Posts

Showing posts from March, 2024
ನವಿಲು ನೋಡಿ  ಕೆಂಭೂತ ಕುಣಿಯಿತಂತೆ   ಕುಣಿಯಲಾಗದೆ ಕುಳಿತೆ  ಜಗ ಕುಣಿದು ನಲಿಯಿತು! ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ಅವಕಾಶ ಹುಡುಕಿ  ಒಂದಡಿ  ಮುಂದಡಿ ಇಟ್ಟೆ ಜಗ ಒಂದು ಗಜ ಮುಂದೆಹೋಯಿತು!   ಶೆಟ್ಟಿ ಶೃಂಗಾರ ಆಗೋದ್ರಲ್ಲಿ  ಪಟ್ಟಣ ಹಾಳಾಯ್ತತಂತೆ  ದುಬಾರಿ ಬಟ್ಟೆ ಉಡಲಿಲ್ಲಾ  ಜಗ ಬೇಸರಿಸಿ ನಾಚಿಕೊಂಡಿತು! ಅತಿ ಆಸೆ  ಗತಿ ಕೇಡಂತೆ  ಬಂದದ್ದು ಸಾಕೆಂದುಕೊಂಡೆ  ಜಗ ನಕ್ಕು  ಶ್ರೀಮಂತವಾಯಿತು! ಹೊಳೆಗೆ ಸುರಿದರೂ  ಅಳೆದು ಸುರಿಬೇಕಂತೆ  ಗಳಿಸಿದ್ದೆಲ್ಲಾ ಸುರಿದೆ  ನನ್ನೀ ಜಗ ಬರಿದಾಯಿತು! ಮರಿ ಮಾಡುವ ಮುನ್ನ ಮೊಟ್ಟೆ ಎಣಿಸಬಾರದಂತೆ  ಒಟ್ಟು ಮಾಡಲಾಗದೆ ಕುಳಿತೆ  ನಿನ್ನಿಷ್ಟವೆಂದು ಜಗ ದುಪ್ಪಟ್ಟಾಯಿತು! ರಾಗ ನೆನಪಾದಾಗ  ತಾಳ ಮರೆತು ಹೋಯಿತಂತೆ  ಇಂಪು-ಸೊಂಪಾಗಿ ಹಾಡಲಿಲ್ಲ  ಜಗ ರಂಗು ರಂಗಾಗಿ ಗುನುಗಿತು! ಉಂಡದ್ದು ಊಟ ಆಗಲಿಲ್ಲ  ಕೊಂಡದ್ದು ಕೂಟ ಆಗಲಿಲ್ಲ  ಮನ ಸಂತೃಪ್ತಿ ಪಡಲೇ ಇಲ್ಲ  ಜಾಣ ಜಗ ಪಾಠ ಕಲಿಸಿತು! ಓಲೆ ಆಸೆಗೆ  ಬೆಕ್ಕು  ಮೂಗುತಿ ಕಳೆದುಕೊಂಡಿತಂತೆ  ಸಿರಿತನದಾಸೆಗೆ  ನೆಮ್ಮದಿ  ಕಳೆದುಕೊಂಡೆ ಜಗ ಬದುಕಿನರ್ಥ ತಿಳಿಸಿತು! ಮನೆಯ ಬಾಗಿಲಿಗೆ ಬೀಗ  ಹಾಕಿಕೋ  ಮನದ ಬಾಗಿಲು ತೆರೆದಿಡು  ನಾನು ಒಳಗೆ ಕುಳಿತುಕೊಂಡೆ  ಜಾಗ ಬ...
ನವಿಲು ನೋಡಿ  ಕೆಂಭೂತ ಕುಣಿಬಾರದಂತೆ  ಕುಣಿಯಲಾಗದೆ ಕುಳಿತೆ  ಇಡೀ ಜಗ ಕುಣಿದು ನಲಿಯಿತು!   ಶೆಟ್ಟಿ ಶೃಂಗಾರ ಆಗೋದ್ರಲ್ಲಿ  ಪಟ್ಟಣ ಹಾಳಾಯ್ತತಂತೆ  ದುಬಾರಿ ಬಟ್ಟೆ ಉಡಲಿಲ್ಲಾ  ಜಗವೆ ನಾಚಿಕೊಂಡಿತು! ಅತಿ ಆಸೆ  ಗತಿ ಕೇಡಂತೆ  ಬಂದದ್ದು ಸಾಕೆಂದುಕೊಂಡೆ  ಜಗವೇ ಶ್ರೀಮಂತವಾಯಿತು! ಹೊಳೆಗೆ ಸುರಿದರೂ  ಅಳೆದು ಸುರಿಬೇಕಂತೆ  ಗಳಿಸಿದ್ದೆಲ್ಲಾ ಸುರಿದೆ  ನನ್ನೀ ಜಗ ಬರಿದಾಯಿತು! ಮರಿ ಮಾಡುವ ಮುನ್ನ ಮೊಟ್ಟೆ ಎಣಿಸಬಾರದಂತೆ  ಒಟ್ಟು ಮಾಡಲಾಗದೆ ಕುಳಿತೆ  ಜಗವೆ ದುಪ್ಪಟ್ಟಾಯಿತು! ಅವಕಾಶ ಹುಡುಕಿ ಹುಡುಕಿ ಒಂದಡಿ ಮುಂದಡಿ ಇಟ್ಟೆ ಜಗ ಒಂದು ಗಜ ಮುಂದೆಹೋಯಿತು! ರಾಗ ನೆನಪಾದಾಗ  ತಾಳ ಮರೆತು ಹೋಯಿತಂತೆ  ಸೊಂಪಾಗಿ ಹಾಡಲಿಲ್ಲ  ಸಿನೆಮಾ ಹಾಡು ರಾಡಿಯಾಯಿತು! ಉಂಡದ್ದು ಊಟ ಆಗಲಿಲ್ಲ  ಕೊಂಡದ್ದು ಕೂಟ ಆಗಲಿಲ್ಲ  ಮನ ಸಂತೃಪ್ತಿ ಆಗಲೇ ಇಲ್ಲ  ಏನೋ ನಿರಾಶೆ ಮನೆಯಾಯಿತು! ನವಿಲು ನೋಡಿ  ಕೆಂಭೂತ ಕುಣೀಬಾರದಂತೆ  ಕುಣಿಯಲಾರದೆ ಕುಳಿತೆ  ಜಗವೇ ಬಾಗಿಲೆಳೆದುಕೊಂಡಿತು! ಮನೆಯ ಬಾಗಿಲಿಗೆ ಬೀಗ ಹಾಕಿಕೋ ಮನದ ಬಾಗಿಲನ್ನು ತೆರೆದಿಡು ನಾನು ಒಳಗೆ ಕುಳಿತುಕೊಂಡೆ  ಜಗ ಬಾಗಿಲೆಳಿದುಕೊಂಡಿತು! ಓಲೆ ಆಸೆಗೆ  ಬೆಕ್ಕು ಮೂಗುತಿ ಕಳೆದುಕೊಂಡಿತಂತೆ  ಸಿರಿತನದ  ಆಸೆಗೆ  ಬದುಕಿನರ್ಥ ಕಳೆದುಕೊಂಡೆ!