ಸಂಗೀತ ಎನ್ನುವ ಮಾಯಾ ಜಿಂಕೆ
ನನ್ನ ಈ ನೀಳ ಪ್ರಬಂಧಕ್ಕೆ ಈ ಶೀರ್ಷಿಕೆ ಕೊಡಲು ಅನೇಕ ಕಾರಣಗಳಿವೆ. ನನ್ನ ಸಂಗೀತದ ಆಸೆ ಹೇಗೆ ಶುರುವಾಯಿತು ಮತ್ತು ಹೇಗೆಲ್ಲಾ ನನ್ನನ್ನು ಸತಾಯಿಸುತ್ತಿದೆ ಎನ್ನುವ ಯೋಚನೆಗಳೊಂದಿಗೆ ಈ ಬರಹ ಶುರು ಮಾಡಿದ್ದೇನೆ. 

ನಾನಿನ್ನು ಪ್ರಾಥಮಿಕ ಶಾಲೆಯಲ್ಲಿದ್ದೆ. ಅಪ್ಪ ಒಂದು ಟ್ರಾನ್ಸಿಸ್ಟರ್ ತಂದಿದ್ದರು. ನಮ್ಮೆಲ್ಲರ ಮೊದಲ ಆಲಿಕೆ ಈ ಬುಷ್ ರೇಡಿಯೋವಿನಿಂದ ಶುರುವಾಯಿತು. ನಮಗೆ ಮುಟ್ಟಲು ಕೂಡ ಬಿಡುತ್ತಿರಲಿಲ್ಲ. ಅದನ್ನು ಟ್ಯೂನ್ ಮಾಡಲು ಬಹಳ ಸಮಯ ಹಿಡಿಯುತ್ತಿತ್ತು. ರೇಡಿಯೋ ಸಿಗ್ನಲ್ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ. ಎಫ್.ಎಂ. ಛಾನೆಲ್  ಆಗ ಇರಲಿಲ್ಲ. ಹದಿನೈದು ದಿನಕ್ಕೋ ತಿಂಗಳಿಗೊಮ್ಮೆ  ಬ್ಯಾಟರಿ ಬದಲಾಯಿಸುವ ಖರ್ಚು ಬೇರೆ. ಬ್ಯಾಟರಿ ಕಡಿಮೆಯಾದಾಗ ಅದನ್ನು ಬಿಚ್ಚಿ ಬಿಸಿಲಿಗೆ ಒಣಗಿಸಿ ಒಂದರೆ ತಾಸು ಕೇಳುತ್ತಿದ್ದೆವು. ಬ್ಯಾಟರಿ ಕಡಿಮೆಯಾದಾಗ, ಮತ್ತು ಟ್ಯೂನ್ ಮಾಡುವಾಗ ಬರುತ್ತಿದ್ದ ಅಳುವ ಸದ್ದು ಈಗ ಊಹಿಸಲು ಸಾಧ್ಯವಿಲ್ಲ. ಬೆಳಗಿನ ವಾರ್ತೆಗಳು,  ಭುಲೇ ಬಿಸರೇ ಗೀತ್, ವಿವಿಧ ಭಾರತಿಯಲ್ಲಿ ನಂದನ - ಕನ್ನಡ ಸಿನೆಮಾ ಹಾಡುಗಳು, ಮಧ್ಹಾನ್ನ ಸಿಲೋನ್ ರೇಡಿಯೋ, ಸಂಜೆ ಮುರೂವರೆಯಿಂದ ನಾಲ್ಕೂವರೆಯವರೆಗೆ ಆಲ್ ಇಂಡಿಯಾ ರೇಡಿಯೋ ಪ್ರಾದೇಶಿಕ ಭಾಷಾ ಹಾಡುಗಳು, ರಾತ್ರಿ ೮ ಗಂಟೆಗೆ ಬರುವ ಸಿನೆಮಾ ಪ್ರಾಯೋಜಿತ ಕಾರ್ಯಕ್ರಮಗಳು ನಮ್ಮೆಲ್ಲರ ಮೊದಲ ಸಂಗೀತದ ಆಲಿಕೆ, ಬೇರೇನೂ ಗೊತ್ತಿಲ್ಲದ ನಮಗೆ ಚಿತ್ರ ಗೀತೆಗಳು ಹಾಗು ಜಾನಪದ ಗೀತೆಗಳೇ ನಮ್ಮ ನಿತ್ಯ ಸಂಗೀತ. ಆಗಾಗ್ಗೆ ಶಾಸ್ತ್ರೀಯ ಸಂಗೀತದ ಪ್ರಸಾರಗಳು ಕೇಳಿದರು ಅದರ ಬಗ್ಗೆ ಗಂಧ ಗಾಳಿ ತಿಳಿದಿರಲಿಲ್ಲ.   
ನಂತರದ ದಿನಗಳಲ್ಲಿ ನೋಡಿದ್ದು ಪ್ಯಾನಸೋನಿಕ್ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ಪ್ಲೇಯರ್. ಚಿಕ್ಕಪ್ಪ ತಂದು ತೋರಿಸಿದ್ದು. ಕೌತುಕದಿಂದಲೇ ನೋಡಿ ಆನಂದಿಸಿದ ದಿನಗಳವು. ಚಿಕ್ಕಂದಿನಿಂದಲೇ ನಮ್ಮ ಗ್ಯಾಡ್ಜೆಟ್ ಗೀಳು ಹತ್ತಿಸಿದ್ದು ಇವರೇ ಇರಬಹುದು. ಅವರ ಬಳಿ ಅದಾಗಲೇ ಆಗ್ಫಾ ಕ್ಯಾಮೆರಾ ಒಂದಿತ್ತು. ಗಡಿಯಾರ, ವಾಚ್ ರಿಪೇರಿ ಮಾಡುತ್ತಿದ್ದರು. 

