ಯಾರು ಯಾರೋ
ಏನೇನೋ ಮಾಡಿ
ಅಕ್ರಮವಾಗಿ ಗಳಿಸಿಹರು
ಸಾವಿರಾರು ಕೋಟಿ
ಪ್ರಾಮಾಣಿಕ ಆದರ್ಶಕ್ಕೆ
ಜೋತುಬಿದ್ದೂ
ನಾ ಪಟ್ಟ ಅಸೂಯೆ
ಈ ನನ್ನ ಕವನ!
ಏನೇನೋ ಮಾಡಿ
ಅಕ್ರಮವಾಗಿ ಗಳಿಸಿಹರು
ಸಾವಿರಾರು ಕೋಟಿ
ಪ್ರಾಮಾಣಿಕ ಆದರ್ಶಕ್ಕೆ
ಜೋತುಬಿದ್ದೂ
ನಾ ಪಟ್ಟ ಅಸೂಯೆ
ಈ ನನ್ನ ಕವನ!
ಇರುವುದರಲ್ಲಿ
ತೃಪ್ತಿ ಕಾಣದೇ
ದುರಾದೃಷ್ಟ
ಬೆನ್ನುಹತ್ತಿದ್ದಾಗ
ಗಳಿಸುವೆನೆಂದು
ಬೆನ್ನಟ್ಟಿದ
ಮರೀಚಿಕೆ
ಈ ನನ್ನ ಕವನ!
ತೇಲಿಬಿಟ್ಟ
ಕಾಗದದ ದೋಣಿಗೆ
ಗೊತ್ತು ಗುರಿ ಉಂಟೇನು
ಮುಳುಗದೇ
ಹಳ್ಳದೆಡೆಗೆ
ತೇಲುವ
ಸಮತೋಲನ
ಈ ನನ್ನ ಕವನ!
ಮಲೆನಾಡಿನ
ಮಳೆಯಂತೆ
ನಿಲ್ಲಲೊಲ್ಲದು
ಭಾವನೆಗಳ
ಮಹಾಪೂರ
ಹಿಡಿದಿಟ್ಟ
ಕೆಲವೇ ಪದಗಳು
ಈ ನನ್ನ ಕವನ!
ಪೂರ್ವ ಜನ್ಮಗಳ
ಸುಕೃತ ಪುಣ್ಯವೋ
ಈ ಜನ್ಮ ಕೊಟ್ಟ
ಅದೃಷ್ಟದ ಫಲವೋ
ಜೀವನದಲ್ಲಿ
ನಾನೂ ಗೆಲುವೆ
ನೆನ್ನುವ ಭರವಸೆ
ಈ ನನ್ನ ಕವನ!
ಬೆಚ್ಚನೆಯ
ಹಾಸಿಗೆಯಲಿ
ಬಿಸಿಯಪ್ಪುಗೆಯ
ಕನಸು ಕಾಣುತ್ತಾ
ಕಳೆದ ರಾತ್ರಿಗಳ
ವಿರಹದ
ಸಿಹಿ ನೆನಪು
ಈ ನನ್ನ ಕವನ!
ರಾಶಿ ರಾಶಿ
ಹಸಿರು ಗುಡ್ಡ,
ಕಾಡುಗಳಲಿ ಅಲೆಯುತ
ಕಂಡ ಜಲಪಾತಗಳ
ಅಪೂರ್ವ ಸೊಬಗು
ನಾ ಬೆಳೆಸಿಕೊಂಡ
ಪ್ರಕೃತಿಯ ಒಡೆನಾಟ
ಈ ನನ್ನ ಕವನ!
ಜೀವನದ
ಸೋಲು
ಗೆಲವುಗಳ
ಮಧ್ಯೆ
ಭವಿಷ್ಯದ
ಆಶೋತ್ತರಗಳ
ತಿಕ್ಕಾಟ
ಈ ನನ್ನ ಕವನ!
ನನ್ನಾಸೆಗಳು
ದಿಕ್ಕಿಗೊಂದರಂತೆ
ಚೆದುರಿ
ನನ್ನನ್ನು
ಅಸಹಾಯಕನಾಗಿ ಮಾಡಿ
ಮನದಲ್ಲಿ
ನೆಲೆಯೂರಿಸುವ ನಿರಾಸೆ
ಈ ನನ್ನ ಕವನ!
ಬೆಚ್ಚನೆಯ
ಹಾಸಿಗೆಯಲಿ
ಬಿಸಿಯಪ್ಪುಗೆಯ
ಸಿಹಿ ಕನಸು
ಕಾಣುತ್ತಾ
ಕಳೆದ ರಾತ್ರಿಗಳ
ವಿರಹದ ನೆನಪು
ಈ ನನ್ನ ಕವನ!
ಹಾಸಿಗೆಯಿದ್ದಷ್ಟು
ಕಾಲು ಚಾಚು.
ಚಾಚಿದೆನೋ
ಮುದುರಿದೆನೋ
ಬೇಕು-ಬೇಡ ಎನ್ನುವ
ಆಸೆಗಳ ದ್ವಂದ್ವಗಳಂತೆ
ಜೀರುಡುವ ಜೀರುಂಬೆ
ಈ ನನ್ನ ಕವನ!
ಎಲ್ಲಾ ಹೇಳ್ತಾರೆ
ಹಾಸಿಗೆಯಿದ್ದಷ್ಟು ಮಾತ್ರ
ಕಾಲು ಚಾಚು
ಚಾಚಿದೆನೋ
ಮುದುರಿದೆನೋ ತಿಳಿದಿಲ್ಲ
ಸದಾ ಬೇಕು-ಬೇಡ ಎನ್ನುವ
ಮನದೊಳಗಿನ ಚೀರಾಟ
ಈ ನನ್ನ ಕವನ!
ಎಲ್ಲಾ ಹೇಳ್ತಾರೆ
ಹಾಸಿಗೆಯಿದ್ದಷ್ಟು ಮಾತ್ರ
ಕಾಲು ಚಾಚು;
ಚಾಚಿದೆನೋ
ಮುದುರಿದೆನೋ ತಿಳಿದಿಲ್ಲ
ಬೇಕು-ಬೇಡ ಎಂದು
ಸದಾ ಜೀರುಡುವ ಜೀರುಂಬೆ
ಈ ನನ್ನ ಕವನ!
ಬಾಳ ನಂದನದಲಿ
ಪೂರ್ಣ ಜೀವನದ
ಕನಸುಗಳ ಹೆಕ್ಕುತ್ತಾ
ಜೀವನದ ಹಾದಿ ಸವೆಸುತ್ತಾ
ನೆನಪುಗಳೊಂದೇ ಸವಿಯಾಗಿರಲು
ಸಾರ್ಥಕತೆಯ ಹಂಗಿನಲಿ
ಬದುಕ ರೂಪಿಸಿಕೊಳ್ಳುವ ರೀತಿ
ಈ ನನ್ನ ಕವನ!
ನೂರಾರು
ತೊಂದರೆ ತಾಪತ್ರಯಗಳ
ನಡುವೆಯೂ
ಕಾಯ್ದುಕೊಂಡ ಸಾಹಸ
ಒಂಟಿ ಪಯಣದ
ಸೊಬಗೆ ಮಜಾ!
ತಿರುಕ
ತಿರುಕ ನಾನೀ ಜಗದೊಳು
ಗುರಿಯನೊಂದೂ ಹೊಂದದೆ
ಅಲೆಯುತ್ತಿರುವೆ;
ದಿನದ ಕಷ್ಟ ಕಾರ್ಪಣ್ಯಗಳ ನಡುವೆ
ಸುಖವೆಂಬ ಮರೀಚಿಕೆಯ
ಬೆನ್ನ ಹಿಂದೆ!
ಶೂನ್ಯ ಸಂಪಾದನೆ
ಎಲ್ಲೋ ಜಾರಿದೆ ಮನಸ್ಸು
ಶೂನ್ಯ ಸಂಪಾದನೆಯುತ್ತಾ
ಚಿಂತಿಸುವ ಬಡ ಜೀವನ
ಚಿಂತನೆಯಲ್ಲೇ ಮುಳುಗಿದೆ
ಗೋಡೆಯ ಮೇಲೆ ಮಾಸಿದೆ ಚಿತ್ರ -
ನಗೆಯನ್ನು ಹೊತ್ತ ಶಾಕುಂತಲೆ
ಅಣಕಿಸಿದ್ದಾಳೆ ಬಾಡದ ಮಲ್ಲಿಗೆ ಮುಡಿದು
ನೀರಿಲ್ಲದೆ ಸೊರಗಿದೆ ಹೂದೋಟ
ಕದಡಿದ ಮನಸ್ಸು ಜಾರಿದೆ
ಕತ್ತಲ ಗವಿಯೊಳಗೆ
ಬಾವಲಿಗಳಂತೆ ಚೀರುತ್ತಾ ತೂರಾಡುತ್ತಿವೆ
ಆಸೆಗಳು
ಹೊರಗೆ ಕೆನೆಯುತ್ತಿದೆ ಕುದುರೆ
ಸ್ವಾತಂತ್ರದ ಸ್ವಚ್ಚಂದ ಬದುಕಿಗೆ
ಆದರ್ಶದ ಸಂಘರ್ಷಕೆ
ತುತ್ತಾಗಿದೆ ಮನವೆಂಬ ಮರ್ಕಟ
ಏನೊಂದೂ ಕಾಣದಿದೆ ಬದುಕಿನ ಮಂಜು
ಮುಸುಕಿದ ಬೆಟ್ಟದಲ್ಲಿ
ಬೆಳ್ಳಗಿರುವುದೆಲ್ಲಾ ಹಾಲಲ್ಲ
ಹಾಲು ಬೆಳ್ಳಗಿದೆ, ವ್ಯತ್ಯಾಸ ತಿಳಿಯುತ್ತಿಲ್ಲ
ಕೈ ಜಾರಿಬಿದ್ದ ರೊಟ್ಟಿ
ತುಪ್ಪದಲ್ಲಿ ಬೀಳಲಿಲ್ಲ
ನಾ ಕುಳಿತಿರುವೆ ನಿಟ್ಟುಸಿರಿಟ್ಟು
ಮಾಸಿದ ಬಟ್ಟೆಯ ಹೊತ್ತ
ಕತ್ತೆ ಹೊರಟಿದೆ ಕೆರೆಗೆ
ಯಾರದ್ದೋ ಕೂಗಿಗೆ
ವಾಸ್ತವಕ್ಕೆ ಬಂದೆ
ನಾವು ಕಾಯುತ್ತಿದ್ದ ಬಂಡಿ
ದೂರ ಹೋಗಿತ್ತು
ನೋವಿನ ಧೂಳೆನ್ನೆಬ್ಬಿಸಿ!
