೧.
ನೀ ಎದುರಿಗೆ ಬಂದಾಗನೋಟ ಎದುರಿಸದಾದೆ
ತಲೆತಗ್ಗಿಸಿ ತುಟಿಯಮೇಲೆ
ತಂದುಕೊಂಡ ನಗೆಯನ್ನು
ನಿನ್ನ ತುರುಬಿನಲ್ಲಿಟ್ಟ ಮಲ್ಲಿಗೆಗಳು ನೋಡಿ ಅಣಕಿಸಿವೆ.
ಆ ಅನುಭೂತಿಯನ್ನು
ನಾನೆಂತು ತಲುಪಿಸಲಿ ಆಕೆಗೆ
ಶುದ್ಧ ಬಿಳಿಯ ಹರಳುಗಳೇ
ನಿಮ್ಮಂದ-ಸುವಾಸನೆಗಳಿಂದ
ನನ್ನೊಲುಮೆಯ ಪಸರಿಸಬಾರದೇ?
೨.
ನಿಮ್ಮಂದ-ಸುವಾಸನೆಗಳಿಂದ
ನನ್ನೊಲುಮೆಯ ಪಸರಿಸಬಾರದೇ?
೨.
ನೀ ಎದುರಿಗೆ ಬಂದಾಗ
ಭಾವನೆಗಳ ತಡೆಯದಾದೆ
ತಳಮಳಿಸಿ ಲಯ ತಪ್ಪಿದ
ಹೃದಯದ ಬಡಿತವ
ನಿನ್ನ ದಾವಣಿ ಕಂಡು ಅಣಕಿಸಿದೆ.
ಈ ಅನುಭೂತಿಯನ್ನು
ಭಾವನೆಗಳ ತಡೆಯದಾದೆ
ತಳಮಳಿಸಿ ಲಯ ತಪ್ಪಿದ
ಹೃದಯದ ಬಡಿತವ
ನಿನ್ನ ದಾವಣಿ ಕಂಡು ಅಣಕಿಸಿದೆ.
ಈ ಅನುಭೂತಿಯನ್ನು
ನಾನೆಂತು ತಲುಪಿಸಲಿ ಆಕೆಗೆ
ತಿಳಿ ನೀಲಿ ರೇಶಿಮೆಯೇನಿನ್ನ ನವಿರು-ನುಣುಪುಗಳಿಂದ
ನನ್ನೊಲುಮೆಯ ಮುದಗೊಳಿಸಬಾರದೆ?
೩.
ನನ್ನೊಲುಮೆಯ ಮುದಗೊಳಿಸಬಾರದೆ?
೩.
ನೀ ಎದುರಿಗೆ ಬಂದಾಗ
ಮೈ ಮಾಟವ ಹೊಗಳದಾದೆ
ಅಳತೆ ಮೀರದ ಅಂದಕೆ
ಮೈ ಮಾಟವ ಹೊಗಳದಾದೆ
ಅಳತೆ ಮೀರದ ಅಂದಕೆ
ಪುಳಕಿತಗೊಂಡ ಮನವ
ನಿನ್ನ ಸೊಂಟದ ಡಾಬು ಕಂಡು ಅಣಕಿಸಿದೆ.
ನಿನ್ನ ಸೊಂಟದ ಡಾಬು ಕಂಡು ಅಣಕಿಸಿದೆ.
ಮರೆಯಲಾಗದ ಈ ಅನುಭೂತಿಯನ್ನು
ನಾನೆಂತು ತಲುಪಿಸಲಿ ಆಕೆಗೆ
ವೈಯ್ಯಾರದ ಬಂಗಾರವೇನಿನ್ನ ಹೊಳಪು-ಒನಪುಗಳಿಂದ
ನನ್ನೊಲುಮೆಯ ತಿಳಿಸಬಾರದೇ?
ನನ್ನೊಲುಮೆಯ ತಿಳಿಸಬಾರದೇ?
೪.
ನೀ ಎದುರಿಗೆ ಬಂದಾಗ
ನಿಂತು ಮಾತನಾಡಿಸದಾದೆ
ನಿಂತು ಮಾತನಾಡಿಸದಾದೆ
ಕಳೆದುಕೊಂಡ ಅವಕಾಶಗಳ
ನೆನೆದು ಹಿಂಬಾಲಿಸದ ಕಾಲುಗಳನು
ನಿನ್ನ ಕಾಲ್ಗೆಜ್ಜೆಗಳು ನೋಡಿ ಅಣಕಿಸಿದೆ.
ನೆನೆದು ಹಿಂಬಾಲಿಸದ ಕಾಲುಗಳನು
ನಿನ್ನ ಕಾಲ್ಗೆಜ್ಜೆಗಳು ನೋಡಿ ಅಣಕಿಸಿದೆ.
ಈಗೇನು ಮಾಡಲಿ, ನನ್ನೊಲವ
ಹೇಗೆ ತಲುಪಿಸಲಿ ಆಕೆಗೆ
ಬೆಳ್ಳಿ ಕಿರುಗೆಜ್ಜೆ ಚುಕ್ಕಿಗಳೇ
ನಿಮ್ಮ ಲಯಬದ್ಧ-ನಾದಗಳಿಂದ
ನನ್ನಲುಮೆಯ ಪಿಸುಗುಟ್ಟಬಾರದೇ?
ಬೆಳ್ಳಿ ಕಿರುಗೆಜ್ಜೆ ಚುಕ್ಕಿಗಳೇ
ನಿಮ್ಮ ಲಯಬದ್ಧ-ನಾದಗಳಿಂದ
ನನ್ನಲುಮೆಯ ಪಿಸುಗುಟ್ಟಬಾರದೇ?
Comments