ಯಾವುದಾದರೂ ಸಭೆ, ಸಮಾರಂಭಗಳಲ್ಲಿ ಮೈಕ್ ಮತ್ತು ಗ್ರಾಮೋಫೋನ್ ಗಳನ್ನೂ ಆಗ ಬಾಡಿಗೆಗೆ ತರಿಸುತ್ತಿದ್ದರು. ಅವು ಹಾಡುವುದನ್ನು  ನೋಡುವುದೇ ಒಂದು ಸೋಜಿಗ. ಆ ರೆಕಾರ್ಡ್ಗಳು ತಿರು-ತಿರುಗುತ್ತಿದ್ದುದನ್ನು ನೋಡುತ್ತಲೇ ಇರುತ್ತಿದ್ದೆವು. ಬಹಳ ದಿನಗಳ ನಂತರ ಅಪ್ಪ ಎಲ್ಲಿಂದಲೋ ಒಂದು ಹಳೆಯ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ಪ್ಲೇಯರ್ ತಂದರು. ಇರುವ ನಾಲ್ಕಾರು ಕ್ಯಾಸೆಟ್ ಗಳಿಂದ ಸಿನಿಮಾ ಹಾಡು ಮತ್ತು ಸಿನೆಮಾ ಸ್ಟೋರಿ ಗಳನ್ನೂ ಅದೆಷ್ಟು ಬಾರಿ ತಿರು ತಿರುಗಿಸಿ ಕೇಳುತ್ತಿದ್ದೆವು.  ಗಣೇಶ ಮತ್ತು ರಾಜ್ಯೋತ್ಸವ ಸಮಯದಲ್ಲಿ ಒಮ್ಮೊಮ್ಮೆ ಗ್ರಾಮೋಫೋನ್ ಪ್ಲೇಯರ್ ಅನ್ನು ಚಲಾಯಿಸುವ ಅವಕಾಶ ಸಿಕ್ಕಿದ್ದುಂಟು.  ಕಾಲೇಜು ಅರ್ಧಕ್ಕೆ ಬಿಟ್ಟು ಕೆಲಸ ಶುರುಮಾಡಿದಾಗ ಅಕ್ಕನ ಮನೆಯಲ್ಲಿದ್ದ ಟೇಪ್ ರೆಕಾರ್ಡರ್ ನಲ್ಲಿ ಹಳೆಯ NTR and ANR ತೆಲುಗು ಚಿತ್ರ ಗೀತೆಗಳನ್ನು ಕೇಳುತ್ತ  ಸೀರೆ ನೇಯುವ ಕೆಲಸ ಮಾಡುತ್ತಿದ್ದೆ. ಹತ್ತಿರದ ಗಗನಚುಕ್ಕಿ ಜಲಪಾತ ವೀಕ್ಷಣೆಗೆಂದು ಒಮ್ಮೆ ಹೋದಾಗ ಕಾಡಿ ಬೇಡಿ ಈ ಪ್ಲೇಯರ್ ಅನ್ನು ಕೊಂಡೊಯ್ದು ಅಲ್ಲೆಲ್ಲಾ ಪ್ರದರ್ಶನೇ ಮಾಡಿದ್ದೆ ಮಾಡಿದ್ದು. ಆಗ ENIGMA ಮತ್ತು BAD ಕ್ಯಾಸೆಟ್ ಬಹು ಜನಪ್ರಿಯರಾಗಿದ್ದವು. ಇಂಗ್ಲಿಷ್ ಸಂಗೀತಕ್ಕೆ ನಮ್ಮನ್ನು ಕೊಂಡೊಯ್ದ ಮೊದಲ ಪರಿಚಯಗಳಿವು. ಅದಕ್ಕೂ ಮುಂಚೆ ಬೇರೆ ಆಂಗ್ಲ ಸಂಗೀತ ಕೇಳಿದ ನೆನಪಿಲ್ಲ. ನಮ್ಮೆಲ್ಲ ಆತ್ಮೀಯ ಗೆಳೆಯ ನಾಗರಾಜ ಭಾವ ಗೀತೆ ಕಡೆ ನನ್ನನ್ನು ತಿರುಗಿಸಿದ್ದು ಎಂದರೆ ಅತಿಶಯೋಕ್ತಿಯಲ್ಲ. ಕನ್ನಡ ಭಾವಗೀತೆಗಳನ್ನು ಕೇಳುವುದು ಒಂದು ಒಳ್ಳೆಯ ಅಭಿರುಚಿ ಎಂದೇ ನನ್ನ ಅಭಿಪ್ರಾಯವಾಗಿತ್ತು. ಅಸಂಬದ್ಧ ಮತ್ತು ಅತಿರೇಕದ ಸಿನಿಮಾ ಹಾಡುಗಳನ್ನು ಕೇಳಿದರೆ ಆಗುತ್ತಿರಲಿಲ್ಲ. ಕನ್ನಡ ಸಾಹಿತಿಗಳು, ಬುದ್ಧಿಜೀವಿಗಳು ಇದಕ್ಕೆಲ್ಲಾ ಪತ್ರಿಕೆಗಳಲ್ಲಿ ಟೀಕಿಸುತ್ತಿದ್ದರು. ಹೀಗೆಯೇ ಕನ್ನಡ ಸಾಹಿತ್ಯ ಮತ್ತು ಕವನಗಳ ಕಡೆ ಒಲವು ಮೂಡಿತು. ಹಲವಾರು ಭಾವಗೀತೆ ಕ್ಯಾಸೆಟ್ ಗಳನ್ನು  ಕೊಂಡುಕೊಂಡೆ, ಬರಿಯ ಭಾವಗೀತೆಗಳನ್ನು ಮತ್ತು ಒಳ್ಳೆಯ ಕನ್ನಡ ಚಿತ್ರ ಗೀತೆಗಳನ್ನು ಮಾತ್ರ ಕೇಳುತ್ತಿದ್ದೆ. ಇವೆಲ್ಲಕ್ಕೂ ನಾಗರಾಜನ ಪ್ರಭಾವವೇ ಕಾರಣ.