ದಾಂಪತ್ಯದ
ರತಿಸುಖ
ಪ್ರೇಮದಾರತಿ!
ರತಿ-ಸುರತಿಯರ
ಬರಿದೆ ಕಾಮಿಸುವ
ಒಳಸಂಗತಿ
ಅನಿವಾರ್ಯ
ಪರಿಸ್ಥಿತಿ!
ಕೇವಲ
ಒಂದತ್ತು
ರೂಪಾಯಿಗಳ
ಚೌಕಾಸಿ ಮಾಡಿ
ಕಳೆದುಕೊಂಡ
ಸುಖಗಳೆಷ್ಟೋ...
ಹತ್ತಕ್ಕೆ ಇಪ್ಪತ್ತು
ದುಪ್ಪಟ್ಟು ಕೊಟ್ಟು
ಬ್ರಾಂಡ್ ನೇಮ್ ಗಳಲ್ಲೇ
ಕಳೆದ ಹೋದ
ರುಪಾಯಿಗಳೆಷ್ಟೋ...
ಅಧ್ಯಾತ್ಮದ
ಪರಮಸುಖ
ಪಡೆಯಲಿಚ್ಛಿಸದ
ಮೆಟಿರಿಯಲ್ ಲೈಫ್ ನ
ಬೆಂಬೆತ್ತಿದ ಈ ಜೀವ
ಪಟ್ಟ ನೋವುಗಳೆಷ್ಟೋ!
ಪ್ರೇಮ ಸಲ್ಲಾಪ
ನಲ್ಲೆ ನಿನ್ನ ನಗೆಯಿಂದಲೇ
ಈ ಜಗ ಬೆಳಕಾಯಿತು!
ಇರಬಹುದು ಅದರಿಂದಲೇ
ನಾ ನಿನ್ನ ಕಾಣಬಲ್ಲೆನು
ನಲ್ಲನಾಗಿ ನೀ
ಬೆಲ್ಲದ ಸವಿಯ ನೀಡುತಿರಲು!
ನಲ್ಲೆ ನಿನಗಾಗಿಯೇ
ಬಿರಿದವು ಮಲ್ಲಿಗೆ ಸುವಾಸನೆಯಿಂದ!
ಓ ಬಡ ಗೆಳೆಯ ನಿನಗೆ
ನನ್ನ ಸಹಾನುಭೂತಿಯಿದೆ
ಕಾರಣ: ನಾನು ಕೂಡ
ಮುಟ್ಟಲಾಗದ ಕೋಟೆಯದು!
ಪ್ರಿಯ ಗೆಳತಿ
ನೀನಿಂದು ದೂರವಾಗಿರಬಹುದು ನನ್ನಿಂದ
ಗಾವುದಗಳಾಚೆ
ನಾನೆಂತು ಮರೆಯಲಿ ಪ್ರಿಯೆ,
ನೀ ನುಡಿದ ನುಡಿಗಳನ್ನು –
"ಮನಸ್ಸಿಗೆ ದೂರದ ಪರಿವೆಯಿಲ್ಲ"
ನಿಜ ಗೆಳತೀ...
ನಾನೆಂತು ಮರೆಯಲಿ ಪ್ರಿಯೆ
ಮರ ಮರದ ಮರೆಯಲ್ಲಿ
ನಾವೇ ನಾವಾಗಿ ಮೆರೆದ ಬಾನಂಗಳದಲ್ಲಿ
ನಾವಾಡಿದ ಆ ಲಲ್ಲೆ ಮಾತುಗಳನು.
ನನ್ನಲ್ಲಿ ತುಂಬಿಕೊಂಡ ಆ ನಿನ್ನ ಬಿಂಬ
ದೂರವಾಗಿಲ್ಲ ಪ್ರಿಯೆ ಗಾವುದಗಳಾಚೆ,
ಇಲ್ಲೇ ಇಹುದು ನನ್ನಲ್ಲೇ –
ನನ್ನ ಮನದಲ್ಲಿ
ನೀ ನನ್ನವಳಾಗುವುದು ಮಿಥ್ಯವಾಯಿರಾದರೂ
ನೀ ನುಡಿದ ನುಡಿಗಳು ಸತ್ಯವಾಯಿತು ನಲ್ಲೆ
ನಿನ್ನ ನೆನಪು ಎನ್ನ ಮನದಲ್ಲಿ ತುಂಬಿಕೊಂಡು
ನೀನಿರುವ ದೂರದ ಪರಿವೆಯಿಲ್ಲದೆ?
ಆಸೆಗಳು ಗರಿಕೆದರಿ
ಕುಣಿದಷ್ಟು ಮಾತ್ರಕ್ಕೆ
ಸ್ವತಃ ತಾನೇ ಕುಣಿದಂತಾಗುವುದಿಲ್ಲ
ನೆನಪಿನ ಬುತ್ತಿಯಲ್ಲಿ
ಆಸೆಗಳೇ ಹೆಚ್ಚಾಗಿ
ಅನುಭವಗಳು ಕಡಿಮೆಯಾದಾಗ
ಕಲ್ಪಿಸಿಕೊಳ್ಳುವುದರಲ್ಲೇ
ಹೆಚ್ಚಿನ ತೃಪ್ತಿಯನ್ನು
ಕಂಡುಕೊಳ್ಳುತ್ತಾನೆ ಭಾವುಕ!
ಕವಿ!
ಕವಿಯೊಬ್ಬ
ಬತ್ತದ ಭಾವನೆಗಳ ಸರದಾರ
ಬಗೆ ಬಗೆಯ ಪದಗಳ
ತನ್ನಿಷ್ಟದಂತೆ ಬಳಸಿ
ಸುಂದರ ದೃಶ್ಯಗಳ
ಚಿತ್ತಾರ ಮೂಡಿಸುವ
ಕಲೆಗಾರ!
ಬಳುಕು ಸ್ವರಗಳನು
ತನ್ನ ಕಾವ್ಯ ಕನ್ನಿಕೆಯಲಿ
ಮೇಳೈಸುತ
ಅಂದ ಚಂದಗಳ
ವರ್ಣಿಸುತ
ಕಲ್ಪನಾ ಸಾಮ್ರಾಜ್ಯದಲಿ
ಮೆರೆವ ಚಕ್ರವರ್ತಿ!
ನಕ್ಕು ಬಿಡು ಗೆಳತಿ!
ನಕ್ಕರೆ ಹಲ್ಲು ಕಾಣುವುದೆಂಬ
ಅಂಜಿಕೆಯೇತಕೆ ನಿನಗೆ, ನಕ್ಕು ಬಿಡು ಗೆಳತಿ
ಮತ್ತೊಮ್ಮೆ ಬಾರದಿರಬಹುದು ಈ ನಗು
ಈ ಜಾಗ ಇಂದಿನಂತೆ ನಾಳೆ ಇರಲಾರದು
ಇಂದಿನ ಸುಂದರ ಕ್ಷಣಗಳೇ
ನಾಳಿನ ಸುಂದರ ಸಿಹಿ ನೆನಪುಗಳು
ನಗುವನ್ನು ನಾಳೆಗೆಂದು ಕಾದಿಟ್ಟವರು
ಯಾರೂ ಇಲ್ಲ
ನಾಳೆಗಳ ನಲಿವಿನ ಕ್ಷಣಗಳನು ನೆನೆಯುತಾ
ಇಂದಿನ ನಗುವನ್ನು ಕಳೆದುಕೊಳ್ಳಬೇಡ
ಇಂದಿನ ಮತ್ತು ನಾಳೆಯ ನಗುಗಳೆರಡನೂ
ಹೊಂದುವ ಭಾಗ್ಯ ನಿನದಾಗಲಿ
ನಗು ನಕ್ಕಷ್ಟೆ ಇಮ್ಮಡಿ ನೂರ್ಮಡಿಯಾಗಬಲ್ಲದು
ನಗು ಬಂದಾಗ ಮನಬಿಚ್ಚಿ ನಕ್ಕು ಬಿಡು
ಅದುವೇ ಮಾನವನ ಸಹಜ ಧರ್ಮ!
ನಲ್ಲೆ - ಮಲ್ಲೆ
ಮೈಸೂರು ಮಲ್ಲಿಗೆಯ
ಕಂಪು ಮುದದಿಂ ತೇಲಿ ಬರುತಿರೆ
ನಿನ್ನ ನೆನಪಾಯಿತು ನಲ್ಲೆ
ಶಾಂತ ಸೊಬಗಿನ
ನಗುವ ಮಲ್ಲಿಗೆಯೊಲು
ನೀ ನಗುತ ಬರಲಿಲ್ಲವೇಕೆ?
ನಲ್ಲೆ ನಿನಗೆಂದು
ನನ್ನೆಷ್ಟೋ ಆಸೆಗಳನ್ನು ಕೇಂದ್ರೀಕರಿಸಿ
ಸುಂದರ ಪದಗಳನು ಪೋಣಿಸಿ
ಮುದ್ದಿಸಿ ಬರೆದಿರುವೆ ಕವನಗಳನು
ಸ್ವೀಕರಿಸುವೆಯಾ!
ಅಘಾತ
ಆಕಸ್ಮಿಕವಾಗಿ ಕಂಡ
ನಿನ್ನ ಮಿಂಚು ಮುಗುಳ್ನಗೆ
ಬಯಸಿ ಪಡೆದಾಗ
ಕಾದಿತ್ತು ಎನಗೆ ಅಘಾತ
ನಿನ್ನ ದಂತಪಂಕ್ತಿಯ
ಅಗಾಧ ಪ್ರಪಾತ ಕಂಡು!
ಕಾರ್ ಮೋಡ
ಗೆಳೆತಿ
ನೀನು ಎಷ್ಟೊಂದು ಸುಂದರ
ಆದರೆ...
