ನಾಲ್ಕು ಮಜಲು
1 ಗರ್ಭದೊಳಗಣ ಕುಡಿ ನಾನು ಸುಪ್ತ ಪರಾವಲಂಬಿ ಬಂಧನ ಬಿಡಿಸಿ ಬಿಟ್ಟ ಕಣ್ಣಿಗೆ ತಾಯಿಯೆಂಬ ವಿಸ್ಮಯ! 2 ವಸಂತಕೆ ಚಿಗುರೊಡೆದ ಹುಡುಗ ನಾನು ಬಯಕೆಗಳ ತುಡುಗ ಮನದಾಸೆಗೆ ಪ್ರೇಮದಾರಂಭಕೆ ಗೆಳತಿಯೆಂಬ ವಿಸ್ಮಯ! 3 ಒಲವುನೊಲವಿನ ನವ ಜೋಡಿ ನಾವು ಬೆರೆತ ಜೀವನ ಫಲ ಕೊಡುವ ಪರಿಯದು ವಿಸ್ಮಯ! 4 ಪಯಣದ ಅಂಚಿನಲಿ ಬೆನ್ನು ಬಾಗಿದ ಮುದುಕ ನಾನು ಜೀವನದ ಸಾಧನೆ ಶೂನ್ಯ ಸಂಪಾದನೆಗಳ ನೆನಪಿನಲಿ ಅಂತ್ಯವದು ವಿಸ್ಮಯ!