ಹೀಗೆ ಬೆಳೆದ ಸಂಗೀತದ ನಂಟು ನಾನು ದುಡಿಯಲು ಶುರು ಮಾಡಿದ ಸಮಯಕ್ಕೆ ನನ್ನ ಗೆಳೆಯನೊಬ್ಬನ ಪೋರ್ಟಬಲ್ ಕ್ಯಾಸೆಟ್ ಪ್ಲೇಯರ್ – ವಾಕ್ ಮ್ಯಾನ್ ನೋಡಿ ನಾನು ಸಹಾ ನನ್ನ ಸಂಪಾದನೆಯಲ್ಲಿಯೇ ಒಂದು 'ಐವ' ವಾಕ್ ಮ್ಯಾನ್ ಕೊಂಡುಕೊಂಡೆ. ತುಂಬಾ ಚೆನ್ನಾಗಿತ್ತು. ಮನೆಯಲ್ಲಿ ನಡೆದ ಯಾವುದೋ ಗಲಾಟೆಯಲ್ಲಿ ಕೋಪಕ್ಕೆ ಅದನ್ನು ನೆಲಕ್ಕೆ ಬಡಿದು ಚೂರು ಚೂರು ಮಾಡಿದೆ. ನಂತರ ಕೊಂಡದ್ದು ಫಿಲಿಪ್ಸ್ ಟೂ ಇನ್ ಒನ್ ಪ್ಲೇಯರ್ ವಿಥ್ ಮೈಕ್. ನನ್ನ ಮಾಡುವೆ ನಿಶ್ಚಿತಾರ್ಥ ಸಮಯವದು. ಮೈಕ್ ಹಿಡಿದು ಬಾರದ ಕೆಲವು ಹಾಡುಗಳನ್ನ ಹಾಡಿ  ರಂಜಿಸಿದ್ದು ಇದೆ. ನಂತರ 'ಕ್ಯಾಮೆರಾಡ್ ನ್ಯೂಸ್' ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ ಸಂಬಳ ಚೆನ್ನಾಗಿಯೇ ಬರುತ್ತಿತ್ತು. ಬರುತ್ತಿದ್ದ  ಹೆಚ್ಚಿನ ಹಣದಿಂದ ಬಿ.ಪಿ.ಎಲ್. ಸಿಡಿ ಪ್ಲೇಯರ್ ಕೊಂಡುಕೊಂಡೆ. ಆ ಕಾಲದಲ್ಲಿ ಸಿ. ಡಿ. ಪ್ಲೇಯರ್ ಮತ್ತು ಸಿ. ಡಿ. ಗಳು ತುಂಬಾ ಜನಪ್ರಿಯವಾಗಿತ್ತು ಮತ್ತು ತುಂಬಾ ವೆಚ್ಚದ್ದಾಗಿತ್ತು.

