ಕಾರಿನ ಚಕ್ರಗಳು ತಿರುಗುತ್ತಿವೆ ತೇಲಾಡುತ್ತಿವೆ ನೂರಾರು ಭಾವನೆಗಳು ಮನದಲ್ಲಿ ರಸ್ತೆಯ ತಿರುವಿನಲ್ಲಿ ಅದೇ ಹುಡುಗಿ ದಿನ ದಿನವೂ ಕಾಣ ಸಿಗುತ್ತಾಳೆ ಅದೇ ಜಾಗದಲ್ಲಿ ನಿಂತು ತಲೆತಗ್ಗಿಸಿ ಕಣ್ಣಿನಂಚಿನಲ್ಲೇ ನೋಡುವ ಈ ಹುಡುಗಿ ಯಾಕೋ ನನ್ನ ಮನ ಕಾಡುತ್ತಾಳೆ ಯಾರ ಎದುರು ನೋಡುತ್ತಾಳೋ ಬಸ್ಸಿಗೋ, ಆಟೋಗೋ, ಕೆಲಸಕ್ಕೂ ನಾನು ಬೇಗ ಆಫೀಸ್ ಸೇರಬೇಕಿದೆ ಅಲ್ಲಿ ನಿಲ್ಲಿಸಿ ಮಾತಾಡಿಸಲಾರೆ ಆದರೂ ಮರೆಯಲಾರೆ ದಿನ ದಿನವೂ ಯಾಕೆ ನಾ ಆಕೆಯ ನೋಡಬೇಕು ತಲೆ ಕೆಡಿಸಿಕೊಳಬೇಕು ಅವಳೇನು ಚೆಲುವೆಯಲ್ಲ ನಾನೇನು ಯುವಕನಲ್ಲ ಗಡ್ಡ-ಮೀಸೆ ಬೆಳ್ಳಗಾದಮೇಲೆ ಇಲ್ಲದ ಸಂವೇದನೆಯೇಕೆ ನನ್ನ ದಾರಿ ನಾನು ನೋಡಿಕೊಳದೆ ತಲೆ ಬಿಸಿಮಾಡಿಕೊಳಲೇಕೆ ಬಿಪಿ ಮಾತ್ರೆ ದರ ಮುಗಿಲಿಗೇರಿದೆ ಇನ್ನು ಹುಳಿ-ಖಾರ ಬೇಡವೆಂದಿದ್ದಾರೆ ಮನಸ್ಸಿನ ವಿನಃ ದೇಹ ಮುಪ್ಪಾಯಿತೆ ಕನಸಿನ ಗೊಂಚಲೊಂದು ಬಾಡಿದಂತೆ ದಳಗಳು ಉದುರುವ ಮುನ್ನಾ ಜೀವನ ಕೈಯಲ್ಲಿಡಿದು ಗಾಡಿ ಚಲಾಯಿಸಲೇಬೇಕು ಸಮಯ-ನಿಯಮ ಪಾಲಿಸಲೇಬೇಕು ನಿಲಲಿಕ್ಕುಂಟೆ, ತುಸು ನಾಚಲಿಕ್ಕುಂಟೆ ಸಮಯ! ಕಾರಿನ ಚಕ್ರಗಳು ತಿರುಗುತ್ತಿವೆ ನೂರಾರು ಭಾವನೆಗಳು ತೇಲಾಡುತ್ತಿವೆ ರಸ್ತೆಯ ತಿರುವಿನಲ್ಲಿ ಅದೇ ಹುಡುಗಿ ದಿನ...
