ಜೀವ ಕೊಡುವ ಮಳೆಯು ಜಿನುಗುತ್ತಿದೆ ಭಾವನೆಗಳು ಬಯಲಾಗುತ್ತಿವೆ ಕಂಗಳು ದಣಿಯುವಷ್ಟು ದೂರ ಹಸಿರೋ ಹಸಿರು... ಗಿರಿ-ವನ-ಕಂದಕಗಳು ನೋಡ ನೋಡುತ್ತಲೇ ಎಲ್ಲವೂ ಮಟಮಾಯ ಯಾರೋ ಪರದೆಯೆಳೆದಂತೆ ಶುದ್ಧ ಬಿಳಿಯ ಮಂಜು... ಇಳಿಬಿಟ್ಟ ತೋರಣದಂತೆ ಮುತ್ತುಗಳು ಜಾರುತ್ತಿವೆ ಒಂದೊಂದೇ ಅಂಗಳದ ಮುಂದೆ ನಮ್ಮ ಕಿವಿಗಿಂಪಾಗಿಸಿದೆ ಟಪ ಟಪ ಸದ್ದು ನಿಂತ ನೀರ ಮೇಲೆ ನಿರಂತರ ವರ್ತುಲಗಳ ಚಿತ್ತಾರ ಮಾತ್ರ ಕಣ್ತುಂಬಿಸಿ ಮತ್ತೆಲ್ಲ ವಿಶಾಲ ನೋಟ ಮುಸುಕಾಗಿಸಿ ಕವಿದ ಮಂಜು ಸೃಜಿಸಿದ ಪವಾಡ ಸದೃಶ ಕ್ಷಣಗಳ ನೆನೆಯುತ ನಾ ಬರೆದ ಚಿತ್ರಣವಿದು! ಮರಳಿ ಬಾರದ ಬಾಲ್ಯದ ನೆನಪಿನ ಹಂಗ್ಯಾಕೆ ತಿಳಿಯಾಗಿಸೇ ಮನವ ನಲಿಯುವುದು ಈ ಜೀವ - ನಲಿಸುವುದು ಎಲ್ಲರನು ಮಗುವಿನಂತೆ ಮನವಿಟ್ಟು ಕುಣಿದು ತಣಿದು ನಲಿದೊಡೆ ವಯಸೆಂಬುದು ಕೇವಲ ಎಣಿಕೆಯ ಸಂಖ್ಯೆ ಆಗದೆ ಮುಪ್ಪಡರುವುದೇ ಕಷ್ಟ-ಸುಖ-ದುಃಖಗಳ ಮನನ ಮಾಡದೆ ಪಾಲಿಗೆ ಬಂದಂತೆ ಸ್ವೀಕರಿಸಿ ಪರಿಪೂರ್ಣ ಜೀವನ ನಡೆಸಿ ಕಾಲಾಯ ತಸ್ಮೈ ಎಂದರಾಗದೇ? ದಿನದ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆ ಕಟ್ಟೆಯ ಮೇಲಿನ ಮರದ ಕೆಳಗೆ ಕತ್ತರಿಸಿದ ತೆಂಗಿನ ಗರಿಗಳು ಒಣಗಿದ ಬೊಂಬು, ಧೂಳಿಡಿದ ಮಡಕೆಗಳು ಯಾರ ವ್ಯಾಪಾರಕ್ಕೊ ಸಂಸ್ಕಾರಕ್ಕೋ ...
Posts
Showing posts from 2021