ಸಿ.ಡಿ. ಜನಪ್ರಿಯತೆಯ ನಡುವೆ ಲೇಸರ್ ಡಿಸ್ಕ್ ಗಳಲ್ಲಿ ಸಿನಿಮಾ ಬರಹತ್ತಿದವು. ನಮ್ಮ ಕಂಪನಿಯಲ್ಲಿ ಹೋಮ್ ಥಿಯೇಟರ್ ಪ್ರಾಡಕ್ಟ್ ಗಳ ಮೇಲೆ ಕೆಲಸ ಮಾಡುವ ಅವಕಾಶಗಳಿಂದ ಅದರ ಮೇಲೆ ತೀವ್ರವಾದ ಆಸಕ್ತಿ ಬೆಳೆಯಿತು. 
ಹಾಲಿವುಡ್ ಸಿನಿಮಾಗಳ  ಕಥಾನಕ ಮತ್ತು ದೃಶ್ಯ ಸಂಯೋಜನೆ, ತಾಂತ್ರಿಕತೆ ಇವುಗಳ ಬಗ್ಗೆ ನಮ್ಮ ತಂದೆಯಿಂದ ಆಗಾಗ್ಗೆ ಕೇಳುತ್ತಿದ್ದೆ. Towering Inferno, Mackenna's Gold, The Good, Bad and Ugly ಸಿನಿಮಾಗಳ  ಬಗ್ಗೆ ತುಂಬಾ ಹೇಳುತ್ತಿದ್ದರು. SuperMan ಚಿತ್ರದಲ್ಲಿ ನ್ಯೂಯಾರ್ಕ್ನ ಸಿಟಿ, ನಯಾಗರ ಫಾಲ್ಸ್ ಚಿತ್ರಣ ಅವರಿಗೆ ಹಿಡಿಸಿತ್ತು. ಈ ಕಾಲದಲ್ಲಿ ಅಲ್ಲಿ ಹೋದಾಗ ಅವರ ನೆನಪು ಬಾರದೆ ಇರಲಿಲ್ಲ. ಅವರೊಂದಿಗೆ ಕೆಲವು ಆಂಗ್ಲ ಸಿನಿಮಾಗಳನ್ನು ನೋಡಿದ್ದು ಚೆನ್ನಾಗಿ ನೆನಪಿದೆ. ಈಗ ಸಿನೆಮಾ ಬಗ್ಗೆ ಯಾಕೆ ಹೇಳುತ್ತಿದ್ದೇನೆಂದರೆ ಸಂಗೀತ ಮತ್ತು ಸಿನೆಮಾ ಸಂಗೀತ ನನ್ನನ್ನು ಬಹಳಷ್ಟು ಕಾಡಿದೆ, ಇನ್ನು ಹೆಚ್ಚು ಹೆಚ್ಚಾದ ವೆಚ್ಚಕ್ಕೆ ನನ್ನವು ದೂಡಿದ ಕಾರಣಗಳಿವು. ಬರಿಯ ಸಂಗೀತಕ್ಕೆ ಕೇವಲ ಎರಡು ಸ್ಪೀಕರ್ ಸಾಕು... ಸಿನಿಮಾ ಸರೌಂಡ್ ಸೌಂಡ್ ಗಾಗಿ ಕನಿಷ್ಟ ಐದು ಸ್ಪೀಕರ್ ಮತ್ತು ಒಂದು ಸಬ್ ವೂಫರ್ ಜೊತೆಗೆ ಒಂದು ಆಂಪ್ಲಿಪ್ಲ್ಯಾಯೆರ್ ಬೇಕೇ ಬೇಕು. ಅಥವಾ ಒಂದು ಚೆನ್ನಾದ ಸೌಂಡ್ ಬಾರ್ ಬೇಕು. ಇದು ಕೆಲವು ಸಾವಿರಗಳಿಂದ ಶುರುವಾದರು ಹಲವು ಲಕ್ಷಗಳವರಿಗೆ ಖರ್ಚು ಮಾಡಿಸುತ್ತದೆ. ಮತ್ತು ಅದು ಅಲ್ಲಿಗೆ ಮುಗಿಯುವುದಿಲ್ಲ...

ಸಂಗೀತಾ ಎನ್ನುವಾ ಮಾಯಾ ಜಿಂಕೆಯ ಅರ್ಥ ಈಗ ಹೊಳೆಯುತ್ತಿರಬಹುದು. ಸಣ್ಣದಾಗಿ ಶುರುವಾಗಿದ್ದ ಈ ಸೆಳೆತ ಈಗೀಗ ಸಂಪಾದನೆಯ ಮಟ್ಟದ ಮೇಲೆ ಮೇರೇ ಮೀರಿ ನಿಂತಿದೆ.  ನನ್ನ ಮಟ್ಟಿಗೆ ಹಲವು ಬಾರಿ ಪರಿಕರಗಳು ಹಾಳಾಗಿ, ಬೇರೆಲ್ಲೊ ಹಣ ಉಳಿಸಹೋಗಿ ಕಳೆದುಕೊಂಡದ್ದು, ಇನ್ನು ಹೆಚ್ಚಿನದು ಬೇಕು ಎನ್ನುವ ತೀರದ ಆಸೆಗೊಳಗಾಗಿ, ಇರುವದನ್ನು ಬಿಟ್ಟು ಇರದುದೆಡೆಗೆ ಸಾಗಿದ ನನ್ನ ಕಥೆ ಇನ್ನು ಮುಂದಿದೆ.  ಜಿಂಕೆ ಎದುರಿಗಿದೆ, ಕೈಗೆ ಸಿಗುತ್ತಿಲ್ಲ. ಸ್ವತಃ ಸಂಗೀತಗಾರನು ಅಲ್ಲಾ, ಕೇಳಲು ಮಾತ್ರ ಕಿವಿ ಹರಿದುಕೊಳ್ಳುವ, ಇನ್ನು ಹೆಚ್ಚಿನದು ಹೇಗಿರಬಹುದು, ಕೇಳೋಣವೇ ಎನ್ನುವ ತಪನವೆ ಸಂಪಾದನೆಯ ಕೆಲ ಭಾಗವನ್ನು ಹರಿಯಬಿಟ್ಟು ಎಲ್ಲರ ಟೀಕೆಗೆ ಗುರಿಯಾಗಿದ್ದೇನೆ.

