ಹಿಂಗೊಂದು ವಿಚಾರ!

ಇದೊಂದು ವಿಚಾರ ನಮ್ಮ ನಂಬುಗೆಯನ್ನು ಕುರಿತಾದದ್ದು.

ಬೆಳಗೆರೆ ಕೃಷ್ಣಶಾಸ್ತ್ರಿಯವರ ’ಯೇಗ್ದಾಗೆಲ್ಲಾ ಐತೆ’ ಪುಸ್ತಕದಲ್ಲಿ ಬರುವ ಮುಕುಂದೂರು ಸ್ವಾಮಿಗಳ ಒಂದು ವಿಚಾರಧಾರೆ ಬಹಳ ಸೊಗಸಾದದ್ದು

ಒಮ್ಮೆ ಮುಕುಂದೂರು ಸ್ವಾಮಿಗಳು ಮತ್ತು ಶಾಸ್ತ್ರಿಗಳು ಬೆಟ್ಟದ ಮೇಲಿನ ದೇವಸ್ಥಾನ ನೋಡಿಕೊಂಡು ರಾತ್ರಿ ಅಲ್ಲಿಯೇ ಉಳಿದಿರುತ್ತಾರೆ. ಕಡೆ ಬಂದ ಊರಿನವನೊಬ್ಬ ಸ್ವಾಮಿಗಳ ಕಂಡು  ಊರಿಗೆ ಬರಬೇಕೆಂದು ಬಲವಂತ ಪಡಿಸುತ್ತಾನೆಮತ್ತೊಮ್ಮೆ ಬರುವೆ ಎಂದು ಹೇಳಿದರು ಬಿಡದೆ ಕರೆಯುತ್ತಿದ್ದವನನ್ನು ಸಮಾಧಾನ ಪಡಿಸುತ್ತಾಆತನೊಂದಿಗೆ

"ಅಲ್ಲೋ ಅಪ್ಪಯ್ಯಇದ್ದು ಇದ್ದು ಸನ್ಯಾಶೀನ ಬುಧವಾರಅದರಾಗೂ ರಾತ್ರಿವೇಳೇ ಬಾಳಿ ಬದುಕೋ ಮನಿಗೆ ಕರ್ಕೊ‍ಂಡು ವೋಗಬೌದೇನೋಏನೋ ಸ್ವ್ಯಾಮಿಗಳು ಮನೆಗೆ ಬರಲಿ ಅಂತಾನೆ ಒಳ್ಳೇ ಭಕ್ತಿಯಿಂದ ಕರೀತಾನೆಆದ್ರೆ ನಾವು ತಿಳ್ದು ತಿಳ್ದೂ ವೋಗಬೌದೇನಪ್ಪ ಒಳ್ಳೇ ಬುಧವಾರ". ಅಂತ ಹೇಳಿ ಅವನನ್ನು ವಾಪಸ್ಸು ಕಳಿಸುತ್ತಾರೆ.

ನಂತರ ನಗುತ್ತಾ ಬೆಳಗೆರೆ ಶಾಸ್ತ್ರಿಗಳ ಬಳಿ ಹೆಳ್ತಾರೆ, "ನೋಡ್ದೇನಪ್ಪಾ ಸುಳ್ಳು ಎಷ್ಟು ಚೆನ್ನಾಗಿ ಇಡಿಯುತ್ತೆ ಜನಕ್ಕೆಜನ ದೇವರ ಸೇವೇನೂ ಮಾಡ್ತಾರೆಸ್ವಾಮಿಗಳ ಸೇವೇನೂ ಮಾಡ್ತಾರೆಕೈಲಾದ ಕರ್ಚುಮಾಡಿ ಕಾಣಿಕೆಪಾದಪೂಜೆ ಎಲ್ಲಾ ಮಾಡ್ತಾರೆಅದೆಲ್ಲಾ ತಮಗೆ ಒಳ್ಳೇದಾಗೋದಾದ್ರೆ ಸರಿಸ್ವಾಮಿಗಳು ನನ್ನ ಮನೆಗೆ ಬಂದಿದ್ರು ಅಂಬೋ ಯೆಸರುವಾಸಿ ಆಗಾಕೂ ಸರಿಅಲ್ಲಿವರಗೆ ಎಲ್ಲಾ ಪಸಂದೇಆದರೆ ಏನಾದ್ರೂ ಸ್ವಲ್ಪ ಕೆಡಕಾಗುತ್ತೆ 
ಅಂದ್ರೆ ನಿನ್ನ ಸ್ವಾಮಿಗಳು ಬ್ಯಾಡದೇವರೂ ಬ್ಯಾಡ. (ನಗುತ್ತಾನೋಡು  ಗುಡಿಯೊಳಗೆ ದೇವರೈತೆ ಅನ್ನುಇದ್ದೀತು ಗುಡಿ ಅಂದ ಮ್ಯಾಲೆಅದರಾಗೊಂದು ದೇವರು ಇಟ್ಟಿತ್ರಾರೆಅದೇನು ದೊಡ್ಡ ವಿಚಾರ ಅಂತ ಏನೋ ತಿರಸ್ಕಾರವಾಗಿ ಅಂದುಬಿಡ್ತಾರೆಇವರ ಲೆಕ್ಕದಾಗೆ ಅಲ್ಲಿರೋ ಗೊಂಬೇನೇ ದೇವ್ರುಆದರೆ ಅದೇ ಪಕ್ಕದಾಗಿರೋ ಅಳ್ಳಿ ಮರದಾಗೆ ದೆವ್ವ ಐತೆ ಅನ್ನು ತಕ್ಷಣವೇ ಬೆಚ್ಚಿ ಬೀಳ್ತಾರೆಅತ್ಕಡೆ ತಿರುಗಿ ನೋಡಾಕೂ ಭಯದೆವ್ವ ಅಂದ್ರೆ ಅಷ್ಟು ಸತ್ಯಇವ್ರಿಗೆಲ್ಲಾ ದೇವ್ರು ಅಂದ್ರೆ ಅದೇನು ಬಿಡು ಅಂತ ಲೆಕ್ಕಕ್ಕೆ ತಕೊಂಬಲ್ಲ, (ನಗುತ್ತಾಯಂಗೈತಪ್ಪಾ ಲೋಕಅಂತ ವಿಸ್ಮಯ ಪಡುತ್ತಾರೆ.

