Posts

ಸಂಗೀತ ಎನ್ನುವ ಮಾಯಾ ಜಿಂಕೆ ನನ್ನ ಈ ನೀಳ ಪ್ರಬಂಧಕ್ಕೆ ಈ ಶೀರ್ಷಿಕೆ ಕೊಡಲು ಅನೇಕ ಕಾರಣಗಳಿವೆ. ನನ್ನ ಸಂಗೀತದ ಆಸೆ ಹೇಗೆ ಶುರುವಾಯಿತು ಮತ್ತು ಹೇಗೆಲ್ಲಾ ನನ್ನನ್ನು ಸತಾಯಿಸುತ್ತಿದೆ ಎನ್ನುವ ಯೋಚನೆಗಳೊಂದಿಗೆ ಈ ಬರಹ ಶುರು ಮಾಡಿದ್ದೇನೆ.  ನಾನಿನ್ನು ಪ್ರಾಥಮಿಕ ಶಾಲೆಯಲ್ಲಿದ್ದೆ. ಅಪ್ಪ ಒಂದು ಟ್ರಾನ್ಸಿಸ್ಟರ್ ತಂದಿದ್ದರು. ನಮ್ಮೆಲ್ಲರ ಮೊದಲ ಆಲಿಕೆ ಈ ಬುಷ್ ರೇಡಿಯೋವಿನಿಂದ ಶುರುವಾಯಿತು. ನಮಗೆ ಮುಟ್ಟಲು ಕೂಡ ಬಿಡುತ್ತಿರಲಿಲ್ಲ. ಅದನ್ನು  ಟ್ಯೂನ್ ಮಾಡಲು ಬಹಳ ಸಮಯ ಹಿಡಿಯುತ್ತಿತ್ತು. ರೇಡಿಯೋ ಸಿಗ್ನಲ್ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ. ಎಫ್.ಎಂ. ಛಾನೆಲ್  ಆಗ ಇರಲಿಲ್ಲ. ಹದಿನೈದು ದಿನಕ್ಕೋ ತಿಂಗಳಿಗೊಮ್ಮೆ  ಬ್ಯಾಟರಿ ಬದಲಾಯಿಸುವ ಖರ್ಚು ಬೇರೆ. ಬ್ಯಾಟರಿ ಕಡಿಮೆಯಾದಾಗ ಅದನ್ನು ಬಿಚ್ಚಿ ಬಿಸಿಲಿಗೆ ಒಣಗಿಸಿ ಒಂದರೆ ತಾಸು ಕೇಳುತ್ತಿದ್ದೆವು.  ಬ್ಯಾಟರಿ ಕಡಿಮೆಯಾದಾಗ, ಮತ್ತು ಟ್ಯೂನ್ ಮಾಡುವಾಗ ಬರುತ್ತಿದ್ದ  ಅಳುವ ಸದ್ದು ಈಗ ಊಹಿಸಲು ಸಾಧ್ಯವಿಲ್ಲ. ಬೆಳಗಿನ ವಾರ್ತೆಗಳು,  ಭುಲೇ ಬಿಸರೇ ಗೀತ್,  ವಿವಿಧ ಭಾರತಿಯಲ್ಲಿ ನಂದನ - ಕನ್ನಡ ಸಿನೆಮಾ ಹಾಡುಗಳು, ಮಧ್ಹಾನ್ನ ಸಿಲೋನ್ ರೇಡಿಯೋ, ಸಂಜೆ ಮುರೂವರೆಯಿಂದ ನಾಲ್ಕೂವರೆಯವರೆಗೆ ಆಲ್ ಇಂಡಿಯಾ ರೇಡಿಯೋ ಪ್ರಾದೇಶಿಕ ಭಾಷಾ ಹಾಡುಗಳು, ರಾತ್ರಿ ೮ ಗಂಟೆಗೆ ಬರುವ ಸಿನೆಮಾ ಪ್ರಾಯೋಜಿತ ಕಾರ್ಯಕ್ರಮಗಳು ನಮ್ಮೆಲ್ಲರ ಮೊದಲ ಸಂಗೀತದ ಆಲಿಕೆ, ಬೇರೇನೂ ಗೊತ್ತ...