ರೇಡಿಯೊನಿಂದ ಚಿತ್ರಗೀತೆ ಕೇಳಲು ಪ್ರಾರಂಭಿಸಿದೆ. ನಾಗರಾಜನ ಪ್ರಭಾವದಿಂದ ಭಾವಗೀತೆಯ, ಸಾಹಿತ್ಯದ ಒಲವು ಮೂಡಿತು. ಗೆಳೆಯ ಮಂಜು ಸಹವಾಸದಿಂದ ಶುದ್ಧ ಶಾಸ್ತ್ರೀಯ ಸಂಗೀತ, ಹಿಂದಿ ಚಿತ್ರಗೀತೆಗಳ ಕಡೆಗೆ ಒಲವು ಹೆಚ್ಚಾಯಿತು. ಸಹ ಕೆಲಸಗಾರ ರಾ-ಬೆನ್ ಇಷ್ಟಪಡುತ್ತಿದ್ದಂತೆ ಎಲ್ಲಾ ಪ್ರಕಾರದ ಫೇರ್ಫ್ಯಾರ್ಮಿಂಗ್ ಆರ್ಟ್ಸ್ ಬಗ್ಗೆ ನನಗು ಗೀಳು ಹೆಚ್ಚಾಯಿತು. ಆಗಾಗ್ಗೆ ಫ್ರೀಯಾಗಿ ಸಿಗುತ್ತಿದ್ದ ಪಾಸ್ ಗಳಿಂದ ಸಂಗೀತ ಕಚೇರಿಗಳಿಗೆ ಹೋಗುತ್ತಿದ್ದೆ. ಟಿವಿ ಯಿಂದ ಕರ್ನಾಟಕ ಸಂಗೀತ ದಿಗ್ಗಜರ ಕೇಳುವಂತಾದೆ. MP3, YouTube ನಿಂದ Yanni, Pavarotti, L Subramaniyan, Michael Jackson, BoneyM, Pop, Jazz, Blues, Rap, Arabian, even Celtic and Opera music ಎಷ್ಟೆಲ್ಲಾ ಸಂಗೀತ ಪ್ರಕಾರಗಳು. ಇವನ್ನೆಲ್ಲಾ ಮನದಣಿಯೆ ಅನುಭವಿಸಲು ನಾನು ಖರ್ಚು ಮಾಡಿದ್ದು ಇತರರಂತೆ ಹೆಚ್ಚೇನಿಲ್ಲಾ. ಒಮ್ಮೆ Hi-end Audio Show ನೋಡಿದರೆ, ಅವುಗಳ ಬೆಲೆ ನೋಡಿದರೆ ಆಡಿಯೋ ಪ್ರಪಂಚದ  ಅರಿವು ನಮಗಾಗುತ್ತದೆ, ಎದೆ ಝಲ್ಲೆನ್ನುತ್ತದೆ. ನನ್ನ ನೆನಪುಗಳಿಂದ ನಾನು ಮಾಡಿದ ವೆಚ್ಚದ ಪಟ್ಟಿ ಈ ಕೆಳಗಿದೆ. 

Aiwa Walkman   900
Philips Two-in-One   3,000
BPL CD Player   12,000
Onida TV   25,000
Panasonic VCR   6,000
Cambridge Soundworks 4.1   2,500
Sony MP4 Player   16,000
Samsung LCD 32 inch   25,000
Logitech z650   15,500
1Tb Media Player   20,000
Apple Ipod Mini   5,000
Apple Ipod12,000
2TB HDD   7,000
Sony 50 inch 3D TV   57,000
3D Goggles   3,000
Onkyo 5.1 Speakers   35,000
Yamaha AVR   17,500
Yamaha AVR Repairs   2,000
Yamaha AVR Repairs   6,000
Yamaha AVR Repairs   6,500
Teac Amp   4,000
Nokia 55 TV   35,000
Sony AVR   15,000
Apple AirPod Pro   15,000
Microsoft Xbox27,000
Klipsch 7.1   2,05,000
Tube AMP   9,000
Denon AVR   67,000
LG 70 inch TV   93,000
Sonos Sound bar51,000
Oontz27,000
Nakamichi Sound Box700
Apple Earphones2,000
RCA Earphones2,500
Earphone Amp5,000
SoundBase9,000
Sony Headphone6,500
850600

