Posts

Showing posts from August, 2024
ಕಾರಿನ ಚಕ್ರಗಳು ತಿರುಗುತ್ತಿವೆ  ತೇಲಾಡುತ್ತಿವೆ ನೂರಾರು ಭಾವನೆಗಳು ಮನದಲ್ಲಿ  ರಸ್ತೆಯ ತಿರುವಿನಲ್ಲಿ  ಅದೇ ಹುಡುಗಿ  ದಿನ ದಿನವೂ ಕಾಣ ಸಿಗುತ್ತಾಳೆ  ಅದೇ ಜಾಗದಲ್ಲಿ  ನಿಂತು ತಲೆತಗ್ಗಿಸಿ ಕಣ್ಣಿನಂಚಿನಲ್ಲೇ  ನೋಡುವ ಈ ಹುಡುಗಿ  ಯಾಕೋ ನನ್ನ ಮನ ಕಾಡುತ್ತಾಳೆ  ಯಾರ ಎದುರು ನೋಡುತ್ತಾಳೋ   ಬಸ್ಸಿಗೋ, ಆಟೋಗೋ, ಕೆಲಸಕ್ಕೂ  ನಾನು ಬೇಗ ಆಫೀಸ್ ಸೇರಬೇಕಿದೆ     ಅಲ್ಲಿ ನಿಲ್ಲಿಸಿ ಮಾತಾಡಿಸಲಾರೆ  ಆದರೂ ಮರೆಯಲಾರೆ  ದಿನ ದಿನವೂ ಯಾಕೆ  ನಾ ಆಕೆಯ ನೋಡಬೇಕು ತಲೆ ಕೆಡಿಸಿಕೊಳಬೇಕು  ಅವಳೇನು ಚೆಲುವೆಯಲ್ಲ  ನಾನೇನು ಯುವಕನಲ್ಲ  ಗಡ್ಡ-ಮೀಸೆ ಬೆಳ್ಳಗಾದಮೇಲೆ  ಇಲ್ಲದ ಸಂವೇದನೆಯೇಕೆ  ನನ್ನ ದಾರಿ ನಾನು ನೋಡಿಕೊಳದೆ ತಲೆ ಬಿಸಿಮಾಡಿಕೊಳಲೇಕೆ  ಬಿಪಿ ಮಾತ್ರೆ ದರ ಮುಗಿಲಿಗೇರಿದೆ ಇನ್ನು ಹುಳಿ-ಖಾರ ಬೇಡವೆಂದಿದ್ದಾರೆ ಮನಸ್ಸಿನ ವಿನಃ ದೇಹ ಮುಪ್ಪಾಯಿತೆ  ಕನಸಿನ ಗೊಂಚಲೊಂದು ಬಾಡಿದಂತೆ  ದಳಗಳು ಉದುರುವ ಮುನ್ನಾ    ಜೀವನ ಕೈಯಲ್ಲಿಡಿದು  ಗಾಡಿ ಚಲಾಯಿಸಲೇಬೇಕು ಸಮಯ-ನಿಯಮ ಪಾಲಿಸಲೇಬೇಕು  ನಿಲಲಿಕ್ಕುಂಟೆ, ತುಸು ನಾಚಲಿಕ್ಕುಂಟೆ   ಸಮಯ! ಕಾರಿನ ಚಕ್ರಗಳು ತಿರುಗುತ್ತಿವೆ ನೂರಾರು ಭಾವನೆಗಳು ತೇಲಾಡುತ್ತಿವೆ  ರಸ್ತೆಯ ತಿರುವಿನಲ್ಲಿ ಅದೇ ಹುಡುಗಿ ದಿನ...