Posts
Showing posts from 2024
- Get link
- X
- Other Apps
ನವಿಲು ನೋಡಿ ಕೆಂಭೂತ ಕುಣಿಯಿತಂತೆ ಕುಣಿಯಲಾಗದೆ ಕುಳಿತೆ ಜಗ ಕುಣಿದು ನಲಿಯಿತು! ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ಅವಕಾಶ ಹುಡುಕಿ ಒಂದಡಿ ಮುಂದಡಿ ಇಟ್ಟೆ ಜಗ ಒಂದು ಗಜ ಮುಂದೆಹೋಯಿತು! ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಟಣ ಹಾಳಾಯ್ತತಂತೆ ದುಬಾರಿ ಬಟ್ಟೆ ಉಡಲಿಲ್ಲಾ ಜಗ ಬೇಸರಿಸಿ ನಾಚಿಕೊಂಡಿತು! ಅತಿ ಆಸೆ ಗತಿ ಕೇಡಂತೆ ಬಂದದ್ದು ಸಾಕೆಂದುಕೊಂಡೆ ಜಗ ನಕ್ಕು ಶ್ರೀಮಂತವಾಯಿತು! ಹೊಳೆಗೆ ಸುರಿದರೂ ಅಳೆದು ಸುರಿಬೇಕಂತೆ ಗಳಿಸಿದ್ದೆಲ್ಲಾ ಸುರಿದೆ ನನ್ನೀ ಜಗ ಬರಿದಾಯಿತು! ಮರಿ ಮಾಡುವ ಮುನ್ನ ಮೊಟ್ಟೆ ಎಣಿಸಬಾರದಂತೆ ಒಟ್ಟು ಮಾಡಲಾಗದೆ ಕುಳಿತೆ ನಿನ್ನಿಷ್ಟವೆಂದು ಜಗ ದುಪ್ಪಟ್ಟಾಯಿತು! ರಾಗ ನೆನಪಾದಾಗ ತಾಳ ಮರೆತು ಹೋಯಿತಂತೆ ಇಂಪು-ಸೊಂಪಾಗಿ ಹಾಡಲಿಲ್ಲ ಜಗ ರಂಗು ರಂಗಾಗಿ ಗುನುಗಿತು! ಉಂಡದ್ದು ಊಟ ಆಗಲಿಲ್ಲ ಕೊಂಡದ್ದು ಕೂಟ ಆಗಲಿಲ್ಲ ಮನ ಸಂತೃಪ್ತಿ ಪಡಲೇ ಇಲ್ಲ ಜಾಣ ಜಗ ಪಾಠ ಕಲಿಸಿತು! ಓಲೆ ಆಸೆಗೆ ಬೆಕ್ಕು ಮೂಗುತಿ ಕಳೆದುಕೊಂಡಿತಂತೆ ಸಿರಿತನದಾಸೆಗೆ ನೆಮ್ಮದಿ ಕಳೆದುಕೊಂಡೆ ಜಗ ಬದುಕಿನರ್ಥ ತಿಳಿಸಿತು! ಮನೆಯ ಬಾಗಿಲಿಗೆ ಬೀಗ ಹಾಕಿಕೋ ಮನದ ಬಾಗಿಲು ತೆರೆದಿಡು ನಾನು ಒಳಗೆ ಕುಳಿತುಕೊಂಡೆ ಜಾಗ ಬ...
- Get link
- X
- Other Apps
ನವಿಲು ನೋಡಿ ಕೆಂಭೂತ ಕುಣಿಬಾರದಂತೆ ಕುಣಿಯಲಾಗದೆ ಕುಳಿತೆ ಇಡೀ ಜಗ ಕುಣಿದು ನಲಿಯಿತು! ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಟಣ ಹಾಳಾಯ್ತತಂತೆ ದುಬಾರಿ ಬಟ್ಟೆ ಉಡಲಿಲ್ಲಾ ಜಗವೆ ನಾಚಿಕೊಂಡಿತು! ಅತಿ ಆಸೆ ಗತಿ ಕೇಡಂತೆ ಬಂದದ್ದು ಸಾಕೆಂದುಕೊಂಡೆ ಜಗವೇ ಶ್ರೀಮಂತವಾಯಿತು! ಹೊಳೆಗೆ ಸುರಿದರೂ ಅಳೆದು ಸುರಿಬೇಕಂತೆ ಗಳಿಸಿದ್ದೆಲ್ಲಾ ಸುರಿದೆ ನನ್ನೀ ಜಗ ಬರಿದಾಯಿತು! ಮರಿ ಮಾಡುವ ಮುನ್ನ ಮೊಟ್ಟೆ ಎಣಿಸಬಾರದಂತೆ ಒಟ್ಟು ಮಾಡಲಾಗದೆ ಕುಳಿತೆ ಜಗವೆ ದುಪ್ಪಟ್ಟಾಯಿತು! ಅವಕಾಶ ಹುಡುಕಿ ಹುಡುಕಿ ಒಂದಡಿ ಮುಂದಡಿ ಇಟ್ಟೆ ಜಗ ಒಂದು ಗಜ ಮುಂದೆಹೋಯಿತು! ರಾಗ ನೆನಪಾದಾಗ ತಾಳ ಮರೆತು ಹೋಯಿತಂತೆ ಸೊಂಪಾಗಿ ಹಾಡಲಿಲ್ಲ ಸಿನೆಮಾ ಹಾಡು ರಾಡಿಯಾಯಿತು! ಉಂಡದ್ದು ಊಟ ಆಗಲಿಲ್ಲ ಕೊಂಡದ್ದು ಕೂಟ ಆಗಲಿಲ್ಲ ಮನ ಸಂತೃಪ್ತಿ ಆಗಲೇ ಇಲ್ಲ ಏನೋ ನಿರಾಶೆ ಮನೆಯಾಯಿತು! ನವಿಲು ನೋಡಿ ಕೆಂಭೂತ ಕುಣೀಬಾರದಂತೆ ಕುಣಿಯಲಾರದೆ ಕುಳಿತೆ ಜಗವೇ ಬಾಗಿಲೆಳೆದುಕೊಂಡಿತು! ಮನೆಯ ಬಾಗಿಲಿಗೆ ಬೀಗ ಹಾಕಿಕೋ ಮನದ ಬಾಗಿಲನ್ನು ತೆರೆದಿಡು ನಾನು ಒಳಗೆ ಕುಳಿತುಕೊಂಡೆ ಜಗ ಬಾಗಿಲೆಳಿದುಕೊಂಡಿತು! ಓಲೆ ಆಸೆಗೆ ಬೆಕ್ಕು ಮೂಗುತಿ ಕಳೆದುಕೊಂಡಿತಂತೆ ಸಿರಿತನದ ಆಸೆಗೆ ಬದುಕಿನರ್ಥ ಕಳೆದುಕೊಂಡೆ!