ನಾನು ನಿನ್ನನ್ನು ವರ್ಣಿಸಲು ಆಗದಂತೆ
ಸದಾ ಕಾರ್ ಮೋಡ ಮುಸುಕಿದಂತೆ
ಕಪ್ಪಗಿರುವೆಯಲ್ಲಾ! ಏಕೆ!
ನಲ್ಲೆಗೆ ನಲ್ಲ ಕೊಟ್ಟ
ಆಶ್ವಾಸನೆ
ಅವಳೆಲ್ಲಾ ಆಸೆಗಳನು ಈಡೇರಿಸುವೆನೆಂದು
ಆದರೆ...
ಅವನು ಕೊಂಡ ಲಾಟರಿ ಚೀಟಿ
ಅವನ ಆಸೆಯನ್ನು ಈಡೇರಿಸಲಿಲ್ಲಾ!
ಬಳ್ಳಿಗೆ ಮರದ ಆಸರೆ
ನಿಜ!
ಆದರೆ...
ಬಳ್ಳಿ ಚೆನ್ನಾಗಿ ಹಬ್ಬಿ ಬೆಳೆದು
ತನ್ನೆಲ್ಲಾ ಎಲೆ ಮತ್ತು ಹೂವುಗಳಿಂದ
ಮರವನ್ನು ಬಾಚಿ ತಬ್ಬಿ ನಿಂತಾಗ
ಮರಕ್ಕೆ ತನ್ನ ಅಸ್ತಿತ್ವವೆಲ್ಲಿ?
ನಮ್ಮೀ ದಾಂಪತ್ಯದ
ಬೆಳ್ಳಿ ಹಬ್ಬದ ಸಂಭ್ರಮದಲಿ
ಪರಿಪೂರ್ಣ ಜೀವನದ
ಕನಸುಗಳನು ಹೆಕ್ಕುತ್ತಾ
ಜೀವನದ ಹಾದಿ ಸವೆಸುತ್ತಾ
ಭಾವನೆಗಳ ಸಂವೇದನೆಯಲಿ
ಸಾರ್ಥಕತೆಯ ಹಂಗಿನಲಿ
ನೋವುಗಳ ಸವಿಯಾಗಿರಿಸಿ
ನೆನಪುಗಳ ಭಾರವಾಗಿಸಿ
ರೂಪಿಸಿಕೊಂಡ ಬದುಕು
ನನ್ನ ಮಟ್ಟಿಗೆ ವಿಶೇಷ ಎಂದಾದರೆ
ಇದಕ್ಕೆ ಮಿಗಿಲಾದ
ವಿಶೇಷತೆ ಮತ್ಯಾವುದು?
ನಮ್ಮೀ ದಾಂಪತ್ಯದ
ಬೆಳ್ಳಿ ಹಬ್ಬದ ಸಂಭ್ರಮದಲಿ
ಪರಿಪೂರ್ಣ ಜೀವನದ
ಕನಸುಗಳನು ಹೆಕ್ಕುತ್ತಾ
ಜೀವನದ ಹಾದಿ ಸವೆಸುತ್ತಾ
ಭಾವನೆಗಳ ಸಂವೇದನೆಯಲಿ
ಸಾರ್ಥಕತೆಯ ಹಂಗಿನಲಿ
ನೋವುಗಳ ಸವಿಯಾಗಿರಿಸಿ
ನೆನಪುಗಳ ಭಾರವಾಗಿಸಿ
ರೂಪಿಸಿಕೊಂಡ ಬದುಕು
ಪೂರ್ಣವೋ ಪರಿಪೂರ್ಣವೋ
ಶೇಷ ಜೀವನದಲಿ
ಕುಡಿಗಳು ನಮ್ಮ ಆಸೆಗಳನು
ವೈಭವಿಸಿ ಮನ ನಲಿಸುವ ಜೀವನವೇ
ಪರಿಪೂರ್ಣವಲ್ಲವೇ...
ಗೆಳತಿ ನಿನ್ನ ನಾಸಿಕ
ಮೆಚ್ಚಿದ ರಸಿಕ ನಾ
ಕರಗಲಿ ಬಿಡು
ಎನ್ನ ಮನ
ನಿನ್ನ ಬಿಸಿಯುಸಿರಿನಲಿ
ನಾನಿರಲಾರೆ ನಿನ್ನ ವಿನಾ!
೩.
ಗೆಳತಿ ನಿನ್ನ ಅಧರಗಳ
ತುಂಬಾ ಮಕರಂದ
ಮೊಗೆದುಕೊಳಲು ಬಿಡು
ಮನದಾಸೆಯ ತುಂಬಾ
ಆಸೆಗಳು ಬರಿದಾಗದು
ಈ ಜೀವನದ ತುಂಬಾ!
೪.
ಗೆಳತಿ ನಿನ್ನ ಗಲ್ಲ
ದೇಸಿ ತಾಟಿ ಬೆಲ್ಲ
ಎನಗೆ ಹಂಚಿ ಬಿಡು
ಆ ಸಿಹಿಯ
ಬಲ್ಲವನಲ್ಲವೇ
ಈ ಮಲ್ಲ!
೫.
ಗೆಳತಿ ನಿನ್ನ ಕೆನ್ನೆಗಳು
ಬಲು ನುಣುಪು
ಜಾರಿಕೊಳಲು ಬಿಡು
ಆ ಚಿಕ್ಕ ಗುಳಿಗಳಲಿ
ನಗುತ ನಲಿಯುತಾ
ನಲ್ಮೆಯ ಸಿರಿಯಲಿ!
೬.
ಗೆಳತಿ ನಿನ್ನ ಕಿರುನಗೆ
ಆಸರೆ ಎನಗೆ
ಹಬ್ಬಿಕೊಳಲು ಬಿಡು
ಮೈಮನಗಳಲಿ
ನವ ವಸಂತಕೆ ಬಿರಿಯಲಾರೆನೆ
ಸಾವಿರ ಹೂನಗೆ!
೭.
ಗೆಳತಿ ನಿನ್ನ ಮುಂಗುರುಳು
ಹೊಂಗನಸಿನುಂಗುರಗಳು
ತೊಡಿಸಲು ಬಿಡು
ಗೆಳತಿ ನಿನ್ನ ಕಿರುನಗೆ
ಆಸರೆ ಎನಗೆ
ಹಬ್ಬಿಕೊಳಲು ಬಿಡು
ವಸಂತ ವಸಂತದಲಿ
ಮೈಮನವರಳಿಸಿ
ನಗುವ ಹೂವಾಗುವೇ!
ಗೆಳತಿ ನಿನ್ನ ಕುರುಳು
ಹರಳು ಮಲ್ಲಿಗೆಯ ಬೀಡು
ಆರಿಸಿಕೊಳಲು ಬಿಡು
ಗೆಳತಿ ನಿನ್ನ ಕುರುಳಲ್ಲಿ
ಕಂಪಿಡುವ ಮಲ್ಲಿಗೆ ಮೊಗ್ಗುಗಳು
ಆಸ್ವಾದಿಸುವ ರಸ ಋಷಿಗಳಿಗೆ
ಅದ್ಭುತ ಹೂವುಗಳು
ಕಾಡುವ ಕನಸಿನ ಮಧು ಪೆಗ್ಗುಗಳು
ದುಂಬಿಗಳಿಗೆ
ಆಸ್ವಾದಿಸುವ
ಮುಡಿವ
ಗೆಳತಿ ನಿನ್ನ ಮುಂಗುರುಳು
ಕವಿ ಕಾಂತಿಯ ಉಂಗುರಗಳು
ತೊಡಿಸಲು ಬಿಡು
ಬಂಗಾರದ ಬಾಳ್ವೆಗೆ!
ಗೆಳತಿ ನಿನ್ನ ಮುಂಗುರುಳು
ರವಿ ಕಾಂತಿಯ ಉಂಗುರಗಳು
ನೀಳಬೆರಳಿಗೆ ತೊಟ್ಟು ಬಿಡು
ಹೊಳೆವ ಬಂಗಾರದ ಬಾಳ್ವೆಗೆ
ನಾ ಮುಡಿಪಿಡುವೆ
ಈ ಚೆಂದದ ಬಾಳು!
ನಡೆದಂತೆ ಇರುವೆಗಳು
ಸಾಲು ಸಾಲಾಗಿ ಒಂದರ ಹಿಂದೊಂದು
ಮಗದೊಂದು
ಸಿಹಿಯೋ, ಸತ್ತ ದುಂಬಿಯೋ
ಅವಕಾಶಗಳ ಹಿಂಬಾಲಿಸಿ ನಡೆವ
ರೀತಿಯೇ ಸೊಬಗು
ನಾಳೆಗಾಗಿ ಇಂದೇ ದುಡಿ
ನಿರಾಶೆಯ ಮನದಿಂದ ದೂಡಿ
ಬಾರದಿಹುದೇ, ತೀರದಿಹುದೇ
ಜೀವನವಿದು ನಿರಂತರ
ಆಸೆ-ನಿರಾಶೆಗಳು ಸಾಲು ಸಾಲು
ಕಟ್ಟಿದರಮನೆಗಳು ಛಿದ್ರ ಛಿದ್ರ
ಆದರೂ ಮತ್ತೊಂದ ಕಟ್ಟುವ
ಆಸೆಗಳು ಹುಟ್ಟುವುದೇ ಹೀಗೆ
ಹಾಗೆ ಸುಮ್ಮನೆ...
ಕರ್ಮಫಲವ ಮೀರಿದವನೇ
ಕಾಯಕ ಯೋಗಿ?
ನನ್ನೀ ಬೆರಳುಗಳು ಎಂಜಲಾಗಿವೆ ...
ದಿನವೆಲ್ಲಾ ಈ ಚಿಕ್ಕ ಪರದೆಯ
ಮೇಲೆ ಬೆರಳಾಡಿಸಿ
ಅರ್ಥಂಪರ್ಥವಿಲ್ಲದ ಜೋಕಿಗೆ
ನಗುಬಾರದ ನಗು ನಕ್ಕು
ಯಾರದ್ದೋ ಎಂಜಲು ಸುದ್ದಿ ಮಜಲುಗಳ ಹೆಕ್ಕಿ
ಹೇಸಿಗೆಯೆನಿಸುವ
ನೂರಾರು ಸಂಗತಿಗಳಲಿ ಮನ ತೊಡಗಿಸಿ
ಮಾಡುತ್ತಿರುವ ವ್ಯರ್ ರ್ಥ - ಅನರ್ಥ ಜೀವನ
ಎಂಜಲಾಗಿದೆ... ನುಂಗಲಾರದ ತುತ್ತಾಗಿದೆ
ಈ ಸಾಮಾಜಿಕ ಜಾಲ!
