ಕಾರಿನ ಚಕ್ರಗಳು ತಿರುಗುತ್ತಿವೆ 
ತೇಲಾಡುತ್ತಿವೆ ನೂರಾರು
ಭಾವನೆಗಳು ಮನದಲ್ಲಿ 
ರಸ್ತೆಯ ತಿರುವಿನಲ್ಲಿ 
ಅದೇ ಹುಡುಗಿ 
ದಿನ ದಿನವೂ ಕಾಣ ಸಿಗುತ್ತಾಳೆ 
ಅದೇ ಜಾಗದಲ್ಲಿ ನಿಂತು
ತಲೆತಗ್ಗಿಸಿ ಕಣ್ಣಿನಂಚಿನಲ್ಲೇ 
ನೋಡುವ ಈ ಹುಡುಗಿ 
ಯಾಕೋ ನನ್ನ ಮನ ಕಾಡುತ್ತಾಳೆ 
ಯಾರ ಎದುರು ನೋಡುತ್ತಾಳೋ  
ಬಸ್ಸಿಗೋ, ಆಟೋಗೋ, ಕೆಲಸಕ್ಕೂ 
ನಾನು ಬೇಗ ಆಫೀಸ್ ಸೇರಬೇಕಿದೆ    
ಅಲ್ಲಿ ನಿಲ್ಲಿಸಿ ಮಾತಾಡಿಸಲಾರೆ 
ಆದರೂ ಮರೆಯಲಾರೆ 
ದಿನ ದಿನವೂ ಯಾಕೆ 
ನಾ ಆಕೆಯ ನೋಡಬೇಕು
ತಲೆ ಕೆಡಿಸಿಕೊಳಬೇಕು 
ಅವಳೇನು ಚೆಲುವೆಯಲ್ಲ 
ನಾನೇನು ಯುವಕನಲ್ಲ 
ಗಡ್ಡ-ಮೀಸೆ ಬೆಳ್ಳಗಾದಮೇಲೆ 
ಇಲ್ಲದ ಸಂವೇದನೆಯೇಕೆ 
ನನ್ನ ದಾರಿ ನಾನು ನೋಡಿಕೊಳದೆ
ತಲೆ ಬಿಸಿಮಾಡಿಕೊಳಲೇಕೆ 
ಬಿಪಿ ಮಾತ್ರೆ ದರ ಮುಗಿಲಿಗೇರಿದೆ
ಇನ್ನು ಹುಳಿ-ಖಾರ ಬೇಡವೆಂದಿದ್ದಾರೆ
ಮನಸ್ಸಿನ ವಿನಃ ದೇಹ ಮುಪ್ಪಾಯಿತೆ 
ಕನಸಿನ ಗೊಂಚಲೊಂದು ಬಾಡಿದಂತೆ 
ದಳಗಳು ಉದುರುವ ಮುನ್ನಾ   
ಜೀವನ ಕೈಯಲ್ಲಿಡಿದು 
ಗಾಡಿ ಚಲಾಯಿಸಲೇಬೇಕು
ಸಮಯ-ನಿಯಮ ಪಾಲಿಸಲೇಬೇಕು 
ನಿಲಲಿಕ್ಕುಂಟೆ, ತುಸು
ನಾಚಲಿಕ್ಕುಂಟೆ  ಸಮಯ!


