ನಾಲ್ಕು ಮಜಲು
ಗರ್ಭದೊಳಗಣ
ಕುಡಿ ನಾನು
ಸುಪ್ತ ಪರಾವಲಂಬಿ
ಬಂಧನ ಬಿಡಿಸಿ
ಬಿಟ್ಟ ಕಣ್ಣಿಗೆ
ತಾಯಿಯೆಂಬ ವಿಸ್ಮಯ!
2
ವಸಂತಕೆ ಚಿಗುರೊಡೆದ
ಹುಡುಗ ನಾನು
ಬಯಕೆಗಳ ತುಡುಗ
ಮನದಾಸೆಗೆ
ಪ್ರೇಮದಾರಂಭಕೆ
ಗೆಳತಿಯೆಂಬ ವಿಸ್ಮಯ!
3
ಒಲವುನೊಲವಿನ
ನವ ಜೋಡಿ
ನಾವು
ಬೆರೆತ ಜೀವನ
ಫಲ ಕೊಡುವ
ಪರಿಯದು ವಿಸ್ಮಯ!
4
ಪಯಣದ ಅಂಚಿನಲಿ
ಬೆನ್ನು ಬಾಗಿದ ಮುದುಕ ನಾನು
ಜೀವನದ ಸಾಧನೆ
ಶೂನ್ಯ ಸಂಪಾದನೆಗಳ
ನೆನಪಿನಲಿ
ಅಂತ್ಯವದು ವಿಸ್ಮಯ!
Comments