ಯಾರು ಯಾರೋ ಏನೇನೋ ಮಾಡಿ ಅಕ್ರಮವಾಗಿ ಗಳಿಸಿಹರು ಸಾವಿರಾರು ಕೋಟಿ ಪ್ರಾಮಾಣಿಕ ಆದರ್ಶಕ್ಕೆ ಜೋತುಬಿದ್ದೂ ನಾ ಪಟ್ಟ ಅಸೂಯೆ ಈ ನನ್ನ ಕವನ! ಇರುವುದರಲ್ಲಿ ತೃಪ್ತಿ ಕಾಣದೇ ದುರಾದೃಷ್ಟ ಬೆನ್ನುಹತ್ತಿದ್ದಾಗ ಗಳಿಸುವೆನೆಂದು ಬೆನ್ನಟ್ಟಿದ ಮರೀಚಿಕೆ ಈ ನನ್ನ ಕವನ! ತೇಲಿಬಿಟ್ಟ ಕಾಗದದ ದೋಣಿಗೆ ಗೊತ್ತು ಗುರಿ ಉಂಟೇನು ಮುಳುಗದೇ ಹಳ್ಳದೆಡೆಗೆ ತೇಲುವ ಸಮತೋಲನ ಈ ನನ್ನ ಕವನ! ಮಲೆನಾಡಿನ ಮಳೆಯಂತೆ ನಿಲ್ಲಲೊಲ್ಲದು ಭಾವನೆಗಳ ಮಹಾಪೂರ ಹಿಡಿದಿಟ್ಟ ಕೆಲವೇ ಪದಗಳು ಈ ನನ್ನ ಕವನ! ಪೂರ್ವ ಜನ್ಮಗಳ ಸುಕೃತ ಪುಣ್ಯವೋ ಈ ಜನ್ಮ ಕೊಟ್ಟ ಅದೃಷ್ಟದ ಫಲವೋ ಜೀವನದಲ್ಲಿ ನಾನೂ ಗೆಲುವೆ ನೆನ್ನುವ ಭರವಸೆ ಈ ನನ್ನ ಕವನ! ಬೆಚ್ಚನೆಯ ಹಾಸಿಗೆಯಲಿ ಬಿಸಿಯಪ್ಪುಗೆಯ ಕನಸು ಕಾಣುತ್ತಾ ಕಳೆದ ರಾತ್ರಿಗಳ ವಿರಹದ ಸಿಹಿ ನೆನಪು ಈ ನನ್ನ ಕವನ! ರಾಶಿ ರಾಶಿ ಹಸಿರು ಗುಡ್ಡ, ಕಾಡುಗಳಲಿ ಅಲೆಯುತ ಕಂಡ ಜಲಪಾತಗಳ ಅಪೂರ್ವ ಸೊಬಗು ನಾ ಬೆಳೆಸಿಕೊಂಡ ಪ್ರಕೃತಿಯ ಒಡೆನಾಟ ಈ ನನ್ನ ಕವನ! ಜೀವನದ ಸ...
Posts
Showing posts from 2018
- Get link
- X
- Other Apps
ಕಂಡದ್ದಲ್ಲವೇ ಈ ನೋವು ಕಾಣದಿದ್ದಲ್ಲವೇ ಈ ನಲಿವು ಜೀವನದ ನೆನಪು ನೆಡೆದಿದ್ದಲ್ಲವೇ ಜೀವನದ ಸೋಲು ನಡೆವುದಲ್ಲವೇ ಇದನುಳಿದು ಬೇರೇನಿಹುದು ಕೊನೆಯ ತೀರ ಸೇರುವುದಲ್ಲವೇ! ಕಂಡದ್ದಲ್ಲವೇ ಈ ನೋವು ಕಾಣದಿದ್ದಲ್ಲವೇ ಈ ನಲಿವು ಜೀವನದ ಸೋಲು ನೆಡೆದಿದ್ದಲ್ಲವೇ ಜೀವನದ ಗೆಲವು ನಡೆವುದ್ದಲ್ಲವೇ ಇದನುಳಿದು ಬೇರೇನಿಹುದು ಸಾವು ನಿಶ್ಚಯ ಬದುಕೂ ನಿಶ್ಚಯ ಸಾಧನೆ ಶೂನ್ಯ ಸಂಪಾದನೆ ಅನನ್ಯ ಇದಲ್ಲವೇ ಜೀವನ!