We wreathed about our darling's head The morning-glory bright; Her little face looked out beneath So full of life and light, So lit as with a sunrise, That we could only say, "She is the morning-glory true, And her poor types are they." She is the morning-glory So full of life and light So lit as with a sunrise...  But not so beautiful they rear  Their airy cups of blue, As turned her sweet eyes to the light, Brimmed with sleep's tender dew; And not so close their tendrils fine Round their supports are thrown, As those dear arms whose outstretched plea Clasped all hearts to her own. We used to think how she had come, Even as comes the flower, The last and perfect added gift To crown Love's morning hour; And how in her was imaged forth The love we could not say, As on the little dewdrops round Shines back the heart of day. Oh those lovely lips The devil in my mind Confiscate which is not mine The joy of sweetness Lies in lost memories Oh those...
ಕಾರಿನ ಚಕ್ರಗಳು ತಿರುಗುತ್ತಿವೆ  ತೇಲಾಡುತ್ತಿವೆ ನೂರಾರು ಭಾವನೆಗಳು ಮನದಲ್ಲಿ  ರಸ್ತೆಯ ತಿರುವಿನಲ್ಲಿ  ಅದೇ ಹುಡುಗಿ  ದಿನ ದಿನವೂ ಕಾಣ ಸಿಗುತ್ತಾಳೆ  ಅದೇ ಜಾಗದಲ್ಲಿ  ನಿಂತು ತಲೆತಗ್ಗಿಸಿ ಕಣ್ಣಿನಂಚಿನಲ್ಲೇ  ನೋಡುವ ಈ ಹುಡುಗಿ  ಯಾಕೋ ನನ್ನ ಮನ ಕಾಡುತ್ತಾಳೆ  ಯಾರ ಎದುರು ನೋಡುತ್ತಾಳೋ   ಬಸ್ಸಿಗೋ, ಆಟೋಗೋ, ಕೆಲಸಕ್ಕೂ  ನಾನು ಬೇಗ ಆಫೀಸ್ ಸೇರಬೇಕಿದೆ     ಅಲ್ಲಿ ನಿಲ್ಲಿಸಿ ಮಾತಾಡಿಸಲಾರೆ  ಆದರೂ ಮರೆಯಲಾರೆ  ದಿನ ದಿನವೂ ಯಾಕೆ  ನಾ ಆಕೆಯ ನೋಡಬೇಕು ತಲೆ ಕೆಡಿಸಿಕೊಳಬೇಕು  ಅವಳೇನು ಚೆಲುವೆಯಲ್ಲ  ನಾನೇನು ಯುವಕನಲ್ಲ  ಗಡ್ಡ-ಮೀಸೆ ಬೆಳ್ಳಗಾದಮೇಲೆ  ಇಲ್ಲದ ಸಂವೇದನೆಯೇಕೆ  ನನ್ನ ದಾರಿ ನಾನು ನೋಡಿಕೊಳದೆ ತಲೆ ಬಿಸಿಮಾಡಿಕೊಳಲೇಕೆ  ಬಿಪಿ ಮಾತ್ರೆ ದರ ಮುಗಿಲಿಗೇರಿದೆ ಇನ್ನು ಹುಳಿ-ಖಾರ ಬೇಡವೆಂದಿದ್ದಾರೆ ಮನಸ್ಸಿನ ವಿನಃ ದೇಹ ಮುಪ್ಪಾಯಿತೆ  ಕನಸಿನ ಗೊಂಚಲೊಂದು ಬಾಡಿದಂತೆ  ದಳಗಳು ಉದುರುವ ಮುನ್ನಾ    ಜೀವನ ಕೈಯಲ್ಲಿಡಿದು  ಗಾಡಿ ಚಲಾಯಿಸಲೇಬೇಕು ಸಮಯ-ನಿಯಮ ಪಾಲಿಸಲೇಬೇಕು  ನಿಲಲಿಕ್ಕುಂಟೆ, ತುಸು ನಾಚಲಿಕ್ಕುಂಟೆ   ಸಮಯ! ಕಾರಿನ ಚಕ್ರಗಳು ತಿರುಗುತ್ತಿವೆ ನೂರಾರು ಭಾವನೆಗಳು ತೇಲಾಡುತ್ತಿವೆ  ರಸ್ತೆಯ ತಿರುವಿನಲ್ಲಿ ಅದೇ ಹುಡುಗಿ ದಿನ...
