ಜೀವ ಕೊಡುವ
ಮಳೆಯು ಜಿನುಗುತ್ತಿದೆ
ಭಾವನೆಗಳು ಬಯಲಾಗುತ್ತಿವೆ
ಕಂಗಳು ದಣಿಯುವಷ್ಟು ದೂರ
ಹಸಿರೋ ಹಸಿರು... ಗಿರಿ-ವನ-ಕಂದಕಗಳು
ನೋಡ ನೋಡುತ್ತಲೇ
ಎಲ್ಲವೂ ಮಟಮಾಯ
ಯಾರೋ ಪರದೆಯೆಳೆದಂತೆ
ಶುದ್ಧ ಬಿಳಿಯ ಮಂಜು...
ಇಳಿಬಿಟ್ಟ ತೋರಣದಂತೆ
ಮುತ್ತುಗಳು ಜಾರುತ್ತಿವೆ
ಒಂದೊಂದೇ ಅಂಗಳದ ಮುಂದೆ
ನಮ್ಮ ಕಿವಿಗಿಂಪಾಗಿಸಿದೆ
ಟಪ ಟಪ ಸದ್ದು
ನಿಂತ ನೀರ ಮೇಲೆ ನಿರಂತರ
ವರ್ತುಲಗಳ ಚಿತ್ತಾರ ಮಾತ್ರ
ಕಣ್ತುಂಬಿಸಿ ಮತ್ತೆಲ್ಲ ವಿಶಾಲ ನೋಟ
ಮುಸುಕಾಗಿಸಿ ಕವಿದ ಮಂಜು
ಸೃಜಿಸಿದ ಪವಾಡ ಸದೃಶ ಕ್ಷಣಗಳ
ನೆನೆಯುತ ನಾ ಬರೆದ ಚಿತ್ರಣವಿದು!
ಮರಳಿ ಬಾರದ ಬಾಲ್ಯದ
ನೆನಪಿನ ಹಂಗ್ಯಾಕೆ
ತಿಳಿಯಾಗಿಸೇ ಮನವ
ನಲಿಯುವುದು ಈ ಜೀವ -
ನಲಿಸುವುದು ಎಲ್ಲರನು
ಮಗುವಿನಂತೆ ಮನವಿಟ್ಟು
ಕುಣಿದು ತಣಿದು ನಲಿದೊಡೆ
ವಯಸೆಂಬುದು
ಕೇವಲ ಎಣಿಕೆಯ
ಸಂಖ್ಯೆ ಆಗದೆ ಮುಪ್ಪಡರುವುದೇ
ಕಷ್ಟ-ಸುಖ-ದುಃಖಗಳ
ಮನನ ಮಾಡದೆ
ಪಾಲಿಗೆ ಬಂದಂತೆ ಸ್ವೀಕರಿಸಿ
ಪರಿಪೂರ್ಣ ಜೀವನ ನಡೆಸಿ
ಕಾಲಾಯ ತಸ್ಮೈ ಎಂದರಾಗದೇ?
ದಿನದ ಕೆಲಸ ಮುಗಿಸಿ
ಮನೆಗೆ ಹಿಂತಿರುಗುತ್ತಿದ್ದೆ
ಕಟ್ಟೆಯ ಮೇಲಿನ ಮರದ ಕೆಳಗೆ
ಕತ್ತರಿಸಿದ ತೆಂಗಿನ ಗರಿಗಳು
ಒಣಗಿದ ಬೊಂಬು, ಧೂಳಿಡಿದ ಮಡಕೆಗಳು
ಯಾರ ವ್ಯಾಪಾರಕ್ಕೊ ಸಂಸ್ಕಾರಕ್ಕೋ
ಕಾದು ಕಾದು ದಿನಕಳೆದಂತಿತ್ತು
ಮರು ದಿನವೂ ಅದೇ ದಾರಿಯಲ್ಲಿ
ಮನೆಗೆ ಹಿಂತಿರುಗುವಾಗ ಅಲ್ಲಿ ನೋಡಿದೆ
ಗರಿಗಳು ಹಾಗೆಯೇ ನಿಂತಿದ್ದವು
ತುಸು ವಾಲುತ್ತಾ - ತನ್ನ ಬಣ್ಣ ಕಳೆದುಕೊಳ್ಳುತ್ತಾ
ಒಹೋ ನಿನ್ನೆ ಬಿಕರಿಯಾಗಲಿಲ್ಲ
ಯಮಧೂತರಿಗೆ ಬಿಡುವಿದ್ದಿರಬಹುದು
ಜೀವವೊಂದು ಉಳಿಯಿತೆಂದುಕೊಂಡೆ
ದಿನದಿನವೂ ವ್ಯಾಪಾರ ನಡೆಯಲೇಬೇಕಲ್ಲಾ
ಜಿಡ್ಡುಗಟ್ಟಿದ ದೇಹವೊಂದು ಕುಕ್ಕರಿಸಿ ಕುಳಿತು
ಸಣಕಲು ಕೈಗಳಿಂದ ಮತ್ತೊಂದು ಗರಿಗಳ ಹೆಣೆಯುತ್ತಿತ್ತು
ಪಯಣ ಮುಗಿಸಿದವನೊಬ್ಬ
ಪಯಣ ಸಾಗಿಸುತ್ತಿರುವವನೊಬ್ಬ
ಸಾಗಿದೆ ಜೀವನ-ಯಾನ ಎನಿಸಿತ್ತು...
ಈ ಹಗಲು ಕನಸುಗಳಿಗೇಕೆ
ಬೇಕು ನಿದ್ದೆ
ಬೆಳಗು-ರಾತ್ರಿಗಳ ಪರಿವೆಯಿಲ್ಲದೇಆಕಾಶದೆತ್ತರಕ್ಕೆ ಚಿಮ್ಮುವಆಸೆಗಳಿಗೆ ಅದ್ಯಾವ ಅಂಕೆಸದಾ ಮೊರೆಯುವ ಕಡಲಲೆಗಳುಬೆಟ್ಟ ಬಯಲುಗಳ ಮೀರಿಎಲ್ಲ ಎಲ್ಲೆಯ ದಾಟಿನಿಸ್ಸತ್ವ ಮನಗಳಲ್ಲೂ ಸಾರ ತುಂಬಿಮೊಳಕೆಯೊಡೆದು ಪುಟಿದೇಳುತ್ತಾಹಸಿರು-ಉಸಿರು ತುಂಬಿಗಾಳಿ-ಬಿರುಗಾಳಿಗೆ ಬಳುಕಿಪ್ರಖರ ಬೆಳಕಿನ ಧಾಟಿಯನ್ನೂ ನಿಗ್ರಹಿಸಿ
ಇಂದೋ ನಾಳೆಯೋಹಾರಿಬರುವ ದುಂಬಿಯ ಸ್ಪರ್ಶಕೆಜೀವ ನಲಿದು ಬಸಿರಾಗಿಹೂಬಿಟ್ಟು ಮನವರಳಿಸಿ ನಲಿವಕನಸುಗಳಿಗೇಕೆ ಬೇಕು ನಿದ್ದೆ?
Comments