ನಾಲ್ಕು ಹಂತ...
ಮನಸು ಬಿಚ್ಚಿಸಿ
ಮನಸು ಬೆರೆಸಿ
ಮನಸು ಕದಡಿ, ಈಗ...
ಮನಸು ಬೀಡಾಡಿ ದನ!
ಪ್ರೇಮದ ಹುಟ್ಟು
ಪ್ರೇಮದ ಗುಟ್ಟು
ಪ್ರೇಮದ ಹೊಯ್ದಾಟ, ಈಗ...
ಪ್ರೇಮದ ಬರಡು ಮರ!
ಆಸೆಗಳ ಎಬ್ಬಿಸಿ
ಆಸೆಗಳ ಪೂರೈಸಿ
ಆಸೆಗಳ ಬೆನ್ನಟ್ಟಿ, ಈಗ
ಆಸೆಗಳ ನಿರಾಶೆ!
ಕಾಮದ ನೋಟ
ಕಾಮದ ಆಟ
ಕಾಮದ ಚೆಲ್ಲಾಟ, ಈಗ....
ಕಾಮದ ಬಲಿಪಶು!
Comments