ನನ್ನೀ ಬೆರಳುಗಳು ಎಂಜಲಾಗಿವೆ ...
ದಿನವೆಲ್ಲಾ ಈ ಚಿಕ್ಕ ಪರದೆಯ
ಮೇಲೆ ಬೆರಳಾಡಿಸಿ
ಹಳಸಿದ, ಎಂಜಲು ಸುದ್ದಿ ಮಜಲುಗಳ ಹೆಕ್ಕಿ
ನಿಜವೋ ಸುಳ್ಳೋ ತಿಳಿಯದೇ
ಅರ್ಥಂಪರ್ಥವಿಲ್ಲದ ಜೋಕಿಗೆಲ್ಲಾ
ನಗುಬಾರದ ನಗು ನಕ್ಕು
ಹೇಸಿಗೆಯೆನಿಸುವ
ನೂರಾರು ಸಂಗತಿಗಳಲಿ ಮನ ತೊಡಗಿಸಿ
ಮಾಡುತ್ತಿರುವ ವ್ಯರ್ ರ್ಥ - ಅನರ್ಥ ಜೀವನ
ಎಂಜಲಾಗಿದೆ...
ನುಂಗಲಾರದ ತುತ್ತಾಗಿದೆ
Kalasumelogara
ಈ ಸಾಮಾಜಿಕ ಜಾಲ!
ಅಲ್ಲಿರುವವರೆಲ್ಲಾ ಅನುಭವಿಸಿದವರಲ್ಲವೇ
ರತಿ-ಮನ್ಮಥರಲ್ಲವೇ
ನಮ್ಮ ಸಂಸೃತಿಯ ಬಿಂಬಗಳಲ್ಲವೇ
ಆ ನಗ್ನ ಶಿಲ್ಪಗಳು
ಅತಿ ಸುಂದರ ಎಂತಲೂ ಹೇಳಲಾಗದೇ
ಮುಜುಗರದ ಪರಾಕಾಷ್ಠೆಯ ನಡುವೆ
ಬಾಯಿಬಿಟ್ಟು ನೋಡುತ್ತಾ ನಿಂತೆ
ಅರ್ಥವಾಗಲಿಲ್ಲ ಹಲವು
ನಾವು
ಮೊನ್ನೆಯಷ್ಟೇ ಬಟ್ಟೆಯುಟ್ಟು
ನಿನ್ನೆಯಷ್ಟೇ ನಾಗರಿಕತೆಯ ಕಲಿತು
ಮಡಿವಂತಿಕೆಯ ಸೋಗು ಹಾಕಿ
ಮನುಕುಲವ ಬೆಳೆಸಿದವರಲ್ಲವೇ!
ಹಾಗೆಯೇ ನೋಡುತ್ತಾ ನಿಂತೆ
ಎಂತಹಾ ಸೊಗಸು
ಅಹಹಾ ಎಂತಹಾ ಭಾಗ್ಯ
ಸ್ವತಃ ವಾತ್ಸಾಯನನೇ ಹೇಳಿಕೊಟ್ಟಂತೆ
ಸೂತ್ರಕ್ಕನುಗುಣ
ಚಾಚೂ ತಪ್ಪದಾ ಅನುರಣನ!
ರತಿ-ಸುರತಿ, ಮನ್ಮಥ-ಮದನ ಮೋಹನ
ಲಜ್ಜೆ-ನಿರ್ಲಜ್ಜೆಯ ತೆಳು ನಿರ್ಬಂಧದ ನಡುವಿನ
ಶೃಂಗಾರ ಕಾವ್ಯವಿದಲ್ಲವೇ
ಪ್ರಕೃತಿ ಪುರುಷನ ಮಿಲನ ಮಹೋತ್ಸವ
ಶಿಲ್ಪಕಲೆಯ ವರ್ಣಾನಾತೀತ
ಕಲ್ಪನಾ ಸಂವಹನ!
ಗೆಳತೀ ನಿನ್ನ ಕುರುಗಳಲ್ಲಿ
ಕಂಪಿಡುವ ಮಲ್ಲಿಗೆ ಮೊಗ್ಗುಗಳು =
೧. ಹಸಿದ ಕಂಗಳಲ್ಲಿ
ಮತ್ತೇರಿಸುವ ಮಧು ತುಂಬಿದ ಪೆಗ್ಗುಗಳು;
೨. ಕಾಡುವ ಕನಸುಗಳಲ್ಲಿ
ತಡಕಾಡುವ ಖಾಲಿ ಜಗ್ಗುಗಳು ;
೩. ಮಾಗಿಯ ಚಳಿಯಲ್ಲಿ
ಬೆಚ್ಚಗಿಡುವ ರಗ್ಗುಗಳು!
ಗೆಳತೀ ನಿನ್ನ ಕುರುಗಳಲ್ಲಿ
ಕಂಪಿಡುವ ಮಲ್ಲಿಗೆ ಮೊಗ್ಗುಗಳು
ಹಸಿದ ಕಂಗಳಲ್ಲಿ
ಮತ್ತೇರಿಸುವ ಮಧು ತುಂಬಿದ ಪೆಗ್ಗುಗಳು;
ಕಾಡುವ ಕನಸುಗಳಲ್ಲಿ
ತಡಕಾಡುವ ಖಾಲಿ ಜಗ್ಗುಗಳು;
ಬೆಚ್ಚನೆಯ
ಹಾಸಿಗೆಯಲಿ
ಬಿಸಿಯಪ್ಪುಗೆಯ
ಕನಸು ಕಾಣುತ್ತಾ
ಕಳೆದ ರಾತ್ರಿಗಳ
ವಿರಹದ
ಸಿಹಿ ನೆನಪು
ಈ ನನ್ನ ಕವನ!
ರಾಶಿ ರಾಶಿ
ಹಸಿರು ಗುಡ್ಡ,
ಕಾಡುಗಳಲಿ ಅಲೆಯುತ
ಕಂಡ ಜಲಪಾತಗಳ
ಅಪೂರ್ವ ಸೊಬಗು
ನಾ ಬೆಳೆಸಿಕೊಂಡ
ಪ್ರಕೃತಿಯ ಒಡೆನಾಟ
ಈ ನನ್ನ ಕವನ!
ಜೀವನದ
ಸೋಲು
ಗೆಲವುಗಳ
ಮಧ್ಯೆ
ಭವಿಷ್ಯದ
ಆಶೋತ್ತರಗಳ
ತಿಕ್ಕಾಟ
ಈ ನನ್ನ ಕವನ!
ನನ್ನಾಸೆಗಳು
ದಿಕ್ಕಿಗೊಂದರಂತೆ
ಚೆದುರಿ
ನನ್ನನ್ನು
ಅಸಹಾಯಕನಾಗಿ ಮಾಡಿ
ಮನದಲ್ಲಿ
ನೆಲೆಯೂರಿಸುವ ನಿರಾಸೆ
ಈ ನನ್ನ ಕವನ!
ಬೆಚ್ಚನೆಯ
ಹಾಸಿಗೆಯಲಿ
ಬಿಸಿಯಪ್ಪುಗೆಯ
ಸಿಹಿ ಕನಸು
ಕಾಣುತ್ತಾ
ಕಳೆದ ರಾತ್ರಿಗಳ
ವಿರಹದ ನೆನಪು
ಈ ನನ್ನ ಕವನ!
ಹಾಸಿಗೆಯಿದ್ದಷ್ಟು
ಕಾಲು ಚಾಚು.
ಚಾಚಿದೆನೋ
ಮುದುರಿದೆನೋ
ಬೇಕು-ಬೇಡ ಎನ್ನುವ
ಆಸೆಗಳ ದ್ವಂದ್ವಗಳಂತೆ
ಜೀರುಡುವ ಜೀರುಂಬೆ
ಈ ನನ್ನ ಕವನ!
ಎಲ್ಲಾ ಹೇಳ್ತಾರೆ
ಹಾಸಿಗೆಯಿದ್ದಷ್ಟು ಮಾತ್ರ
ಕಾಲು ಚಾಚು
ಚಾಚಿದೆನೋ
ಮುದುರಿದೆನೋ ತಿಳಿದಿಲ್ಲ
ಸದಾ ಬೇಕು-ಬೇಡ ಎನ್ನುವ
ಮನದೊಳಗಿನ ಚೀರಾಟ
ಈ ನನ್ನ ಕವನ!
ಎಲ್ಲಾ ಹೇಳ್ತಾರೆ
ಹಾಸಿಗೆಯಿದ್ದಷ್ಟು ಮಾತ್ರ
ಕಾಲು ಚಾಚು;
ಚಾಚಿದೆನೋ
ಮುದುರಿದೆನೋ ತಿಳಿದಿಲ್ಲ
ಬೇಕು-ಬೇಡ ಎಂದು
ಸದಾ ಜೀರುಡುವ ಜೀರುಂಬೆ
ಈ ನನ್ನ ಕವನ!
ಬಾಳ ನಂದನದಲಿ
ಪೂರ್ಣ ಜೀವನದ
ಕನಸುಗಳ ಹೆಕ್ಕುತ್ತಾ
ಜೀವನದ ಹಾದಿ ಸವೆಸುತ್ತಾ
ನೆನಪುಗಳೊಂದೇ ಸವಿಯಾಗಿರಲು
ಸಾರ್ಥಕತೆಯ ಹಂಗಿನಲಿ
ಬದುಕ ರೂಪಿಸಿಕೊಳ್ಳುವ ರೀತಿ
ಈ ನನ್ನ ಕವನ!
ನೂರಾರು
ತೊಂದರೆ ತಾಪತ್ರಯಗಳ
ನಡುವೆಯೂ
ಕಾಯ್ದುಕೊಂಡ ಸಾಹಸ
ಒಂಟಿ ಪಯಣದ
ಸೊಬಗೆ ಮಜಾ!
