ನವಿಲು ನೋಡಿ
ಕೆಂಭೂತ ಕುಣಿಯಿತಂತೆ
ಕುಣಿಯಲಾಗದೆ ಕುಳಿತೆ
ಜಗ ಕುಣಿದು ನಲಿಯಿತು!
ಸಾಯೋ ತನಕ ಶನಿ ಕಾಟ
ಆದ್ರೆ ಬಾಳೋದು ಯಾವಾಗ
ಅವಕಾಶ ಹುಡುಕಿ ಒಂದಡಿ ಮುಂದಡಿ ಇಟ್ಟೆ
ಜಗ ಒಂದು ಗಜ ಮುಂದೆಹೋಯಿತು!
ಶೆಟ್ಟಿ ಶೃಂಗಾರ ಆಗೋದ್ರಲ್ಲಿ
ಪಟ್ಟಣ ಹಾಳಾಯ್ತತಂತೆ
ದುಬಾರಿ ಬಟ್ಟೆ ಉಡಲಿಲ್ಲಾ
ಜಗ ಬೇಸರಿಸಿ ನಾಚಿಕೊಂಡಿತು!
ಅತಿ ಆಸೆ
ಗತಿ ಕೇಡಂತೆ
ಬಂದದ್ದು ಸಾಕೆಂದುಕೊಂಡೆ
ಜಗ ನಕ್ಕು ಶ್ರೀಮಂತವಾಯಿತು!
ಹೊಳೆಗೆ ಸುರಿದರೂ
ಅಳೆದು ಸುರಿಬೇಕಂತೆ
ಗಳಿಸಿದ್ದೆಲ್ಲಾ ಸುರಿದೆ
ನನ್ನೀ ಜಗ ಬರಿದಾಯಿತು!
ಮರಿ ಮಾಡುವ ಮುನ್ನ
ಮೊಟ್ಟೆ ಎಣಿಸಬಾರದಂತೆ
ಒಟ್ಟು ಮಾಡಲಾಗದೆ ಕುಳಿತೆ
ನಿನ್ನಿಷ್ಟವೆಂದು ಜಗ ದುಪ್ಪಟ್ಟಾಯಿತು!
ರಾಗ ನೆನಪಾದಾಗ
ತಾಳ ಮರೆತು ಹೋಯಿತಂತೆ
ಇಂಪು-ಸೊಂಪಾಗಿ ಹಾಡಲಿಲ್ಲ
ಜಗ ರಂಗು ರಂಗಾಗಿ ಗುನುಗಿತು!
ಉಂಡದ್ದು ಊಟ ಆಗಲಿಲ್ಲ
ಕೊಂಡದ್ದು ಕೂಟ ಆಗಲಿಲ್ಲ
ಮನ ಸಂತೃಪ್ತಿ ಪಡಲೇ ಇಲ್ಲ
ಜಾಣ ಜಗ ಪಾಠ ಕಲಿಸಿತು!
ಓಲೆ ಆಸೆಗೆ ಬೆಕ್ಕು
ಮೂಗುತಿ ಕಳೆದುಕೊಂಡಿತಂತೆ
ಸಿರಿತನದಾಸೆಗೆ ನೆಮ್ಮದಿ ಕಳೆದುಕೊಂಡೆ
ಜಗ ಬದುಕಿನರ್ಥ ತಿಳಿಸಿತು!
ಮನೆಯ ಬಾಗಿಲಿಗೆ ಬೀಗ ಹಾಕಿಕೋ ಮನದ ಬಾಗಿಲು ತೆರೆದಿಡು ನಾನು ಒಳಗೆ ಕುಳಿತುಕೊಂಡೆ ಜಾಗ ಬಾಗಿಲೆಳೆದುಕೊಂಡಿತು!
ಕೆಂಭೂತ ಕುಣಿಯಿತಂತೆ
ಕುಣಿಯಲಾಗದೆ ಕುಳಿತೆ
ಜಗ ಕುಣಿದು ನಲಿಯಿತು!
ಆದ್ರೆ ಬಾಳೋದು ಯಾವಾಗ
ಅವಕಾಶ ಹುಡುಕಿ ಒಂದಡಿ ಮುಂದಡಿ ಇಟ್ಟೆ
ಜಗ ಒಂದು ಗಜ ಮುಂದೆಹೋಯಿತು!
ಶೆಟ್ಟಿ ಶೃಂಗಾರ ಆಗೋದ್ರಲ್ಲಿ
ಪಟ್ಟಣ ಹಾಳಾಯ್ತತಂತೆ
ದುಬಾರಿ ಬಟ್ಟೆ ಉಡಲಿಲ್ಲಾ
ಜಗ ಬೇಸರಿಸಿ ನಾಚಿಕೊಂಡಿತು!
ಅತಿ ಆಸೆ
ಗತಿ ಕೇಡಂತೆ
ಬಂದದ್ದು ಸಾಕೆಂದುಕೊಂಡೆ
ಜಗ ನಕ್ಕು ಶ್ರೀಮಂತವಾಯಿತು!
ಅಳೆದು ಸುರಿಬೇಕಂತೆ
ಗಳಿಸಿದ್ದೆಲ್ಲಾ ಸುರಿದೆ
ನನ್ನೀ ಜಗ ಬರಿದಾಯಿತು!
ಮೊಟ್ಟೆ ಎಣಿಸಬಾರದಂತೆ
ಒಟ್ಟು ಮಾಡಲಾಗದೆ ಕುಳಿತೆ
ನಿನ್ನಿಷ್ಟವೆಂದು ಜಗ ದುಪ್ಪಟ್ಟಾಯಿತು!
ತಾಳ ಮರೆತು ಹೋಯಿತಂತೆ
ಇಂಪು-ಸೊಂಪಾಗಿ ಹಾಡಲಿಲ್ಲ
ಜಗ ರಂಗು ರಂಗಾಗಿ ಗುನುಗಿತು!
ಕೊಂಡದ್ದು ಕೂಟ ಆಗಲಿಲ್ಲ
ಮನ ಸಂತೃಪ್ತಿ ಪಡಲೇ ಇಲ್ಲ
ಜಾಣ ಜಗ ಪಾಠ ಕಲಿಸಿತು!
ಮೂಗುತಿ ಕಳೆದುಕೊಂಡಿತಂತೆ
ಸಿರಿತನದಾಸೆಗೆ ನೆಮ್ಮದಿ ಕಳೆದುಕೊಂಡೆ
ಜಗ ಬದುಕಿನರ್ಥ ತಿಳಿಸಿತು!
ಮನೆಯ ಬಾಗಿಲಿಗೆ ಬೀಗ ಹಾಕಿಕೋ
Comments