ನವಿಲು ನೋಡಿ
ಕೆಂಭೂತ ಕುಣಿಬಾರದಂತೆ
ಕುಣಿಯಲಾಗದೆ ಕುಳಿತೆ
ಇಡೀ ಜಗ ಕುಣಿದು ನಲಿಯಿತು!
ಕೆಂಭೂತ ಕುಣಿಬಾರದಂತೆ
ಕುಣಿಯಲಾಗದೆ ಕುಳಿತೆ
ಇಡೀ ಜಗ ಕುಣಿದು ನಲಿಯಿತು!
ಶೆಟ್ಟಿ ಶೃಂಗಾರ ಆಗೋದ್ರಲ್ಲಿ
ಪಟ್ಟಣ ಹಾಳಾಯ್ತತಂತೆ
ದುಬಾರಿ ಬಟ್ಟೆ ಉಡಲಿಲ್ಲಾ
ಜಗವೆ ನಾಚಿಕೊಂಡಿತು!
ಅತಿ ಆಸೆ
ಗತಿ ಕೇಡಂತೆ
ಬಂದದ್ದು ಸಾಕೆಂದುಕೊಂಡೆ
ಜಗವೇ ಶ್ರೀಮಂತವಾಯಿತು!
ಹೊಳೆಗೆ ಸುರಿದರೂ
ಅಳೆದು ಸುರಿಬೇಕಂತೆ
ಗಳಿಸಿದ್ದೆಲ್ಲಾ ಸುರಿದೆ
ನನ್ನೀ ಜಗ ಬರಿದಾಯಿತು!
ಮರಿ ಮಾಡುವ ಮುನ್ನ
ಮೊಟ್ಟೆ ಎಣಿಸಬಾರದಂತೆ
ಒಟ್ಟು ಮಾಡಲಾಗದೆ ಕುಳಿತೆ
ಜಗವೆ ದುಪ್ಪಟ್ಟಾಯಿತು!
ಅವಕಾಶ ಹುಡುಕಿ
ಹುಡುಕಿ ಒಂದಡಿ
ಮುಂದಡಿ ಇಟ್ಟೆ
ಜಗ ಒಂದು ಗಜ ಮುಂದೆಹೋಯಿತು!
ರಾಗ ನೆನಪಾದಾಗ
ತಾಳ ಮರೆತು ಹೋಯಿತಂತೆ
ಸೊಂಪಾಗಿ ಹಾಡಲಿಲ್ಲ
ಸಿನೆಮಾ ಹಾಡು ರಾಡಿಯಾಯಿತು!
ಉಂಡದ್ದು ಊಟ ಆಗಲಿಲ್ಲ
ಕೊಂಡದ್ದು ಕೂಟ ಆಗಲಿಲ್ಲ
ಮನ ಸಂತೃಪ್ತಿ ಆಗಲೇ ಇಲ್ಲ
ಏನೋ ನಿರಾಶೆ ಮನೆಯಾಯಿತು!
ನವಿಲು ನೋಡಿ
ಕೆಂಭೂತ ಕುಣೀಬಾರದಂತೆ
ಕುಣಿಯಲಾರದೆ ಕುಳಿತೆ
ಜಗವೇ ಬಾಗಿಲೆಳೆದುಕೊಂಡಿತು!
- ಮನೆಯ ಬಾಗಿಲಿಗೆ ಬೀಗ ಹಾಕಿಕೋ
- ಮನದ ಬಾಗಿಲನ್ನು ತೆರೆದಿಡು
- ನಾನು ಒಳಗೆ ಕುಳಿತುಕೊಂಡೆ
- ಜಗ ಬಾಗಿಲೆಳಿದುಕೊಂಡಿತು!
ಓಲೆ ಆಸೆಗೆ
ಬೆಕ್ಕು ಮೂಗುತಿ ಕಳೆದುಕೊಂಡಿತಂತೆ
ಸಿರಿತನದ ಆಸೆಗೆ
ಬದುಕಿನರ್ಥ ಕಳೆದುಕೊಂಡೆ!
Comments