ಕಾರಿನ ಚಕ್ರಗಳು ತಿರುಗುತ್ತಿವೆ
ನೂರಾರು ಭಾವನೆಗಳು ತೇಲಾಡುತ್ತಿವೆ 
ರಸ್ತೆಯ ತಿರುವಿನಲ್ಲಿ
ಅದೇ ಹುಡುಗಿ
ದಿನ ದಿನವೂ ಕಾಣ ಸಿಗುತ್ತಾಳೆ
ಅದೇ ಜಾಗದಲ್ಲಿ ನಿಂತು
ತಲೆತಗ್ಗಿಸಿ ಕಣ್ಣಿನಂಚಿನಲ್ಲೇ
ನೋಡುವ ಈ ಹುಡುಗಿ
ಯಾಕೋ ನನ್ನ ಮನ ಕಾಡುತ್ತಾಳೆ
ಯಾರ ಎದುರು ನೋಡುತ್ತಾಳೋ 
ಬಸ್ಸಿಗೋ, ಆಟೋಗೋ, ಕೆಲಸಕ್ಕೋ 
ನಾನೂ ಬೇಗ ಆಫೀಸ್ ಸೇರಬೇಕಿದೆ   
ಅಲ್ಲಿ ನಿಲ್ಲಿಸಿ ಮಾತನಾಡಿಸಲಾರೆ
ಆದರೂ ಮರೆಯಲಾರೆ
ದಿನ ದಿನವೂ ಯಾಕೆ
ನಾ ಆಕೆಯ ನೋಡಬೇಕು
ತಲೆ ಕೆಡಿಸಿಕೊಳಬೇಕು
ಅವಳೇನು ಚೆಲುವೆಯಲ್ಲ
ನಾನಿನ್ನೇನು ಯುವಕನಲ್ಲ
ಗಡ್ಡ-ಮೀಸೆ ಬೆಳ್ಳಗಾದಮೇಲೆ
ಇಲ್ಲದ ಸಂವೇದನೆಯೇಕೆ
ನನ್ನ ದಾರಿ ನಾನು ನೋಡಿಕೊಳದೆ
ಯಾವುದೋ ಕಾಮನೆಯ ನೆನಪಿನಲ್ಲಿ 
ಅಳಲೇಕೆ, ತಲೆ ಬಿಸಿಮಾಡಿಕೊಳಲೇಕೆ 
ಬಿಪಿ ಮಾತ್ರೆ ದರ ಮುಗಿಲಿಗೇರಿದೆ
ಇನ್ನು ಹುಳಿ-ಖಾರ ಬೇಡವೆಂದಿದ್ದಾರೆ
ಮನಸ್ಸಿನ ವಿನಃ ದೇಹ ಮುಪ್ಪಾಯಿತೆ
ಕನಸಿನ ಗೊಂಚಲೊಂದು ಬಾಡಿದಂತೆ
ದಳಗಳು ಉದುರುವ ಮುನ್ನಾ  
ಜೀವನ ಕೈಯಲ್ಲಿಡಿದು
ಗಾಡಿ ಚಲಾಯಿಸಲೇಬೇಕು
ಸಮಯ-ನಿಯಮ ಪಾಲಿಸಲೇಬೇಕು
ನಿಲಲಿಕ್ಕುಂಟೆ ತಾವೆಲ್ಲಿ!



ನಾನಿನ್ನೇನು ಯುವಕನಲ್ಲ
ಗಡ್ಡ-ಮೀಸೆ ಬೆಳ್ಳಗಾಯಿತು
ಸಂವೇದನೆ ಸೊರಗಿ ವೇದನೆಯೊಂದೇ 
ಉಳಿದಿದೆ, ಮುಂದಿನ ದಾರಿಯಲಿ 
ಈಡೇರದ ಮನದಾಸೆಗಳ ನೆನಪಿನಲ್ಲಿ 
ಅಳಲೇಕೆ, ತಲೆ ಬಿಸಿಮಾಡಿಕೊಳಲೇಕೆ 
ಇನ್ನು ಉಪ್ಪು-ಹುಳಿ-ಖಾರ ಬೇಡವೆಂದಿದ್ದಾರೆ
ಬಿಪಿ ಮಾತ್ರೆ ದರ ಮುಗಿಲಿಗೇರಿದೆ
ಮನಸ್ಸಿನ ವಿನಃ ದೇಹ ಮುಪ್ಪಾಯಿತೆ
ಕನಸಿನ ಗೊಂಚಲೊಂದು ಬಾಡಿದಂತೆ
ದಳಗಳು ಉದುರುವ ಮುನ್ನಾ  
ಸಂಯಮದ ಜೀವನ ನಿಯಮ ಪಾಲಿಸಲೇಬೇಕು 
ನಿಲಲಿಕ್ಕುಂಟೆ ತಾವೆಲ್ಲಿ
ಹೆಸರನುಳಿಸಿ ಹೋಗಲು!















 

Comments

Popular posts from this blog

Gelati!