂತೆ ಮಾಡಬೇಕಿರಲಿಲ್ಲ. ಆಗ ಇದ್ದದ್ದು ಮೂರೇ ಜೊತೆ ಬಟ್ಟೆ, ಜೀನ್ಸ್ ಮತ್ತು ಟೂ-ವೀಲರ್ ನ ಕನಸೋ ಕನಸು, ಎಚ್ಚರವಾದಾಗ ಬಿಟಿಎಸ್ ನಲ್ಲಿ ನುಸುಳಿಕೊಂಡೆ ಹೊರಬರಬೇಕಾಗುತ್ತಿತ್ತು.
ಮದುವೆಯ ಸಮಯಕ್ಕೆ ನನಗೆ ನಾಲ್ಕಂಕಿಯ ಎರಡು ಸಾವಿರ ಸಂಬಳ, ಅದನ್ನು ನೋಡಿಯೇ ನನಗೆ ಕನ್ಯಾದಾನ ಮಾಡಿರಬೇಕು ನನ್ನ ಮಾವ. ನಂತರ ರೂ. ೪೦೦೦ ಸಂಬಳದ ಕೆಲಸ ಸಿಕ್ತು, ಅಂತೂ ಒಳ್ಳೆಯ ದಿನಗಳು ಪ್ರಾರಂಭವಾದವು. ಆಗ ನಾನು ಒಳ್ಳೆಯ ಮತ್ತು ಡೈನಾಮಿಕ್ ವರ್ಕರ್ ಎನಿಸಿಕೊಂಡಿದ್ದೆ. ಏಳೇ ವರ್ಷಗಳಲ್ಲಿ ನನ್ನ ಸಂಬಳ ನಾಲ್ಕರಿಂದ ೨೫,೦೦೦ಕ್ಕೆ ಏರಿತ್ತು. ಗೆಳೆಯನೊಬ್ಬ ಬಾಯಿ ಬಿಟ್ಟ, ತಿಂಗಳಿಗೆ ಕಾಲು ಲಕ್ಷ ಸಂಬಳ! ಇವನೆಲ್ಲೋ ಹೋಗಿಬಿಡ್ತಾನೆ... ನನ್ನ ದುಡಿಮೆಯ ಸುವರ್ಣ ಯುಗ ಅದು ಎನ್ನಬಹುದು. ಮನೆಯ ವೆಚ್ಚ, ಸಾಲಗಳು ಬಹಳಿರಲಿಲ್ಲ. ಬಂದ ಸಂಬಳದ ಸ್ವಲ್ಪ ಮನೆಗೆ ಕೊಟ್ಟರೆ ಆಯ್ತು, ಮಿಕ್ಕಿದ್ದರಲ್ಲಿ ಬೇಕಾದ ಹಾಗೆ ಕೊಂಡುಕೊಳ್ಳುವಿಕೆ. ೧೧,೦೦೦ ಆಡಿಯೋ ಸಿ.ಡಿ. ಪ್ಲೇಯರ್ ಬಂತು, ೨೫,೦೦೦ ಟಿ.ವಿ. ಬಂತು, ೧೨,೫೦೦ಕ್ಕೆ ವಿಸಿಡಿ ಪ್ಲೇಯರ್ ಬಂತು. ಟ್ರಾವೆಲ್ಲಿಂಗ್, ಟ್ರೆಕ್ಕಿಂಗ್ ಹವ್ಯಾಸ, ದುಬಾರಿಯ ಫೊಟೋಗ್ರಫಿ ಹುಚ್ಚು ಬೆಳೆಯಿತು... ವಿಡಿಯೋ ಕ್ಯಾಮೆರಾ ಬಂತು... ೩ ಕ್ರೆಡಿಟ್ ಕಾರ್ಡ್ ಗಳು ಜೇಬಿನಲ್ಲಿ ಓಲಾಡುತ್ತಿದ್ದವು. ಗೆಳೆಯರೊಂದಿಗಿನ ಪಾರ್ಟಿಗಳಿಗೆ ಹಣ ನನ್ನಿಂದಲೇ ಹರಿಯುತ್ತಿತ್ತು. ಟಾಪ್ ಕಾಪಿ ಮತ್ತು ಹೊಟೆಲ್ ಅಶೋಕದಲ್ಲಿ ಬೀರ್ ಹೀರಿದ ಹೆಮ್ಮೆ ನನ್ನದು. ಒಂದೇ ವರ್ಷದಲ್ಲಿ ೧೩ ಟ್ರೆಕ್ಕ್ ಮಾಡಿದ ದಾಖಲೆ ನನ್ನದಾಗಿತ್ತು. ಶಾಸ್ರೀಯ ಸಂಗೀತ, ನಾಟಕ, ಕಲೆ ಮತ್ತು ರಾಕ್ ಕಾನ್ಸರ್ಟ್ ಗಳಿಗೆ ಹೋಗಿ ಬಂದದ್ದಾಯಿತು. ದುಡಿಮೆಯ ಮೋಜು ಮಜಾ ಮುಗಿಯುವ ಕಾಲ ಬಂದೇ ಬಂತು. ಕೆಲಸ ಬಿಡಬೇಕಾಗಿ ಬಂದಾಗ, ಬಹು ದಿನಗಳ ಆಸೆಯ ವಿದೇಶಕ್ಕೆ ಹೋಗಿ ನಿರಾಸೆ ಅನುಭವಿಸಿದೆ. ದುಡ್ಡೊಂದೇ ಜೀವನ ಅಲ್ಲ ಎಂದು ಮನವರಿಕೆಯಾಯಿತು.