ಸಿನೆಮಾ, ನಾಟಕ, ಸಂಗೀತ, ಸಾಹಿತ್ಯ, ಕರಕುಶಲ ಇವುಗಳಲ್ಲವೂ ನಮ್ಮ ಬಾಲ್ಯದಿಂದಲೇ, ಶಾಲಾದಿನಗಳಿಂದಲೇ ಶುರುವಾಯಿತು. ಶಾಲಾ ವಾರ್ಷಿಕೋತ್ಸವ ಬಂತೆಂದರೆ ಹಾಡುವುದೇ, ಕೇಳುವುದೇ ಮಜಾ. ನಂತರದ ದಿನಗಳಲ್ಲಿ ಸಿನೆಮಾ ಮತ್ತು ಹಲವು ಸಂಗೀತ ಪ್ರಕಾರಗಳು ಪರಿಚಯವಾಯಿತು. ಹಿಂದುಸ್ಥಾನಿ ವಾದ್ಯ ಸಂಗೀತವನ್ನು ಯಾರಾದರೂ ದೊಡ್ಡ ವ್ಯಕ್ತಿಗಳು ಸತ್ತಾಗ ಶೋಕಾಚರಣೆಗೆಂದು ದಿನಗಟ್ಟಲೆ ಬಾನುಲಿಯಲ್ಲಿ ಪ್ರಸಾರವಾಗುತ್ತಿದ್ದನ್ನು ಕೇಳಿ ಬೇಸರಿಸಿಕೊಳ್ಳುತ್ತಿದ್ದೆವು. ಕ್ರಮೇಣ ಅವೆಲ್ಲಾ ಇಷ್ಟವಾಗತೊಡಗಿದ್ವು. ಪಿಂಗಾಣಿ ಪಾತ್ರೆಯಲ್ಲಿ ನೀರು ತುಂಬಿಸಿ ಕಡ್ಡಿಯಿಂದ ಬಾರಿಸಿ ಹೊರಹೊಮ್ಮಿಸುವ ನಾದವನ್ನು (ಜಲತರಂಗ) ನೋಡಿದ್ದು ದೂರದರ್ಶನದಲ್ಲಿ ಮಾತ್ರ. ಎಷ್ಟೊಂದು ತಂತಿಗಳ ಮೇಲೆ ಮುರಿದ ಕನ್ನಡಕ ಕಡ್ಡಿಗಳಿಂದ ಸಂಗೀತ ಬಾರಿಸಿ ದಿನವೆಲ್ಲಾ ಕುಯ್ತಾ ಅವ್ರೆ ಎಂದು ನಗಾಡುತ್ತಿದ್ದೆ. ಆ ವಾದ್ಯದ (ಸಂತೂರ್) ಹೆಸರು ತಿಳಿದಿರಲಿಲ್ಲ. ಪಿಟೀಲು, ಸರೋದ್ ಮತ್ತು ಶಹನಾಯಿ ವಾದನವೆಂದರೆ ಹಿಡಿಸುತ್ತಿರಲಿಲ್ಲ. ಅದರಲ್ಲೂ ಕ್ಲಾರಿಯೋನೆಟ್ ಮತ್ತು ಸಾರಂಗಿ ವಾದನ ಟಿವಿ ಯಲ್ಲಿ ಬಂದರೆ ಆಗುತ್ತಿರಲೇ ಇಲ್ಲ. ಗೆಳೆಯ ಶಹನಾಯಿ ಮಂಗಳ ವಾದ್ಯ ಎಂದೇ ಹೇಳಿದಾಗ ನಿಲುವು ಬದಲಾಯಿತೆನ್ನಬಹುದು. ಈ ಹಿಂದೆ ಹೇಳಿದಂತೆ ಪ್ರತಿಯೊಂದು ಪ್ರದರ್ಶನ ಕಲೆಯೂ ಶ್ರೇಷ್ಠ ಎನ್ನುವ ನಿಲುವು ಮನ ತಾಕಿ ನೆಲೆಯಾಯಿತು. ಮೊಬೈಲ್ ಮತ್ತು ಯೂಟ್ಯೂಬ್ ಬಂದ ಮೇಲೆ ಇಡೀ ಪ್ರಪಂಚದ ಸಂಗೀತವೆಲ್ಲಾ (Yanni, Kitaro, Opera) ಪರಿಚಯವಾಯಿತು.  ಎಷ್ಟೊಂದು ವೈವಿಧ್ಯವಿದೆ ಈ ಸಂಗೀತದಲ್ಲಿ. ಪ್ರಕೃತಿಯಲ್ಲಿ, ನಿತ್ಯ ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸವೂ ನಾದಮಯ ಎನ್ನುವುದು ಈಗ ಅರಿವಾಗುತ್ತಿದೆ. ನಮ್ಮಜ್ಜಿ, ಅಮ್ಮ ಬಿದಿರಿನ ಮೊರದಲ್ಲಿ ರಾಗಿ ಹಸನು ಮಾಡುವಾಗ ಬರುತ್ತಿದ್ದ ತಾಳಬದ್ದ ಲಯ ನನಗೆ ಈಗಲೂ ನೆನಪಿದೆ. ಭಾರದ ಕಂಬಗಳನ್ನು ಎಳೆಯುವಾಗ, ಹಚ್ಚೆ ಹಾಕುವಾಗ, ಮಕ್ಕಳಿಗೆ ಲಾಲಿ ಮಾಡುತ್ತಿದ್ದ ಅಜ್ಜಿಯರ ಜೋಗುಳ ಕೇಳಿದ ನಾವೇ ಧನ್ಯ ಅಲ್ಲವೇ. ಅಳುವ ಮಕ್ಕಳಿಗೆ ಮೊಬೈಲ್ನಲ್ಲಿ rhymes ತೋರಿಸುವ ಕಾಲ ಇದಾದರೂ, ಇದು ಕೂಡ ಸಂಗೀತದ ಉದಾಹರಣೆಯಲ್ಲವೇ.

