ಸಂಗೀತ ಎನ್ನುವ ಮಾಯಾ ಜಿಂಕೆ ನನ್ನ ಈ ನೀಳ ಪ್ರಬಂಧಕ್ಕೆ ಈ ಶೀರ್ಷಿಕೆ ಕೊಡಲು ಅನೇಕ ಕಾರಣಗಳಿವೆ. ನನ್ನ ಸಂಗೀತದ ಆಸೆ ಹೇಗೆ ಶುರುವಾಯಿತು ಮತ್ತು ಹೇಗೆಲ್ಲಾ ನನ್ನನ್ನು ಸತಾಯಿಸುತ್ತಿದೆ ಎನ್ನುವ ಯೋಚನೆಗಳೊಂದಿಗೆ ಈ ಬರಹ ಶುರು ಮಾಡಿದ್ದೇನೆ. ನಾನಿನ್ನು ಪ್ರಾಥಮಿಕ ಶಾಲೆಯಲ್ಲಿದ್ದೆ. ಅಪ್ಪ ಒಂದು ಟ್ರಾನ್ಸಿಸ್ಟರ್ ತಂದಿದ್ದರು. ನಮ್ಮೆಲ್ಲರ ಮೊದಲ ಆಲಿಕೆ ಈ ಬುಷ್ ರೇಡಿಯೋವಿನಿಂದ ಶುರುವಾಯಿತು. ನಮಗೆ ಮುಟ್ಟಲು ಕೂಡ ಬಿಡುತ್ತಿರಲಿಲ್ಲ. ಅದನ್ನು ಟ್ಯೂನ್ ಮಾಡಲು ಬಹಳ ಸಮಯ ಹಿಡಿಯುತ್ತಿತ್ತು. ರೇಡಿಯೋ ಸಿಗ್ನಲ್ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ. ಎಫ್.ಎಂ. ಛಾನೆಲ್ ಆಗ ಇರಲಿಲ್ಲ. ಹದಿನೈದು ದಿನಕ್ಕೋ ತಿಂಗಳಿಗೊಮ್ಮೆ ಬ್ಯಾಟರಿ ಬದಲಾಯಿಸುವ ಖರ್ಚು ಬೇರೆ. ಬ್ಯಾಟರಿ ಕಡಿಮೆಯಾದಾಗ ಅದನ್ನು ಬಿಚ್ಚಿ ಬಿಸಿಲಿಗೆ ಒಣಗಿಸಿ ಒಂದರೆ ತಾಸು ಕೇಳುತ್ತಿದ್ದೆವು. ಬ್ಯಾಟರಿ ಕಡಿಮೆಯಾದಾಗ, ಮತ್ತು ಟ್ಯೂನ್ ಮಾಡುವಾಗ ಬರುತ್ತಿದ್ದ ಅಳುವ ಸದ್ದು ಈಗ ಊಹಿಸಲು ಸಾಧ್ಯವಿಲ್ಲ. ಬೆಳಗಿನ ವಾರ್ತೆಗಳು, ಭುಲೇ ಬಿಸರೇ ಗೀತ್, ವಿವಿಧ ಭಾರತಿಯಲ್ಲಿ ನಂದನ - ಕನ್ನಡ ಸಿನೆಮಾ ಹಾಡುಗಳು, ಮಧ್ಹಾನ್ನ ಸಿಲೋನ್ ರೇಡಿಯೋ, ಸಂಜೆ ಮುರೂವರೆಯಿಂದ ನಾಲ್ಕೂವರೆಯವರೆಗೆ ಆಲ್ ಇಂಡಿಯಾ ರೇಡಿಯೋ ಪ್ರಾದೇಶಿಕ ಭಾಷಾ ಹಾಡುಗಳು, ರಾತ್ರಿ ೮ ಗಂಟೆಗೆ ಬರುವ ಸಿನೆಮಾ ಪ್ರಾಯೋಜಿತ ಕಾರ್ಯಕ್ರಮಗಳು ನಮ್ಮೆಲ್ಲರ ಮೊದಲ ಸಂಗೀತದ ಆಲಿಕೆ, ಬೇರೇನೂ ಗೊತ್ತ...
Posts
Showing posts from September, 2025