ತಿರುಗಿ ಬಂದಾಗ ಕೆಲಸವಿರಲಿಲ್ಲ, ಉಳಿತಾಯವಂತೂ ಮೊದಲೇ ಇರಲಿಲ್ಲ, ೬ ತಿಂಗಳ ನಿರುದ್ಯೋಗ, ತುಂಬಾ ನೋವನ್ನುಂಡ ದಿನಗಳವು. ದುಡಿಮೆ ಇಲ್ಲದ ಗಂಡನಿಗೆ, ಮಗನಿಗೆ ಮರ್ಯಾದೆಗಳು ಸಿಗಲಿಲ್ಲ. ಎರಡನೇ ಇನ್ನಿಂಗ್ಸ್ ಆರಂಭವಾಯಿತು, ಮತ್ತೆ ೯,೦೦೦ ದಿಂದ ಪ್ರಾರಂಭವಾಗಿ ಈಗಿನ ಆರಂಕಿಯ ವಾರ್ಷಿಕ ವರಮಾನ ಬರುವುದರ ಜೊತೆ ಜೊತೆಗೆ ವಯಸ್ಸಾಗುತ್ತಿರುವ ಲಕ್ಷಣ, ಜೀವನದ ಹುರುಪು ಕಡಿಮೆಯಾಗುವ ಲಕ್ಷಣಗಳು ಕಾಣತೊಡಗಿವೆ. ಉಳಿತಾಯವಿಲ್ಲದೇ ಸೊರಗುತ್ತಿದ್ದ ಬ್ಯಾಂಕ್ ಬ್ಯಾಲನ್ಸ್ ಗಳು ಸಾಲ ಎಂಬ ಮಹಾಮಾರಿಯನ್ನು ಮನೆಗೆ ಕರೆತಂದವು. ಬೆಂಗಳೂರಿನಲ್ಲಿ ಸ್ವಂತ ಮನೆಯ ಕನಸು ನನಸಾಯಿತು. ಸಾಲದ ಭಾರ ಹೆಚ್ಚಿಸಿತು. ಹೊಸ ಮನೆಗೆ ಬಂದ ಸೋಫಾ, ಎಲ್.ಸಿ.ಡಿ. ಟಿ.ವಿ., ವಾಷಿಂಗ್ ಮೆಷಿನ್ನು, ಫ಼್ರಿಡ್ಜ್, ಹೊಸ ಮನೆಯ ಅಂದ ಚಂದ ಹೆಚ್ಚಿಸಲು ಪಡುತ್ತಿರುವ ಪಾಡು, ಮಕ್ಕಳ ವಿದ್ಯಾಭ್ಯಾಸ, ಕಾರು-ಬಾರು ಹೀಗೆ ನೂರಾರು ಕಮಿಟ್ ಮೆಂಟ್ ಗಳ ನಡುವೆ ಈಗಿನ ಐದಂಕಿ ಸಂಬಳ ಕೂಡ ಮಜಾ ತರುತ್ತಿಲ್ಲ. ಮಜಾ ಏನಿದ್ದರು ಸಾಲದ ಮರುಪಾವತಿಯ ನೆನಪಾಗಿಬಿಟ್ಟಿದೆ. ಲಕ್ಷ ಎಣಿಸುವ ಕೈಗಳಲ್ಲಿ ಸಾಲದ ಗೆರೆಗಳು ಅಚ್ಚೊತ್ತಿವೆ. ಆದರೆ ಇದೊಂದು ವಿಷಾದದ ಕತೆಯಲ್ಲ. ದುಡಿಮೆಯಲ್ಲಿ ಸುಖ ಇದ್ದಂತೆ, ಜವಾಬ್ದಾರಿಯನ್ನು ಅರಿಯುವಂತೆ ಮಾಡಿದ ಜೀವನದ ವಿವಿಧ ಹಂತಗಳನ್ನು ದಾಟುತ್ತಿರುವೆ. ಪ್ರಬುದ್ಧ ಜೀವನದ ಅರಿವು ಹೆಚ್ಚಾದಂತೆ ವೆಚ್ಚಕ್ಕೆ ಕಡಿವಾಣ ಹಾಕುವ ಮನವೊಂದು ಕಡೆ... ಹಳೆಯ ನೆನಪುಗಳೊಂದು ಕಡೆ... ಸಾಗಿದೆ ಜೀವನ ಪರಿಪೂರ್ಣ ಜೀವನದ ಕನಸಿನೆಡೆಗೆ!

Comments