ಮನದಲ್ಲಿ ತುಂಬಿದ ಹೋಮ್ ಥಿಯೇಟರ್ ನ  ಹುಚ್ಚಿನಿಂದಾಗಿ ಒನಿಡಾ ೨೫ ಇಂಚಿನ ಕಲರ್ ಟಿವಿ (25,000) ಮನೆಗೆ ಬಂತು. ಪಯೋನೀರ್ ವಿ.ಸಿ.ಆರ್. (6,000) ಬಂತು. ಬಾಡಿಗೆಗೆ ಕ್ಯಾಸೆಟ್ ತಂದು ನೋಡಿ ಬೇಸರವಾಯಿತು. ಅದನ್ನು ಮಾರಿದ್ದಾಯಿತು. ಗೆಳೆಯನ ಮನೆಯಿಂದ ಲೇಸರ್ ಡಿಸ್ಕ್ ಪ್ಲೇಯರ್ ತಂದು ಒಂದೆರೆಡು ಚಿತ್ರ ನೋಡಿ, ಬಿ.ಪಿ.ಎಲ್. ಸಿ.ಡಿ. ಪ್ಲೇಯರ್ ನ ಸ್ಟೀರಿಯೋ ಎಫ್ಫೆಕ್ಟ್ನಲ್ಲಿ ಡಾಲ್ಬಿ ಸರೌಂಡ್ ಸೌಂಡ್  ಕೇಳಿ ಖುಷಿ ಪಟ್ಟದ್ದುಂಟು. ಇದೆ ಗುಂಗಿನಲ್ಲಿ 16,000ಕ್ಕೆ ಸೋನಿ ವಿ.ಸಿ.ಡಿ. ಪ್ಲೇಯರ್ ತಂದೆ. ವಿಡಿಯೋ ಸೀಡಿ ಒಂದಕ್ಕೆ ೯೦೦ ಕೊಟ್ಟಿದ್ದಾಯಿತು. ಇದು ಬಹುಶ: ಆ ಕಾಲದಲ್ಲಿ ನಾನು ಮಾಡುತ್ತಿದ್ದ ದುಂದು ವೆಚ್ಚ. 
ಇದು ಅಲ್ಲಿಗೆ ಮುಗಿಯಲಿಲ್ಲ, ಹೊಸ ಮನೆಗೆ ಬಂದಾಗ ಎಲ್.ಸಿ.ಡಿ. ಮತ್ತು ಎಲ್.ಈ.ಡಿ. ಟಿ.ವಿ. ಗಳ ಕಾಲವದು. ಸ್ಯಾಮಸಂಗ್ ಎಲ್.ಸಿ.ಡಿ. ೫ ಸೀರಿಸ್ ೩೨ ಇಂಚಿನದು (25,000) ಬಂತು. 

MP3 and mp4 media player ಕಾಲ ಅದು. ಮನೆಗೆ ಅದಾಗಲೇ D2H ಬಂದಿತ್ತು. HDD Media player 1tb ತರಿಸಿಕೊಂಡೆ. ಹೈ ರೆಸೊಲ್ಯೂಷನ್ ಫಿಲಂ ಪೈರಸಿ, ಇದಕ್ಕಾಗಿ 2tb hdd ಬಂತು. ಅದಾಗಲೇ 3D become a sensation. So bought a Sony 3D TV 50 inch LED TV for 57k. Imported straight from eBay. Enjoyed a quite a few movies on it. Bought a Xbox and played a few games, never raced better. games were expensive, used it as a pure media player. but collected a few blu-ray movies. all of them are 3D movies, then the TV died. spent a quite a money on repair, but never worked better. In a hurry bought a 55 inch Nokia 4k smart TV. Now eyeing a bigger tv of 70 or 75 inches. yet to decide OLED or cheaper bigger.