- Get link
- X
- Other Apps
ಹೀಗೆ ಸಮಯ ಜಾರುತ್ತಿದೆ ನಿರಾಡಂಬರವಾಗಿ ಕಲ್ಪನೆಗಳೇ ಕನಸುಗಳಾಗಿ ಕನಸುಗಳು ನನಸುಗಳಾಗಿ ಸಮಯಾಸಮಯಗಳ ಕಾಲದ ನಡಿಗೆಯಲ್ಲಿ ಮರೆತರು ಮರೆಯಲು ಬಿಡದ ಕಳಚಿಟ್ಟ ಗಡಿಯಾರಗಳು ನಿದ್ದೆಗೆ ಜಾರಿವೆ ಯಾವುದೋ ನಿರ್ಭರತೆಯಲ್ಲಿ ಕಳೆದ ಕಾಲದ ಸೊಗಡು ನಾಳೆಯೆನ್ನುವ ಕಲ್ಪನೆಗಳ ಕನಸಿಗೆ ಜಾರಿದೆ! ಹೀಗೊಂದು ಸಂದೇಶ: ದುಬಾರಿ ಜಂಬದಚೀಲದಲ್ಲಿ ಏನೊಂದು ಇಲ್ಲಾ ಸಣ್ಣ ಕೈಚೀಲದಲ್ಲಿ ಎಷ್ಟೊಂದು ಖಾಜಾ ಅಹಹಾ! ಎಂತಾ ಮಾತು! ತಂತಮ್ಮ ಸ್ವಂತಿಕೆಯ ಜೀವಿಸಿ ಅನುಭವಿಸೆ ಮನವಿರಬೇಕಷ್ಟೇ ಯಾರ ಮೆಚ್ಚಿಸಲೋ ಈ ನಾಟಕ ಬಣ್ಣ ಕಳಚಿದರಷ್ಟೇ ಪರಮ ಸುಖವಿಹುದೆಂಬ ಸಂಗತ ಮೂಡಿಸಿತೆನೆಗೆ ಬಂದ ಭಾಗ್ಯದ-ಭೋಗ ಅನುಭವಿಸೆ ಸಾಕಲ್ಲವೇ ಈ ಜನುಮ! ಯಾರೋ ದಾಸ ಹಾಡಿದ್ದೇ ಹಾಡಿದಂತೆ ದಿನವೂ ಅದೇ ಸಂದೇಶಗಳು ಅಸಭ್ಯ ಜೋಕುಗಳು ಜನರ ಮೆಚ್ಚಿಗೆ ಪಡೆಯಲು ಕಳಚಿದ ವಸ್ತ್ರಗಳು ಕಾಫಿಯಲ್ಲಿ ಬಿದ್ದ ನೊಣ ಮುಳುಗುವ ಮುನ್ನ ಪ್ರಪಂಚಕ್ಕೆಲ್ಲಾ ತೋರಿಸಿ ಸತ್ತ ನೊಣದ ಕಾಫಿಯ ರುಚಿಯ ಸವಿಯುವ ಮೋಹ ಈ ಶತಮಾನದ ಸಾಧನೆ! ನಮ್ಮ ಪುರೋಗತಿಗೆ ಹಿಡಿದ ಕನ್ನಡಿ! ಅವನತಿಯ ದ್ವಂದ್ವ!