ನಿಜ ಅಲ್ವಾ! ಅವರು ಹೇಳಿದ ಒಂದ್ಮಾತು ಸ್ವಾನುಭವಕ್ಕೆ ಬಂದ ಒಂದು ಘಟನೆ.

ನಮ್ಮ ಮನೆಯ ದೇವ್ರು ಶ್ರೀ ಆಂಜನೇಯ ಸ್ವಾಮಿನಮ್ಗೆ ತೋರಿದ ರೀತಿಯಲ್ಲಿ ಪೂಜೆ ಮಾಡ್ಕೊಂಡು ಬರ್ತಿದ್ವಪ್ಪಾಒಂದ್ಸಾರಿ ಯಾರೋ ತಿಳಿದವ್ರು ಹೇಳಿದ್ರುರಾಮ ಇಲ್ಲದ ಕಡೆ ಹನುಮ ಇರಲಾರ ಅಂತಾಆಗಲಿಂದಾ ಮನೆಯಾಗೆ ಶ್ರೀರಾಮ ದೇವ್ರ ಪಟ ಮನೆಯಾಗ ಬಂತುರಾಮ ನಾಮ ಜಪ ಬಂತುಹೊಸ ಭಕ್ತಿ ಕೂಡ ಬಂತುಹೊಸ ಮನೆಗೆ ಬಂದ ಮ್ಯಾಲೆದೇವ್ರ ಮನೆಯಾಗೆ ಸ್ರೀರಾಮಸೀತಾಲಕ್ಸ್ಮಣಆಂಜನೇಯ ಇಗ್ರಹವೊಂದು ಇಡಬೇಕೆಂದು ನನ್ನಾಸೆಇತ್ತಾಳೆ ಇಗ್ರಹ ಜಾಸ್ತಿ ದುಡ್ಡಿಂದು ಅಂದ್ಕೋಂಡು ತರಲಿಕ್ಕೆ ಆಗಲಿಲ್ಲಅಗೊಂದಪಾ ಮಣ್ಣಿನ ಮಡಿಕೆ ಅಂಗಡಿಯಾಗೆ ಬೊಂಬೆಯೊಂದು ತೆಗೊಳ್ಳೋವಾಗರಾಮಸೀತೆ ವಿಗ್ರಹ ಕೇಳ್ದೆಅದಕ್ಕವನು, "ರಾಮಂಗೆ ಪಟ್ಟ ಕಟ್ಟಿದ ಮ್ಯಾಲೆಬಂದ ಕಷ್ಟ ಯಾರಿಗೂ ಬೇಡಟಿ.ವಿ.ಯೊಳಗೆ ಅದರ ಬಗ್ಗೆ ಹೇಳಿದ ಮೇಲೆರಾಮನ ವಿಗ್ರಹ ಕೇಳೋರೆ ಇಲ್ಲ ಸ್ವಾಮಿ!" ಅನ್ನಬೇಕಾ!

ಎಲಾ ಇವ್ನವಾಸ್ತು  ವಿಜ್ಞಾನ ಹ್ಯಾಂಗೆ ಹೇಳಿದ್ನಪಾಅವ್ನು ಅಂಗೆ ಹೇಳಿದ ಮ್ಯಾಲೆ ನಂಗೂ ಅಂಗೆ ಅನ್ನಿಸ್ತು. ಏನು ಹೇಳಲಾಗಲಿಲ್ಲ, ದಾರೀಲೆ ವಾಪಸ್ಸು ಬರ್ತಾ ಮುಕುಂದೂರು ಸ್ವಾಮಿಗಳು ಹೇಳಿದ ಮಾತು ನೆಪ್ಪಿಗೆ ಬಂತು. "ಸ್ವಲ್ಪ ಕೆಡಕಾಗುತ್ತೆ ಅಂದ್ರ ನಿನ್ನ ಸ್ವಾಮಿಗಳು ಬ್ಯಾಡದೇವರೂ ಬ್ಯಾಡ!"  ಅಲ್ವಾ!

ರಾಮ ಪಟ್ಟಾಭಿಷೇಕ ಚಿತ್ರಕ್ಕೆ ಕಂಪ್ಯೂಟರಿನಲ್ಲಿ ಕಷ್ಟ ಪಟ್ಟು ಬಣ್ಣ ಹಚ್ಚಿದ್ದೆಪ್ರಿಂಟ್ ಮಾಡಿಸಿ ಚಂದ ಫ್ರೇಮ್ ಮಾಡಿಸಿ ಮನೆಯಾಗೆ ಹಾಕಬೇಕು ಅನ್ಸಿತ್ತುಆದರೆ, ಶ್ರೀರಾಮ ಪಟ್ಟ ಕಷ್ಟ, ಪಜೀತಿ ನಮಗಾದರೆ, ಬೇಡಪಾ! 
ಚಿತ್ರಪಟ ಇನ್ನು ಪ್ರಿಂಟ್ ಮಾಡಿಸಬೇಕೋ  ಬೇಡಾ ಅಂತಾ ಯೋಚ್ನೆ.

Comments

Popular posts from this blog

Gelati!