ಹೀಗೆ ಸಮಯ ಜಾರುತ್ತಿದೆ 
ನಿರಾಡಂಬರವಾಗಿ
ಕಲ್ಪನೆಗಳೇ ಕನಸುಗಳಾಗಿ
ಕನಸುಗಳು ನನಸುಗಳಾಗಿ  
ಸಮಯಾಸಮಯಗಳ 
ಕಾಲದ ನಡಿಗೆಯಲ್ಲಿ 
ಮರೆತರು ಮರೆಯಲು ಬಿಡದ 
ಕಳಚಿಟ್ಟ ಗಡಿಯಾರಗಳು 
ನಿದ್ದೆಗೆ ಜಾರಿವೆ 
ಯಾವುದೋ ನಿರ್ಭರತೆಯಲ್ಲಿ 
ಕಳೆದ ಕಾಲದ ಸೊಗಡು 
ನಾಳೆಯೆನ್ನುವ ಕಲ್ಪನೆಗಳ 
ಕನಸಿಗೆ ಜಾರಿದೆ!


ಹೀಗೊಂದು ಸಂದೇಶ: 
    ದುಬಾರಿ ಜಂಬದಚೀಲದಲ್ಲಿ ಏನೊಂದು ಇಲ್ಲಾ  
    ಸಣ್ಣ ಕೈಚೀಲದಲ್ಲಿ ಎಷ್ಟೊಂದು ಖಾಜಾ 
ಅಹಹಾ! ಎಂತಾ ಮಾತು!
ತಂತಮ್ಮ ಸ್ವಂತಿಕೆಯ ಜೀವಿಸಿ 
ಅನುಭವಿಸೆ ಮನವಿರಬೇಕಷ್ಟೇ 
ಯಾರ ಮೆಚ್ಚಿಸಲೋ ಈ ನಾಟಕ 
ಬಣ್ಣ ಕಳಚಿದರಷ್ಟೇ 
ಪರಮ ಸುಖವಿಹುದೆಂಬ
ಸಂಗತ ಮೂಡಿಸಿತೆನೆಗೆ 
ಬಂದ ಭಾಗ್ಯದ-ಭೋಗ 
ಅನುಭವಿಸೆ ಸಾಕಲ್ಲವೇ 
ಈ ಜನುಮ!



ಯಾರೋ ದಾಸ 
ಹಾಡಿದ್ದೇ ಹಾಡಿದಂತೆ 
ದಿನವೂ ಅದೇ ಸಂದೇಶಗಳು 
ಅಸಭ್ಯ ಜೋಕುಗಳು 
ಜನರ ಮೆಚ್ಚಿಗೆ ಪಡೆಯಲು 
ಕಳಚಿದ ವಸ್ತ್ರಗಳು 
ಕಾಫಿಯಲ್ಲಿ ಬಿದ್ದ 
ನೊಣ ಮುಳುಗುವ ಮುನ್ನ 
ಪ್ರಪಂಚಕ್ಕೆಲ್ಲಾ ತೋರಿಸಿ 
ಸತ್ತ ನೊಣದ ಕಾಫಿಯ 
ರುಚಿಯ ಸವಿಯುವ 
ಮೋಹ ಈ
ಶತಮಾನದ ಸಾಧನೆ!
ನಮ್ಮ ಪುರೋಗತಿಗೆ ಹಿಡಿದ ಕನ್ನಡಿ!
ಅವನತಿಯ ದ್ವಂದ್ವ!


 


Comments

Popular posts from this blog

Gelati!