Gelati!
೧. ಗೆಳತಿ ನಿನ್ನ ಕಂಗಳ ತುಂಬಾ ನೂರಾರು ತರಂಗಳು ಹೊರ ಹೊಮ್ಮಲಿ ಬಿಡು ಒಲುಮೆಯ ಸಂಕೇತಗಳು ನಾ ಕಾದಿರುವೆ ಬೆಸೆಯಲು ಗಾಢಪ್ರೇಮದ ತಂತುಗಳು! ೨. ಗೆಳತಿ ನಿನ್ನ ನಾಸಿಕ ಮೆಚ್ಚಿದ ರಸಿಕ ನಾ ಕರಗಲಿ ಬಿಡು ಎನ್ನ ಮನ ನಿನ್ನ ಬಿಸಿಯುಸಿರಿನಲಿ ನಾನಿರಲಾರೆ ನಿನ್ನ ವಿನಾ! ೩. ಗೆಳತಿ ನಿನ್ನ ಅಧರಗಳ ತುಂಬಾ ಮಕರಂದ ಮೊಗೆದುಕೊಳಲು ಬಿಡು ಮನದಾಸೆಯ ತುಂಬಾ ಆಸೆಗಳು ಬರಿದಾಗದು ಈ ಜೀವನದ ತುಂಬಾ! ೪. ಗೆಳತಿ ನಿನ್ನ ಗಲ್ಲ ದೇಸಿ ತಾಟಿ ಬೆಲ್ಲ ಎನಗೆ ಹಂಚಿ ಬಿಡು ಆ ಸಿಹಿಯ ಬಲ್ಲವನಲ್ಲವೇ ಈ ಮಲ್ಲ! ೫. ಗೆಳತಿ ನಿನ್ನ ಕೆನ್ನೆಗಳು ಬಲು ನುಣುಪು ಜಾರಿಕೊಳಲು ಬಿಡು ಆ ಚಿಕ್ಕ ಗುಳಿಗಳಲಿ ನಗುತ ನಲಿಯುತಾ ನಲ್ಮೆಯ ಸಿರಿಯಲಿ! ೬. ಗೆಳತಿ ನಿನ್ನ ಕಿರುನಗೆ ಆಸರೆ ಎನಗೆ ಹಬ್ಬಿಕೊಳಲು ಬಿಡು ಮೈಮನಗಳಲಿ ನವ ವಸಂತಕೆ ಬಿರಿಯಲಾರೆನೆ ಸಾವಿರ ಹೂನಗೆ! ೭. ಗೆಳತಿ ನಿನ್ನ ಮುಂಗುರುಳು ಹೊಂಗನಸಿನುಂಗುರಗಳು ತೊಡಿಸಲು ಬಿಡು ನೀಳ ಬೆರಳಿಗೆ ನಿನಗೆಂದೇ ಮುಡಿಪಿಟ್ಟ ಬಂಗಾರದ ಬಾಳ್ವೆಗೆ!