ನವಿಲು ನೋಡಿ  ಕೆಂಭೂತ ಕುಣಿಯಿತಂತೆ   ಕುಣಿಯಲಾಗದೆ ಕುಳಿತೆ  ಜಗ ಕುಣಿದು ನಲಿಯಿತು! ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ಅವಕಾಶ ಹುಡುಕಿ  ಒಂದಡಿ  ಮುಂದಡಿ ಇಟ್ಟೆ ಜಗ ಒಂದು ಗಜ ಮುಂದೆಹೋಯಿತು!   ಶೆಟ್ಟಿ ಶೃಂಗಾರ ಆಗೋದ್ರಲ್ಲಿ  ಪಟ್ಟಣ ಹಾಳಾಯ್ತತಂತೆ  ದುಬಾರಿ ಬಟ್ಟೆ ಉಡಲಿಲ್ಲಾ  ಜಗ ಬೇಸರಿಸಿ ನಾಚಿಕೊಂಡಿತು! ಅತಿ ಆಸೆ  ಗತಿ ಕೇಡಂತೆ  ಬಂದದ್ದು ಸಾಕೆಂದುಕೊಂಡೆ  ಜಗ ನಕ್ಕು  ಶ್ರೀಮಂತವಾಯಿತು! ಹೊಳೆಗೆ ಸುರಿದರೂ  ಅಳೆದು ಸುರಿಬೇಕಂತೆ  ಗಳಿಸಿದ್ದೆಲ್ಲಾ ಸುರಿದೆ  ನನ್ನೀ ಜಗ ಬರಿದಾಯಿತು! ಮರಿ ಮಾಡುವ ಮುನ್ನ ಮೊಟ್ಟೆ ಎಣಿಸಬಾರದಂತೆ  ಒಟ್ಟು ಮಾಡಲಾಗದೆ ಕುಳಿತೆ  ನಿನ್ನಿಷ್ಟವೆಂದು ಜಗ ದುಪ್ಪಟ್ಟಾಯಿತು! ರಾಗ ನೆನಪಾದಾಗ  ತಾಳ ಮರೆತು ಹೋಯಿತಂತೆ  ಇಂಪು-ಸೊಂಪಾಗಿ ಹಾಡಲಿಲ್ಲ  ಜಗ ರಂಗು ರಂಗಾಗಿ ಗುನುಗಿತು! ಉಂಡದ್ದು ಊಟ ಆಗಲಿಲ್ಲ  ಕೊಂಡದ್ದು ಕೂಟ ಆಗಲಿಲ್ಲ  ಮನ ಸಂತೃಪ್ತಿ ಪಡಲೇ ಇಲ್ಲ  ಜಾಣ ಜಗ ಪಾಠ ಕಲಿಸಿತು! ಓಲೆ ಆಸೆಗೆ  ಬೆಕ್ಕು  ಮೂಗುತಿ ಕಳೆದುಕೊಂಡಿತಂತೆ  ಸಿರಿತನದಾಸೆಗೆ  ನೆಮ್ಮದಿ  ಕಳೆದುಕೊಂಡೆ ಜಗ ಬದುಕಿನರ್ಥ ತಿಳಿಸಿತು! ಮನೆಯ ಬಾಗಿಲಿಗೆ ಬೀಗ  ಹಾಕಿಕೋ  ಮನದ ಬಾಗಿಲು ತೆರೆದಿಡು  ನಾನು ಒಳಗೆ ಕುಳಿತುಕೊಂಡೆ  ಜಾಗ ಬ...
ನವಿಲು ನೋಡಿ  ಕೆಂಭೂತ ಕುಣಿಬಾರದಂತೆ  ಕುಣಿಯಲಾಗದೆ ಕುಳಿತೆ  ಇಡೀ ಜಗ ಕುಣಿದು ನಲಿಯಿತು!   ಶೆಟ್ಟಿ ಶೃಂಗಾರ ಆಗೋದ್ರಲ್ಲಿ  ಪಟ್ಟಣ ಹಾಳಾಯ್ತತಂತೆ  ದುಬಾರಿ ಬಟ್ಟೆ ಉಡಲಿಲ್ಲಾ  ಜಗವೆ ನಾಚಿಕೊಂಡಿತು! ಅತಿ ಆಸೆ  ಗತಿ ಕೇಡಂತೆ  ಬಂದದ್ದು ಸಾಕೆಂದುಕೊಂಡೆ  ಜಗವೇ ಶ್ರೀಮಂತವಾಯಿತು! ಹೊಳೆಗೆ ಸುರಿದರೂ  ಅಳೆದು ಸುರಿಬೇಕಂತೆ  ಗಳಿಸಿದ್ದೆಲ್ಲಾ ಸುರಿದೆ  ನನ್ನೀ ಜಗ ಬರಿದಾಯಿತು! ಮರಿ ಮಾಡುವ ಮುನ್ನ ಮೊಟ್ಟೆ ಎಣಿಸಬಾರದಂತೆ  ಒಟ್ಟು ಮಾಡಲಾಗದೆ ಕುಳಿತೆ  ಜಗವೆ ದುಪ್ಪಟ್ಟಾಯಿತು! ಅವಕಾಶ ಹುಡುಕಿ ಹುಡುಕಿ ಒಂದಡಿ ಮುಂದಡಿ ಇಟ್ಟೆ ಜಗ ಒಂದು ಗಜ ಮುಂದೆಹೋಯಿತು! ರಾಗ ನೆನಪಾದಾಗ  ತಾಳ ಮರೆತು ಹೋಯಿತಂತೆ  ಸೊಂಪಾಗಿ ಹಾಡಲಿಲ್ಲ  ಸಿನೆಮಾ ಹಾಡು ರಾಡಿಯಾಯಿತು! ಉಂಡದ್ದು ಊಟ ಆಗಲಿಲ್ಲ  ಕೊಂಡದ್ದು ಕೂಟ ಆಗಲಿಲ್ಲ  ಮನ ಸಂತೃಪ್ತಿ ಆಗಲೇ ಇಲ್ಲ  ಏನೋ ನಿರಾಶೆ ಮನೆಯಾಯಿತು! ನವಿಲು ನೋಡಿ  ಕೆಂಭೂತ ಕುಣೀಬಾರದಂತೆ  ಕುಣಿಯಲಾರದೆ ಕುಳಿತೆ  ಜಗವೇ ಬಾಗಿಲೆಳೆದುಕೊಂಡಿತು! ಮನೆಯ ಬಾಗಿಲಿಗೆ ಬೀಗ ಹಾಕಿಕೋ ಮನದ ಬಾಗಿಲನ್ನು ತೆರೆದಿಡು ನಾನು ಒಳಗೆ ಕುಳಿತುಕೊಂಡೆ  ಜಗ ಬಾಗಿಲೆಳಿದುಕೊಂಡಿತು! ಓಲೆ ಆಸೆಗೆ  ಬೆಕ್ಕು ಮೂಗುತಿ ಕಳೆದುಕೊಂಡಿತಂತೆ  ಸಿರಿತನದ  ಆಸೆಗೆ  ಬದುಕಿನರ್ಥ ಕಳೆದುಕೊಂಡೆ!
ಹೀಗೆ ಸಮಯ ಜಾರುತ್ತಿದೆ  ನಿರಾಡಂಬರವಾಗಿ ಕಲ್ಪನೆಗಳೇ ಕನಸುಗಳಾಗಿ ಕನಸುಗಳು ನನಸುಗಳಾಗಿ   ಸಮಯಾಸಮಯಗಳ  ಕಾಲದ ನಡಿಗೆಯಲ್ಲಿ  ಮರೆತರು ಮರೆಯಲು ಬಿಡದ  ಕಳಚಿಟ್ಟ ಗಡಿಯಾರಗಳು  ನಿದ್ದೆಗೆ ಜಾರಿವೆ  ಯಾವುದೋ ನಿರ್ಭರತೆಯಲ್ಲಿ  ಕಳೆದ ಕಾಲದ ಸೊಗಡು  ನಾಳೆಯೆನ್ನುವ ಕಲ್ಪನೆಗಳ  ಕನಸಿಗೆ ಜಾರಿದೆ! ಹೀಗೊಂದು ಸಂದೇಶ:       ದುಬಾರಿ ಜಂಬದಚೀಲದಲ್ಲಿ ಏನೊಂದು ಇಲ್ಲಾ       ಸಣ್ಣ ಕೈಚೀಲದಲ್ಲಿ  ಎಷ್ಟೊಂದು ಖಾಜಾ  ಅಹಹಾ! ಎಂತಾ ಮಾತು! ತಂತಮ್ಮ ಸ್ವಂತಿಕೆಯ ಜೀವಿಸಿ  ಅನುಭವಿಸೆ ಮನವಿರಬೇಕಷ್ಟೇ  ಯಾರ ಮೆಚ್ಚಿಸಲೋ ಈ ನಾಟಕ  ಬಣ್ಣ ಕಳಚಿದರಷ್ಟೇ  ಪರಮ ಸುಖವಿಹುದೆಂಬ ಸಂಗತ ಮೂಡಿಸಿತೆನೆಗೆ  ಬಂದ ಭಾಗ್ಯದ-ಭೋಗ  ಅನುಭವಿಸೆ ಸಾಕಲ್ಲವೇ  ಈ ಜನುಮ! ಯಾರೋ ದಾಸ  ಹಾಡಿದ್ದೇ ಹಾಡಿದಂತೆ  ದಿನವೂ ಅದೇ ಸಂದೇಶಗಳು  ಅಸಭ್ಯ ಜೋಕುಗಳು  ಜನರ ಮೆಚ್ಚಿಗೆ ಪಡೆಯಲು  ಕಳಚಿದ ವಸ್ತ್ರಗಳು  ಕಾಫಿಯಲ್ಲಿ ಬಿದ್ದ  ನೊಣ ಮುಳುಗುವ ಮುನ್ನ  ಪ್ರಪಂಚಕ್ಕೆಲ್ಲಾ ತೋರಿಸಿ  ಸತ್ತ ನೊಣದ ಕಾಫಿಯ  ರುಚಿಯ ಸವಿಯುವ  ಮೋಹ ಈ ಶತಮಾನದ ಸಾಧನೆ! ನಮ್ಮ ಪುರೋಗತಿಗೆ ಹಿಡಿದ ಕನ್ನಡಿ! ಅವನತಿಯ ದ್ವಂದ್ವ!  