ತಿರುಕ
ತಿರುಕ ನಾನೀ ಜಗದೊಳು
ಗುರಿಯನೊಂದೂ ಹೊಂದದೆ
ಅಲೆಯುತ್ತಿರುವೆ;
ದಿನದ ಕಷ್ಟ ಕಾರ್ಪಣ್ಯಗಳ ನಡುವೆ
ಸುಖವೆಂಬ ಮರೀಚಿಕೆಯ
ಬೆನ್ನ ಹಿಂದೆ!
ಶೂನ್ಯ ಸಂಪಾದನೆ
ಎಲ್ಲೋ ಜಾರಿದೆ ಮನಸ್ಸು
ಶೂನ್ಯ ಸಂಪಾದನೆಯುತ್ತಾ
ಚಿಂತಿಸುವ ಬಡ ಜೀವನ
ಚಿಂತನೆಯಲ್ಲೇ ಮುಳುಗಿದೆ
ಗೋಡೆಯ ಮೇಲೆ ಮಾಸಿದೆ ಚಿತ್ರ -
ನಗೆಯನ್ನು ಹೊತ್ತ ಶಾಕುಂತಲೆ
ಅಣಕಿಸಿದ್ದಾಳೆ ಬಾಡದ ಮಲ್ಲಿಗೆ ಮುಡಿದು
ನೀರಿಲ್ಲದೆ ಸೊರಗಿದೆ ಹೂದೋಟ
ಕದಡಿದ ಮನಸ್ಸು ಜಾರಿದೆ
ಕತ್ತಲ ಗವಿಯೊಳಗೆ
ಬಾವಲಿಗಳಂತೆ ಚೀರುತ್ತಾ ತೂರಾಡುತ್ತಿವೆ
ಆಸೆಗಳು
ಹೊರಗೆ ಕೆನೆಯುತ್ತಿದೆ ಕುದುರೆ
ಸ್ವಾತಂತ್ರದ ಸ್ವಚ್ಚಂದ ಬದುಕಿಗೆ
ಆದರ್ಶದ ಸಂಘರ್ಷಕೆ
ತುತ್ತಾಗಿದೆ ಮನವೆಂಬ ಮರ್ಕಟ
ಏನೊಂದೂ ಕಾಣದಿದೆ ಬದುಕಿನ ಮಂಜು
ಮುಸುಕಿದ ಬೆಟ್ಟದಲ್ಲಿ
ಬೆಳ್ಳಗಿರುವುದೆಲ್ಲಾ ಹಾಲಲ್ಲ
ಹಾಲು ಬೆಳ್ಳಗಿದೆ, ವ್ಯತ್ಯಾಸ ತಿಳಿಯುತ್ತಿಲ್ಲ
ಕೈ ಜಾರಿಬಿದ್ದ ರೊಟ್ಟಿ
ತುಪ್ಪದಲ್ಲಿ ಬೀಳಲಿಲ್ಲ
ನಾ ಕುಳಿತಿರುವೆ ನಿಟ್ಟುಸಿರಿಟ್ಟು
ಮಾಸಿದ ಬಟ್ಟೆಯ ಹೊತ್ತ
ಕತ್ತೆ ಹೊರಟಿದೆ ಕೆರೆಗೆ
ಯಾರದ್ದೋ ಕೂಗಿಗೆ
ವಾಸ್ತವಕ್ಕೆ ಬಂದೆ
ನಾವು ಕಾಯುತ್ತಿದ್ದ ಬಂಡಿ
ದೂರ ಹೋಗಿತ್ತು
ನೋವಿನ ಧೂಳೆನ್ನೆಬ್ಬಿಸಿ!
ದಾಂಪತ್ಯದ
ರತಿಸುಖ
ಪ್ರೇಮದಾರತಿ!
ರತಿ-ಸುರತಿಯರ
ಬರಿದೆ ಕಾಮಿಸುವ
ಒಳಸಂಗತಿ
ಅನಿವಾರ್ಯ
ಪರಿಸ್ಥಿತಿ!
ಕೇವಲ
ಒಂದತ್ತು
ರೂಪಾಯಿಗಳ
ಚೌಕಾಸಿ ಮಾಡಿ
ಕಳೆದುಕೊಂಡ
ಸುಖಗಳೆಷ್ಟೋ...
ಹತ್ತಕ್ಕೆ ಇಪ್ಪತ್ತು
ದುಪ್ಪಟ್ಟು ಕೊಟ್ಟು
ಬ್ರಾಂಡ್ ನೇಮ್ ಗಳಲ್ಲೇ
ಕಳೆದ ಹೋದ
ರುಪಾಯಿಗಳೆಷ್ಟೋ...
ಅಧ್ಯಾತ್ಮದ
ಪರಮಸುಖ
ಪಡೆಯಲಿಚ್ಛಿಸದ
ಮೆಟಿರಿಯಲ್ ಲೈಫ್ ನ
ಬೆಂಬೆತ್ತಿದ ಈ ಜೀವ
ಪಟ್ಟ ನೋವುಗಳೆಷ್ಟೋ!
ಬಾಳ ಪಯಣದ
ದಾರಿ ಬಹಳ ದೂರ
ಒಂಟಿ ಪಯಣಿಗನ
ಪಾಡಂತೂ ಇನ್ನಷ್ಟು ಭಾರ
ಯಾರೊಂದಿಗೂ ಹಂಚಿಕೊಳ್ಳಲಾಗದೇ
ಹೇಳಲಾಗದೇ;
ಕಡೆಗೊಮ್ಮೆ ಗುರಿ ಸೇರಿ
ನಿಟ್ಟುಸಿರು ಬಿಡುತ್ತಾ,
ಸುಂಯ್ ಗುಟ್ಟಿ
ಬಸವಳಿದು ಕುಳಿತಾಗ
ಅವನ ಅನುಭವಗಳನ್ನು
ಹಂಚಿಕೊಳ್ಳಲು ನೂರಾರು ಜನ!
ರಾಜಿ
ಜೀವನದಲ್ಲಿ
ಅನುಭವಿಸಿದ್ದಕ್ಕಿಂತಲೂ
ಕಲ್ಪಿಸಿಕೊಳ್ಳುವುದೇ
ಹೆಚ್ಚಾದಾಗ;
ಅನುಭವ ಮತ್ತು ಕಲ್ಪನೆಗಳ
ನಡುವಿನ ಸಾಮರಸ್ಯಕ್ಕಾಗಿ
ಸದಾ ಹೆಣಗುವುದನ್ನೇ
ಜೀವನದಲ್ಲಿ ರಾಜಿ
ಎನ್ನುವುದು!
ಕಾಡಬೇಡ ಕಾಮಿನಿ
ಎಂದೋ ಒಂದು ದಿನ
ನನ್ನ ನೋಟಕ್ಕೆ ಸಿಕ್ಕು
ನಿನ್ನ ಕಂಡಾಕ್ಷಣದ
ಮನದ ನೂರು ನೋವು
ಮಾಯಾವಾಗಿ
ನೀನು ಮರೆಯಾದ ನಂತರ
ನೋವು ನೂರು ಸಾವಿರವಾಗುವ
ಪರಿಸ್ಥಿತಿಯಲ್ಲಿ;
ಕಾಡಬೇಡ ಕಾಮಿನಿ
ಎಂದೋ ಒಂದು ದಿನ
ನನ್ನ ನೋಟಕ್ಕೆ ಸಿಕ್ಕು...
ಪ್ರೇಮ ಸಲ್ಲಾಪ
ನಲ್ಲೆ ನಿನ್ನ ನಗೆಯಿಂದಲೇ
ಈ ಜಗ ಬೆಳಕಾಯಿತು!
ಇರಬಹುದು ಅದರಿಂದಲೇ
ನಾ ನಿನ್ನ ಕಾಣಬಲ್ಲೆನು
ನಲ್ಲನಾಗಿ ನೀ
ಬೆಲ್ಲದ ಸವಿಯ ನೀಡುತಿರಲು!
ನಲ್ಲೆ ನಿನಗಾಗಿಯೇ
ಬಿರಿದವು ಮಲ್ಲಿಗೆ ಸುವಾಸನೆಯಿಂದ!
ಅಹುದು ನಲ್ಲ
ಅದಕ್ಕಾಗಿಯೇ ಮಲ್ಲಿಗೆ
ಮುಡಿದು ಬಂದಿಹೆನು
ಒಲುಮೆಯಿಂದ!
ನಲ್ಲೆ ನಿನ್ನಂದ ನೋಡಿ ಹಾಡುತಿಹವು
ಅದಕ್ಕಾಗಿಯೇ ಮಲ್ಲಿಗೆ
ಮುಡಿದು ಬಂದಿಹೆನು
ಒಲುಮೆಯಿಂದ!
ನಲ್ಲೆ ನಿನ್ನಂದ ನೋಡಿ ಹಾಡುತಿಹವು
ಹಕ್ಕಿಗಳು ಬಗೆಬಗೆಯ ರಾಗ!
ಆಲಿಸು ನಲ್ಲ
ನಿನಗಾಗಿ ಹಾಡುವೆನು
ಹಕ್ಕಿಗಳೊಡಗೂಡಿ
ಇನಿದನಿಯ ಪ್ರೇಮರಾಗ!
ನಲ್ಲೆ ನಿನಗಾಗಿಯೇ
ಜೇನು ಸಂಗ್ರಹಿಸಿಹವು ಮಕರಂದ!
ನಿಜ ನಲ್ಲ
ನಾ ತಂದಿರುವೆ
ಹಾಲು-ಜೇನು
ನಿನ್ನನು ಸವಿಯಾಗಿಡಲು!
ನಲ್ಲೆ ತಂಗಾಳಿ ಬೀಸಿದೆ
ನಮ್ಮ ಮನ ಮುದಗೊಳಿಸಲು
ಚೆನ್ನಾಯಿತು ನಲ್ಲ
ನಾ ಬರುವೆ ನಲಿಯುತ
ಮಧುರ ಭಾವನೆಗಳನ್ನು ಹೊತ್ತು
ಹೊನ್ನಿನ ಸ್ಮೃತಿಗಳನ್ನು ನೀಡುತಾ!
ನಲ್ಲೆ ನಿಸರ್ಗ ನಲಿದಿದೆ
ವಸಂತದ ತನ್ನ ಚೆಲುವಿಗೆ!
ಸುಂದರವಾಗಿದೆ ನಲ್ಲ
ಕೋಕಿಲೋದಯ ಚೈತ್ರ
ನಮ್ಮ ಬಾಳಲ್ಲೂ
ಬರಲಿದೆ ಹೊಸ ವಸಂತ!