OK. Let me come back to Audio part.
OK. Let see what I have spent.
Aiwa Walkman   

900

Philips Two-in-One Tape Recorder   

3000

BPL CD Player

12000

Onida TV    

25000

Panasonic VCR    

6000

Cambridge Soundworks 4.1   

2500

Sony MP4 Player    

16000

Samsung LCD TV 32 inch    

25000

Logitech z650 THX Computer speakers

15500

1Tb Media Player

20000

Apple Ipod Mini

5000

Apple Ipod

12000

2TB HDD

7000

Sony 50 inch 3D TV

57000

3D Goggles

3000

Onkyo 5.1 Speakers

35000

Yamaha AVR

17500

Yamaha AVR Repairs   

2000

Yamaha AVR Repairs   

6000

Yamaha AVR Repairs   

6500

Teac Amp   

4000

Nokia 55 TV   

35000

Sony AVR   

15000

Apple AirPod Pro   

15000

Klipsch 7.1   

205000

Tube AMP   

9000

Denon AVR   

67000

LG 70 inch TV  

93000

719900


Aiwa Walkman    900
Philips Two-in-One    3,000
BPL CD Player    12,000
Onida TV    25,000
Panasonic VCR    6,000
Cambridge Soundworks 4.1    2,500
Sony MP4 Player    16,000
Samsung LCD 32 inch    25,000
Logitech z650    15,500
1Tb Media Player    20,000
Apple Ipod Mini    5,000
Apple Ipod 12,000
2TB HDD    7,000
Sony 50 inch 3D TV    57,000
3D Goggles    3,000
Onkyo 5.1 Speakers    35,000
Yamaha AVR    17,500
Yamaha AVR Repairs    3,000
Yamaha AVR Repairs    6,000
Yamaha AVR Repairs    6,500
Teac Amp    4,000
Nokia 55 TV    35,000
Sony AVR    15,000
Apple AirPod Pro    15,000
Klipsch 7.1    2,05,000
Tube AMP    9,000
Denon AVR    67,000
LG 70 inch TV    93,000




Been a fan of Home theatre set-up for quite some time. Already had a Cambridge Soundworks 4.1 Surround Sound system. It was sounding better. But wanted more, with no money for real AVR and tower speakers. Earlier I had BPL CD system connected to TV and enjoyed Dolby Stereo movies, my first experience of big sounding movie enjoyment. With no extra money, went for cheaper alternative of computer speakers - Logitech z650, a 5.1 nice sounding speakers, but not real surround sound.
So on lookout got a Onkyo 5.1 speakers and B&W subwoofer used one for 35K. But I did not had the AV receiver. For time being connected my tower speakers to Logitech 5.1 system and enjoyed a movies and music a bit. Later found a deal on eBay, bought a Yamaha AVR for 17.5 K. It was about 25K in India then. Imported from Singapore with 110v, ran on 220v and blown up. Saved some, lost some. Spent 3k for repairs. Worked for some time. Again my bad luck. It stopped working. by that time already my HDD player stopped working. Then came the Smart TV Era. The Media Player gone obsolete. With new smart TV, I could connect my HDD and USB drives for playback movies. No real Cinema Surround Sound, I could not sit quiet. Bought a Teac AVR for paltry sum of 4k, but it was pretty old used one. Still it sounded good, some times a buzzing sound or no output in one of the audio channels. Since it is old, no DTS, Atmos, 3D Sound. It was bugging me a lot. Later spent 6.5k for repair of Yamaha AVR, but after repairs it developed a humming sound. So dejected. My Teac amp had also some issues, where occasionally some channels didn't work and some disturbing sound had developed. I was seriously on look out on every possible situation of buying new one with my limited budget. Prices were going up. When our daughter was studying in USA, tried to bring one with lesser price. That's mistake I did.
Not one but a series of mistakes happened.
First bought a Onkyo Amp for about $ 250 on Amazon. But then had to return to arrange some money for Bhanu. Soon after that, the Covid happened and short of supply of chips, the prices have had doubled. When our visit to US plan had been finalised, bought a Klipsch 7.1 speakers on Amazon USA. Thought we could bring it piece by piece. No, mistake again as we could not bring big speakers one by one. We paid a hefty price for shipping and an additional custom duty to bring it here home. The total price is 90K for speakers and 1.10L for transport.
The story continues... Since my Yamaha and Teac Receivers was not working properly, and I got 7.1 Atmos speakers, wanted buy a new one. Everybody said to buy a good one. With the pain of extra amount paid for speakers transport, my mind in splits. Prices had doubled. Looked back at eBay and found a very good deal of used Sony 7.1 AVR. Thought it will be delivered good, won the bid for 250 dollars. After two weeks of waiting it arrived broken, thanks to our own Indian Post, and the guy who did not packed it well. So dejected. But luckily got my money back from eBay insurance.
Even with all this experience with bad purchases and bad luck, buying never stopped. Then came cheap deal hunting through OLX marketplace. Paid 25K for a suspicious guy in Pune for used amp. He lured me with bigger one and demanded more money, being already suspicious, my thinking was very bad at that desperate time. Hit or miss was my mind set. Paid another 6k for it, only to be deceived.
So after couple of failures, finally thought of buying a new one. But my mind at back still thinking about cheaper price range. On OLX got to know a guy in Chennai, whose offer was good a good with two level up system. Bought Denon 7.1 AVR for 71K. Not so happy about the setup and clear Atmos effect, somewhat settled with it. But disaster struck again. I slipped and fell with a jug of water, it just splashed right on the amp. After wiping and drying should have waited one more day to dry completely, with anxiety, connected, it worked for a while, but no video and audio output, it completely died. Now I have 4 amps, working at the moment.


Comments

Popular posts from this blog

Gelati!