ಜೀವ ಕೊಡುವ  ಮಳೆಯು ಜಿನುಗುತ್ತಿದೆ  ಭಾವನೆಗಳು ಬಯಲಾಗುತ್ತಿವೆ ಕಂಗಳು ದಣಿಯುವಷ್ಟು ದೂರ  ಹಸಿರೋ ಹಸಿರು... ಗಿರಿ-ವನ-ಕಂದಕಗಳು  ನೋಡ ನೋಡುತ್ತಲೇ  ಎಲ್ಲವೂ ಮಟಮಾಯ ಯಾರೋ ಪರದೆಯೆಳೆದಂತೆ  ಶುದ್ಧ ಬಿಳಿಯ ಮಂಜು...  ಇಳಿಬಿಟ್ಟ ತೋರಣದಂತೆ ಮುತ್ತುಗಳು ಜಾರುತ್ತಿವೆ  ಒಂದೊಂದೇ ಅಂಗಳದ ಮುಂದೆ  ನಮ್ಮ ಕಿವಿಗಿಂಪಾಗಿಸಿದೆ   ಟಪ ಟಪ ಸದ್ದು  ನಿಂತ ನೀರ ಮೇಲೆ ನಿರಂತರ  ವರ್ತುಲಗಳ ಚಿತ್ತಾರ ಮಾತ್ರ  ಕಣ್ತುಂಬಿಸಿ ಮತ್ತೆಲ್ಲ ವಿಶಾಲ ನೋಟ  ಮುಸುಕಾಗಿಸಿ ಕವಿದ ಮಂಜು ಸೃಜಿಸಿದ ಪವಾಡ ಸದೃಶ ಕ್ಷಣಗಳ ನೆನೆಯುತ ನಾ ಬರೆದ ಚಿತ್ರಣವಿದು! ಮರಳಿ ಬಾರದ ಬಾಲ್ಯದ  ನೆನಪಿನ ಹಂಗ್ಯಾಕೆ  ತಿಳಿಯಾಗಿಸೇ ಮನವ ನಲಿಯುವುದು ಈ ಜೀವ - ನಲಿಸುವುದು ಎಲ್ಲರನು  ಮಗುವಿನಂತೆ ಮನವಿಟ್ಟು  ಕುಣಿದು ತಣಿದು ನಲಿದೊಡೆ  ವಯಸೆಂಬುದು ಕೇವಲ  ಎಣಿಕೆಯ ಸಂಖ್ಯೆ ಆಗದೆ ಮುಪ್ಪಡರುವುದೇ ಕಷ್ಟ-ಸುಖ-ದುಃಖಗಳ  ಮನನ ಮಾಡದೆ  ಪಾಲಿಗೆ ಬಂದಂತೆ ಸ್ವೀಕರಿಸಿ  ಪರಿಪೂರ್ಣ ಜೀವನ ನಡೆಸಿ  ಕಾಲಾಯ ತಸ್ಮೈ ಎಂದರಾಗದೇ? ದಿನದ ಕೆಲಸ ಮುಗಿಸಿ  ಮನೆಗೆ ಹಿಂತಿರುಗುತ್ತಿದ್ದೆ  ಕಟ್ಟೆಯ ಮೇಲಿನ ಮರದ ಕೆಳಗೆ  ಕತ್ತರಿಸಿದ ತೆಂಗಿನ ಗರಿಗಳು ಒಣಗಿದ ಬೊಂಬು, ಧೂಳಿಡಿದ ಮಡಕೆಗಳು  ಯಾರ ವ್ಯಾಪಾರಕ್ಕೊ ಸಂಸ್ಕಾರಕ್ಕೋ  ...