ನನ್ನ ಗೆಳೆಯನಿಗೆ
ನೀ ಮುಟ್ಟಲಾಗದಂತ ಕೋಟೆಯೊಂದಿದೆ...
ಜೀವನದ ದುರ್ಭರತೆಯ ಕ್ಷಣಗಳನು
ಧೈರ್ಯದಿಂದ ಎದುರಿಸಿ
ದೂರ ತೀರದ ಮಂಜು ಮುಸುಕಿದ
ಬದುಕಿನ ಆದರ್ಶಗಳ ನಂಬಿ
ನಾಗಾಲೋಟದಿಂದ ಓಡುವ
ಬೇಕು-ಬೇಡಗಳ ಚಂಚಲಚಿತ್ತ
ಮನವನ್ನು ಗೂಟಕ್ಕೆ ಸಿಕ್ಕಿಸಿ
ಧ್ಯೇಯ ಸಾಧನೆಯ ಗುರಿಯನ್ನು
ಬೆಂಬೆತ್ತಿ ಜೀವನದ ಸಾರ್ಥಕತೆಯನ್ನು
ಸಾಧಿಸುವಲ್ಲಿ ನಿನ್ನೆಲ್ಲಾ ಆದರ್ಶಗಳು
ಪ್ರತಿಷ್ಟೆಯನ್ನು ಉಳಿಸುಕೊಳ್ಳುವ
ತೆವಲಾಗಿ, ಸಾಧನೆಯ ಶೂನ್ಯತೆ
ಅನುದಿನ ಕಾಡಿ
ಸಮಾಜ ನಿನ್ನನ್ನು ಪರಾಜಿತನನ್ನಾಗಿ
ಚಿತ್ರಿಸುವ ಪರಿಸರದಲ್ಲಿ
ಪರಿಪೂರ್ಣ ಜೀವನವೆಂಬ
ನೀ ಮುಟ್ಟಲಾಗದ ಕೋಟೆಯೊಂದಿದೆ.
ಆಲಿಸು ನಲ್ಲ
ನಿನಗಾಗಿ ಹಾಡುವೆನು
ಹಕ್ಕಿಗಳೊಡಗೂಡಿ
ಇನಿದನಿಯ ಪ್ರೇಮರಾಗ!
ನಲ್ಲೆ ನಿನಗಾಗಿಯೇ
ಜೇನು ಸಂಗ್ರಹಿಸಿಹವು ಮಕರಂದ!
ನಿಜ ನಲ್ಲ
ನಾ ತಂದಿರುವೆ
ಹಾಲು-ಜೇನು
ನಿನ್ನನು ಸವಿಯಾಗಿಡಲು!
ನಲ್ಲೆ ತಂಗಾಳಿ ಬೀಸಿದೆ
ನಮ್ಮ ಮನ ಮುದಗೊಳಿಸಲು
ಚೆನ್ನಾಯಿತು ನಲ್ಲ
ನಾ ಬರುವೆ ನಲಿಯುತ
ಮಧುರ ಭಾವನೆಗಳನ್ನು ಹೊತ್ತು
ಹೊನ್ನಿನ ಸ್ಮೃತಿಗಳನ್ನು ನೀಡುತಾ!
ನಲ್ಲೆ ನಿಸರ್ಗ ನಲಿದಿದೆ
ವಸಂತದ ತನ್ನ ಚೆಲುವಿಗೆ!
ಸುಂದರವಾಗಿದೆ ನಲ್ಲ
ಕೋಕಿಲೋದಯ ಚೈತ್ರ
ನಮ್ಮ ಬಾಳಲ್ಲೂ
ಬರಲಿದೆ ಹೊಸ ವಸಂತ!
ನನ್ನ ಗೆಳೆಯನಿಗೆ
ನೀ ಮುಟ್ಟಲಾಗದಂತ ಕೋಟೆಯೊಂದಿದೆ...
ಜೀವನದ ದುರ್ಭರತೆಯ ಕ್ಷಣಗಳನು
ಧೈರ್ಯದಿಂದ ಎದುರಿಸಿ
ದೂರ ತೀರದ ಮಂಜು ಮುಸುಕಿದ
ಬದುಕಿನ ಆದರ್ಶಗಳ ನಂಬಿ
ನಾಗಾಲೋಟದಿಂದ ಓಡುವ
ಬೇಕು-ಬೇಡಗಳ ಚಂಚಲಚಿತ್ತ
ಮನವನ್ನು ಗೂಟಕ್ಕೆ ಸಿಕ್ಕಿಸಿ
ಧ್ಯೇಯ ಸಾಧನೆಯ ಗುರಿಯನ್ನು
ಬೆಂಬೆತ್ತಿ ಜೀವನದ ಸಾರ್ಥಕತೆಯನ್ನು
ಸಾಧಿಸುವಲ್ಲಿ ನಿನ್ನೆಲ್ಲಾ ಆದರ್ಶಗಳು
ಪ್ರತಿಷ್ಟೆಯನ್ನು ಉಳಿಸುಕೊಳ್ಳುವ
ತೆವಲಾಗಿ, ಸಾಧನೆಯ ಶೂನ್ಯತೆ
ಅನುದಿನ ಕಾಡಿ
ಸಮಾಜ ನಿನ್ನನ್ನು ಪರಾಜಿತನನ್ನಾಗಿ
ಚಿತ್ರಿಸುವ ಪರಿಸರದಲ್ಲಿ
ಪರಿಪೂರ್ಣ ಜೀವನವೆಂಬ
ನೀ ಮುಟ್ಟಲಾಗದ ಕೋಟೆಯೊಂದಿದೆ.
ನನ್ನ ಸಹಾನುಭೂತಿಯಿದೆ
ಕಾರಣ: ನಾನು ಕೂಡ
ಮುಟ್ಟಲಾಗದ ಕೋಟೆಯದು!
ಪ್ರಿಯ ಗೆಳತಿ
ನೀನಿಂದು ದೂರವಾಗಿರಬಹುದು ನನ್ನಿಂದ
ಗಾವುದಗಳಾಚೆ
ನಾನೆಂತು ಮರೆಯಲಿ ಪ್ರಿಯೆ,
ನೀ ನುಡಿದ ನುಡಿಗಳನ್ನು –
"ಮನಸ್ಸಿಗೆ ದೂರದ ಪರಿವೆಯಿಲ್ಲ"
ನಿಜ ಗೆಳತೀ...
ನಾನೆಂತು ಮರೆಯಲಿ ಪ್ರಿಯೆ
ಮರ ಮರದ ಮರೆಯಲ್ಲಿ
ನಾವೇ ನಾವಾಗಿ ಮೆರೆದ ಬಾನಂಗಳದಲ್ಲಿ
ನಾವಾಡಿದ ಆ ಲಲ್ಲೆ ಮಾತುಗಳನು.
ನನ್ನಲ್ಲಿ ತುಂಬಿಕೊಂಡ ಆ ನಿನ್ನ ಬಿಂಬ
ದೂರವಾಗಿಲ್ಲ ಪ್ರಿಯೆ ಗಾವುದಗಳಾಚೆ,
ಇಲ್ಲೇ ಇಹುದು ನನ್ನಲ್ಲೇ –
ನನ್ನ ಮನದಲ್ಲಿ
ನೀ ನನ್ನವಳಾಗುವುದು ಮಿಥ್ಯವಾಯಿರಾದರೂ
ನೀ ನುಡಿದ ನುಡಿಗಳು ಸತ್ಯವಾಯಿತು ನಲ್ಲೆ
ನಿನ್ನ ನೆನಪು ಎನ್ನ ಮನದಲ್ಲಿ ತುಂಬಿಕೊಂಡು
ನೀನಿರುವ ದೂರದ ಪರಿವೆಯಿಲ್ಲದೆ?
ಆಸೆಗಳು ಗರಿಕೆದರಿ
ಕುಣಿದಷ್ಟು ಮಾತ್ರಕ್ಕೆ
ಸ್ವತಃ ತಾನೇ ಕುಣಿದಂತಾಗುವುದಿಲ್ಲ
ನೆನಪಿನ ಬುತ್ತಿಯಲ್ಲಿ
ಆಸೆಗಳೇ ಹೆಚ್ಚಾಗಿ
ಅನುಭವಗಳು ಕಡಿಮೆಯಾದಾಗ
ಕಲ್ಪಿಸಿಕೊಳ್ಳುವುದರಲ್ಲೇ
ಹೆಚ್ಚಿನ ತೃಪ್ತಿಯನ್ನು
ಕಂಡುಕೊಳ್ಳುತ್ತಾನೆ ಭಾವುಕ!
ಕವಿ!
ಕವಿಯೊಬ್ಬ
ಬತ್ತದ ಭಾವನೆಗಳ ಸರದಾರ
ಬಗೆ ಬಗೆಯ ಪದಗಳ
ತನ್ನಿಷ್ಟದಂತೆ ಬಳಸಿ
ಸುಂದರ ದೃಶ್ಯಗಳ
ಚಿತ್ತಾರ ಮೂಡಿಸುವ
ಕಲೆಗಾರ!
ಬಳುಕು ಸ್ವರಗಳನು
ತನ್ನ ಕಾವ್ಯ ಕನ್ನಿಕೆಯಲಿ
ಮೇಳೈಸುತ
ಅಂದ ಚಂದಗಳ
ವರ್ಣಿಸುತ
ಕಲ್ಪನಾ ಸಾಮ್ರಾಜ್ಯದಲಿ
ಮೆರೆವ ಚಕ್ರವರ್ತಿ!
ನಕ್ಕು ಬಿಡು ಗೆಳತಿ!
ನಕ್ಕರೆ ಹಲ್ಲು ಕಾಣುವುದೆಂಬ
ಅಂಜಿಕೆಯೇತಕೆ ನಿನಗೆ, ನಕ್ಕು ಬಿಡು ಗೆಳತಿ
ಮತ್ತೊಮ್ಮೆ ಬಾರದಿರಬಹುದು ಈ ನಗು
ಈ ಜಾಗ ಇಂದಿನಂತೆ ನಾಳೆ ಇರಲಾರದು
ಇಂದಿನ ಸುಂದರ ಕ್ಷಣಗಳೇ
ನಾಳಿನ ಸುಂದರ ಸಿಹಿ ನೆನಪುಗಳು
ನಗುವನ್ನು ನಾಳೆಗೆಂದು ಕಾದಿಟ್ಟವರು
ಯಾರೂ ಇಲ್ಲ
ನಾಳೆಗಳ ನಲಿವಿನ ಕ್ಷಣಗಳನು ನೆನೆಯುತಾ
ಇಂದಿನ ನಗುವನ್ನು ಕಳೆದುಕೊಳ್ಳಬೇಡ
ಇಂದಿನ ಮತ್ತು ನಾಳೆಯ ನಗುಗಳೆರಡನೂ
ಹೊಂದುವ ಭಾಗ್ಯ ನಿನದಾಗಲಿ
ನಗು ನಕ್ಕಷ್ಟೆ ಇಮ್ಮಡಿ ನೂರ್ಮಡಿಯಾಗಬಲ್ಲದು
ನಗು ಬಂದಾಗ ಮನಬಿಚ್ಚಿ ನಕ್ಕು ಬಿಡು
ಅದುವೇ ಮಾನವನ ಸಹಜ ಧರ್ಮ!
ನಲ್ಲೆ - ಮಲ್ಲೆ
ಮೈಸೂರು ಮಲ್ಲಿಗೆಯ
ಕಂಪು ಮುದದಿಂ ತೇಲಿ ಬರುತಿರೆ
ನಿನ್ನ ನೆನಪಾಯಿತು ನಲ್ಲೆ
ಶಾಂತ ಸೊಬಗಿನ
ನಗುವ ಮಲ್ಲಿಗೆಯೊಲು
ನೀ ನಗುತ ಬರಲಿಲ್ಲವೇಕೆ?
ನಲ್ಲೆ ನಿನಗೆಂದು
ನನ್ನೆಷ್ಟೋ ಆಸೆಗಳನ್ನು ಕೇಂದ್ರೀಕರಿಸಿ
ಸುಂದರ ಪದಗಳನು ಪೋಣಿಸಿ
ಮುದ್ದಿಸಿ ಬರೆದಿರುವೆ ಕವನಗಳನು
ಸ್ವೀಕರಿಸುವೆಯಾ!
ಅಘಾತ
ಆಕಸ್ಮಿಕವಾಗಿ ಕಂಡ
ನಿನ್ನ ಮಿಂಚು ಮುಗುಳ್ನಗೆ
ಬಯಸಿ ಪಡೆದಾಗ
ಕಾದಿತ್ತು ಎನಗೆ ಅಘಾತ
ನಿನ್ನ ದಂತಪಂಕ್ತಿಯ
ಅಗಾಧ ಪ್ರಪಾತ ಕಂಡು!
ಕಾರ್ ಮೋಡ
ಗೆಳೆತಿ
ನೀನು ಎಷ್ಟೊಂದು ಸುಂದರ
ಆದರೆ...
ನಾನು ನಿನ್ನನ್ನು ವರ್ಣಿಸಲು ಆಗದಂತೆ
ಸದಾ ಕಾರ್ ಮೋಡ ಮುಸುಕಿದಂತೆ
ಕಪ್ಪಗಿರುವೆಯಲ್ಲಾ! ಏಕೆ!
ನಲ್ಲೆಗೆ ನಲ್ಲ ಕೊಟ್ಟ
ಆಶ್ವಾಸನೆ
ಅವಳೆಲ್ಲಾ ಆಸೆಗಳನು ಈಡೇರಿಸುವೆನೆಂದು
ಆದರೆ...
ಅವನು ಕೊಂಡ ಲಾಟರಿ ಚೀಟಿ
ಅವನ ಆಸೆಯನ್ನು ಈಡೇರಿಸಲಿಲ್ಲಾ!
ಬಳ್ಳಿಗೆ ಮರದ ಆಸರೆ
ನಿಜ!
ಆದರೆ...
ಬಳ್ಳಿ ಚೆನ್ನಾಗಿ ಹಬ್ಬಿ ಬೆಳೆದು
ತನ್ನೆಲ್ಲಾ ಎಲೆ ಮತ್ತು ಹೂವುಗಳಿಂದ
ಮರವನ್ನು ಬಾಚಿ ತಬ್ಬಿ ನಿಂತಾಗ
ಮರಕ್ಕೆ ತನ್ನ ಅಸ್ತಿತ್ವವೆಲ್ಲಿ?
ನಮ್ಮೀ ದಾಂಪತ್ಯದ
ಬೆಳ್ಳಿ ಹಬ್ಬದ ಸಂಭ್ರಮದಲಿ
ಪರಿಪೂರ್ಣ ಜೀವನದ
ಕನಸುಗಳನು ಹೆಕ್ಕುತ್ತಾ
ಜೀವನದ ಹಾದಿ ಸವೆಸುತ್ತಾ
ಭಾವನೆಗಳ ಸಂವೇದನೆಯಲಿ
ಸಾರ್ಥಕತೆಯ ಹಂಗಿನಲಿ
ನೋವುಗಳ ಸವಿಯಾಗಿರಿಸಿ
ನೆನಪುಗಳ ಭಾರವಾಗಿಸಿ
ರೂಪಿಸಿಕೊಂಡ ಬದುಕು
ನನ್ನ ಮಟ್ಟಿಗೆ ವಿಶೇಷ ಎಂದಾದರೆ
ಇದಕ್ಕೆ ಮಿಗಿಲಾದ
ವಿಶೇಷತೆ ಮತ್ಯಾವುದು?
ನಮ್ಮೀ ದಾಂಪತ್ಯದ
ಬೆಳ್ಳಿ ಹಬ್ಬದ ಸಂಭ್ರಮದಲಿ
ಪರಿಪೂರ್ಣ ಜೀವನದ
ಕನಸುಗಳನು ಹೆಕ್ಕುತ್ತಾ
ಜೀವನದ ಹಾದಿ ಸವೆಸುತ್ತಾ
ಭಾವನೆಗಳ ಸಂವೇದನೆಯಲಿ
ಸಾರ್ಥಕತೆಯ ಹಂಗಿನಲಿ
ನೋವುಗಳ ಸವಿಯಾಗಿರಿಸಿ
ನೆನಪುಗಳ ಭಾರವಾಗಿಸಿ
ರೂಪಿಸಿಕೊಂಡ ಬದುಕು
ಪೂರ್ಣವೋ ಪರಿಪೂರ್ಣವೋ
ಶೇಷ ಜೀವನದಲಿ
ಕುಡಿಗಳು ನಮ್ಮ ಆಸೆಗಳನು
ವೈಭವಿಸಿ ಮನ ನಲಿಸುವ ಜೀವನವೇ
ಪರಿಪೂರ್ಣವಲ್ಲವೇ...
ಮಧುರಾನುಭವಗಳ
ನೆನಪುಗಳನು ಹೊತ್ತು
ಜೋಡಿಯಾದ ಜೀವಗಳ
ಮಧುರ ನೆನಪೇ
ಸಿಹಿ ವಾರ್ಷಿಕೋತ್ಸವ!
೧.
ಗೆಳತಿ ನಿನ್ನ ಕಂಗಳ
ತುಂಬಾ ನೂರಾರು ತರಂಗಳು
ಹೊರ ಹೊಮ್ಮಲಿ ಬಿಡು
ಒಲುಮೆಯ ಸಂಕೇತಗಳು
ನಾ ಕಾದಿರುವೆ ಬೆಸೆಯಲು
ಗಾಢಪ್ರೇಮದ ತಂತುಗಳು!
೨. ಗೆಳತಿ ನಿನ್ನ ಕಂಗಳ
ತುಂಬಾ ನೂರಾರು ತರಂಗಳು
ಹೊರ ಹೊಮ್ಮಲಿ ಬಿಡು
ಒಲುಮೆಯ ಸಂಕೇತಗಳು
ನಾ ಕಾದಿರುವೆ ಬೆಸೆಯಲು
ಗಾಢಪ್ರೇಮದ ತಂತುಗಳು!
ಗೆಳತಿ ನಿನ್ನ ನಾಸಿಕ
ಮೆಚ್ಚಿದ ರಸಿಕ ನಾ
ಕರಗಲಿ ಬಿಡು
ಎನ್ನ ಮನ
ನಿನ್ನ ಬಿಸಿಯುಸಿರಿನಲಿ
ನಾನಿರಲಾರೆ ನಿನ್ನ ವಿನಾ!
೩.
ಗೆಳತಿ ನಿನ್ನ ಅಧರಗಳ
ತುಂಬಾ ಮಕರಂದ
ಮೊಗೆದುಕೊಳಲು ಬಿಡು
ಮನದಾಸೆಯ ತುಂಬಾ
ಆಸೆಗಳು ಬರಿದಾಗದು
ಈ ಜೀವನದ ತುಂಬಾ!
೪.
ಗೆಳತಿ ನಿನ್ನ ಗಲ್ಲ
ದೇಸಿ ತಾಟಿ ಬೆಲ್ಲ
ಎನಗೆ ಹಂಚಿ ಬಿಡು
ಆ ಸಿಹಿಯ
ಬಲ್ಲವನಲ್ಲವೇ
ಈ ಮಲ್ಲ!
ಗೆಳತಿ ನಿನ್ನ ಕೆನ್ನೆಗಳು
ಬಲು ನುಣುಪು
ಜಾರಿಕೊಳಲು ಬಿಡು
ಆ ಚಿಕ್ಕ ಗುಳಿಗಳಲಿ
ನಗುತ ನಲಿಯುತಾ
ನಲ್ಮೆಯ ಸಿರಿಯಲಿ!
೬.
ಗೆಳತಿ ನಿನ್ನ ಕಿರುನಗೆ
ಆಸರೆ ಎನಗೆ
ಹಬ್ಬಿಕೊಳಲು ಬಿಡು
ಮೈಮನಗಳಲಿ
ನವ ವಸಂತಕೆ ಬಿರಿಯಲಾರೆನೆ
ಸಾವಿರ ಹೂನಗೆ!
೭.
ಗೆಳತಿ ನಿನ್ನ ಮುಂಗುರುಳು
ಹೊಂಗನಸಿನುಂಗುರಗಳು
ತೊಡಿಸಲು ಬಿಡು
ನೀಳ ಬೆರಳಿಗೆ
ನಿನಗೆಂದೇ ಮುಡಿಪಿಟ್ಟ
ಬಂಗಾರದ ಬಾಳ್ವೆಗೆ!
ಗೆಳತಿ ನಿನ್ನ ಕಿರುನಗೆ
ಆಸರೆ ಎನಗೆ
ಹಬ್ಬಿಕೊಳಲು ಬಿಡು
ವಸಂತ ವಸಂತದಲಿ
ಮೈಮನವರಳಿಸಿ
ನಗುವ ಹೂವಾಗುವೇ!
ಗೆಳತಿ ನಿನ್ನ ಕುರುಳು
ಹರಳು ಮಲ್ಲಿಗೆಯ ಬೀಡು
ಆರಿಸಿಕೊಳಲು ಬಿಡು
ಗೆಳತಿ ನಿನ್ನ ಕುರುಳಲ್ಲಿ
ಕಂಪಿಡುವ ಮಲ್ಲಿಗೆ ಮೊಗ್ಗುಗಳು
ಆಸ್ವಾದಿಸುವ ರಸ ಋಷಿಗಳಿಗೆ
ಅದ್ಭುತ ಹೂವುಗಳು
ಕಾಡುವ ಕನಸಿನ ಮಧು ಪೆಗ್ಗುಗಳು
ದುಂಬಿಗಳಿಗೆ
ಅರಳಲಿ ಬಿಡು
ದುಂಬಿಗಳ ಸೆಳೆವ
ಒಡನಾಟಕೆ
ನನ್ನ ೧
ಬಾ ಚೆಲುವೆ
ಮುಡಿವ
ಗೆಳತಿ ನಿನ್ನ ಮುಂಗುರುಳು
ಕವಿ ಕಾಂತಿಯ ಉಂಗುರಗಳು
ತೊಡಿಸಲು ಬಿಡು
ನೀಳ ಬೆರಳಿಗೆ
ನಿನಗೇ ಮುಡಿಪಿಟ್ಟಬಂಗಾರದ ಬಾಳ್ವೆಗೆ!
ಗೆಳತಿ ನಿನ್ನ ಮುಂಗುರುಳು
ರವಿ ಕಾಂತಿಯ ಉಂಗುರಗಳು
ನೀಳಬೆರಳಿಗೆ ತೊಟ್ಟು ಬಿಡು
ಹೊಳೆವ ಬಂಗಾರದ ಬಾಳ್ವೆಗೆ
ನಾ ಮುಡಿಪಿಡುವೆ
ಈ ಚೆಂದದ ಬಾಳು!
ನಡೆದಂತೆ ಇರುವೆಗಳು
ಸಾಲು ಸಾಲಾಗಿ ಒಂದರ ಹಿಂದೊಂದು
ಮಗದೊಂದು
ಸಿಹಿಯೋ, ಸತ್ತ ದುಂಬಿಯೋ
ಅವಕಾಶಗಳ ಹಿಂಬಾಲಿಸಿ ನಡೆವ
ರೀತಿಯೇ ಸೊಬಗು
ನಾಳೆಗಾಗಿ ಇಂದೇ ದುಡಿ
ನಿರಾಶೆಯ ಮನದಿಂದ ದೂಡಿ
ಬಾರದಿಹುದೇ, ತೀರದಿಹುದೇ
ಜೀವನವಿದು ನಿರಂತರ
ಆಸೆ-ನಿರಾಶೆಗಳು ಸಾಲು ಸಾಲು
ಕಟ್ಟಿದರಮನೆಗಳು ಛಿದ್ರ ಛಿದ್ರ
ಆದರೂ ಮತ್ತೊಂದ ಕಟ್ಟುವ
ಆಸೆಗಳು ಹುಟ್ಟುವುದೇ ಹೀಗೆ
ಹಾಗೆ ಸುಮ್ಮನೆ...
ಕರ್ಮಫಲವ ಮೀರಿದವನೇ
ಕಾಯಕ ಯೋಗಿ?
ನನ್ನೀ ಬೆರಳುಗಳು ಎಂಜಲಾಗಿವೆ ...
ದಿನವೆಲ್ಲಾ ಈ ಚಿಕ್ಕ ಪರದೆಯ
ಮೇಲೆ ಬೆರಳಾಡಿಸಿ
ಅರ್ಥಂಪರ್ಥವಿಲ್ಲದ ಜೋಕಿಗೆ
ನಗುಬಾರದ ನಗು ನಕ್ಕು
ಯಾರದ್ದೋ ಎಂಜಲು ಸುದ್ದಿ ಮಜಲುಗಳ ಹೆಕ್ಕಿ
ಹೇಸಿಗೆಯೆನಿಸುವ
ನೂರಾರು ಸಂಗತಿಗಳಲಿ ಮನ ತೊಡಗಿಸಿ
ಮಾಡುತ್ತಿರುವ ವ್ಯರ್ ರ್ಥ - ಅನರ್ಥ ಜೀವನ
ಎಂಜಲಾಗಿದೆ... ನುಂಗಲಾರದ ತುತ್ತಾಗಿದೆ
ಈ ಸಾಮಾಜಿಕ ಜಾಲ!
ನನ್ನೀ ಬೆರಳುಗಳು ಎಂಜಲಾಗಿವೆ ...
ದಿನವೆಲ್ಲಾ ಈ ಚಿಕ್ಕ ಪರದೆಯ
ಮೇಲೆ ಬೆರಳಾಡಿಸಿ
ಹಳಸಿದ, ಎಂಜಲು ಸುದ್ದಿ ಮಜಲುಗಳ ಹೆಕ್ಕಿ
ನಿಜವೋ ಸುಳ್ಳೋ ತಿಳಿಯದೇ
ಅರ್ಥಂಪರ್ಥವಿಲ್ಲದ ಜೋಕಿಗೆಲ್ಲಾ
ನಗುಬಾರದ ನಗು ನಕ್ಕು
ಹೇಸಿಗೆಯೆನಿಸುವ
ನೂರಾರು ಸಂಗತಿಗಳಲಿ ಮನ ತೊಡಗಿಸಿ
ಮಾಡುತ್ತಿರುವ ವ್ಯರ್ ರ್ಥ - ಅನರ್ಥ ಜೀವನ
ಎಂಜಲಾಗಿದೆ...
ನುಂಗಲಾರದ ತುತ್ತಾಗಿದೆ
Kalasumelogara
ಈ ಸಾಮಾಜಿಕ ಜಾಲ!
ಅಲ್ಲಿರುವವರೆಲ್ಲಾ ಅನುಭವಿಸಿದವರಲ್ಲವೇ
ರತಿ-ಮನ್ಮಥರಲ್ಲವೇ
ನಮ್ಮ ಸಂಸೃತಿಯ ಬಿಂಬಗಳಲ್ಲವೇ
ಆ ನಗ್ನ ಶಿಲ್ಪಗಳು
ಅತಿ ಸುಂದರ ಎಂತಲೂ ಹೇಳಲಾಗದೇ
ಮುಜುಗರದ ಪರಾಕಾಷ್ಠೆಯ ನಡುವೆ
ಬಾಯಿಬಿಟ್ಟು ನೋಡುತ್ತಾ ನಿಂತೆ
ಅರ್ಥವಾಗಲಿಲ್ಲ ಹಲವು
ನಾವು
ಮೊನ್ನೆಯಷ್ಟೇ ಬಟ್ಟೆಯುಟ್ಟು
ನಿನ್ನೆಯಷ್ಟೇ ನಾಗರಿಕತೆಯ ಕಲಿತು
ಮಡಿವಂತಿಕೆಯ ಸೋಗು ಹಾಕಿ
ಮನುಕುಲವ ಬೆಳೆಸಿದವರಲ್ಲವೇ!
ಹಾಗೆಯೇ ನೋಡುತ್ತಾ ನಿಂತೆ
ಎಂತಹಾ ಸೊಗಸು
ಅಹಹಾ ಎಂತಹಾ ಭಾಗ್ಯ
ಸ್ವತಃ ವಾತ್ಸಾಯನನೇ ಹೇಳಿಕೊಟ್ಟಂತೆ
ಸೂತ್ರಕ್ಕನುಗುಣ
ಚಾಚೂ ತಪ್ಪದಾ ಅನುರಣನ!
ರತಿ-ಸುರತಿ, ಮನ್ಮಥ-ಮದನ ಮೋಹನ
ಲಜ್ಜೆ-ನಿರ್ಲಜ್ಜೆಯ ತೆಳು ನಿರ್ಬಂಧದ ನಡುವಿನ
ಶೃಂಗಾರ ಕಾವ್ಯವಿದಲ್ಲವೇ
ಪ್ರಕೃತಿ ಪುರುಷನ ಮಿಲನ ಮಹೋತ್ಸವ
ಶಿಲ್ಪಕಲೆಯ ವರ್ಣಾನಾತೀತ
ಕಲ್ಪನಾ ಸಂವಹನ!
ಗೆಳತೀ ನಿನ್ನ ಕುರುಗಳಲ್ಲಿ
ಕಂಪಿಡುವ ಮಲ್ಲಿಗೆ ಮೊಗ್ಗುಗಳು =
೧. ಹಸಿದ ಕಂಗಳಲ್ಲಿ
ಮತ್ತೇರಿಸುವ ಮಧು ತುಂಬಿದ ಪೆಗ್ಗುಗಳು;
೨. ಕಾಡುವ ಕನಸುಗಳಲ್ಲಿ
ತಡಕಾಡುವ ಖಾಲಿ ಜಗ್ಗುಗಳು ;
೩. ಮಾಗಿಯ ಚಳಿಯಲ್ಲಿ
ಬೆಚ್ಚಗಿಡುವ ರಗ್ಗುಗಳು!
ಗೆಳತೀ ನಿನ್ನ ಕುರುಗಳಲ್ಲಿ
ಕಂಪಿಡುವ ಮಲ್ಲಿಗೆ ಮೊಗ್ಗುಗಳು
ಹಸಿದ ಕಂಗಳಲ್ಲಿ
ಮತ್ತೇರಿಸುವ ಮಧು ತುಂಬಿದ ಪೆಗ್ಗುಗಳು;
ಕಾಡುವ ಕನಸುಗಳಲ್ಲಿ
ತಡಕಾಡುವ ಖಾಲಿ ಜಗ್ಗುಗಳು;
Comments