Posts

Showing posts from April, 2012

ಹಿಂಗೊಂದು ವಿಚಾರ!

Image
ಇದೊಂದು ವಿಚಾರ   ನಮ್ಮ   ನಂಬುಗೆಯನ್ನು   ಕುರಿತಾದದ್ದು . ಬೆಳಗೆರೆ   ಕೃಷ್ಣಶಾಸ್ತ್ರಿಯವರ  ’ ಯೇಗ್ದಾಗೆಲ್ಲಾ   ಐತೆ ’  ಪುಸ್ತಕದಲ್ಲಿ   ಬರುವ   ಮುಕುಂದೂರು   ಸ್ವಾಮಿಗಳ ಒಂದು ವಿಚಾರಧಾರೆ ಬಹಳ ಸೊಗಸಾದದ್ದು .  ಒಮ್ಮೆ  ಮುಕುಂದೂರು   ಸ್ವಾಮಿಗಳು ಮತ್ತು ಶಾಸ್ತ್ರಿಗಳು  ಬೆಟ್ಟದ ಮೇಲಿನ ದೇವಸ್ಥಾನ ನೋಡಿಕೊಂಡು ರಾತ್ರಿ ಅಲ್ಲಿಯೇ ಉಳಿದಿರುತ್ತಾರೆ . ಆ ಕಡೆ ಬಂದ ಊರಿನವನೊಬ್ಬ ಸ್ವಾಮಿಗಳ ಕಂಡು   ಊರಿಗೆ   ಬರಬೇಕೆಂದು   ಬಲವಂತ   ಪಡಿಸುತ್ತಾನೆ .  ಮತ್ತೊಮ್ಮೆ   ಬರುವೆ   ಎಂದು   ಹೇಳಿದರು   ಬಿಡದೆ   ಕರೆಯುತ್ತಿದ್ದವನನ್ನು   ಸಮಾಧಾನ   ಪಡಿಸುತ್ತಾ ,  ಆತನೊಂದಿಗೆ :  " ಅಲ್ಲೋ   ಅಪ್ಪಯ್ಯ !  ಇದ್ದು   ಇದ್ದು   ಸನ್ಯಾಶೀನ   ಬುಧವಾರ ,  ಅದರಾಗೂ   ರಾತ್ರಿವೇಳೇ   ಬಾಳಿ   ಬದುಕೋ   ಮನಿಗೆ   ಕರ್ಕೊ‍ಂಡು   ವೋಗಬೌದೇನೋ !  ಏನೋ   ಸ್ವ್ಯಾಮಿಗಳು   ಮನೆಗೆ   ಬರಲಿ   ಅಂತಾನೆ   ಒಳ್ಳೇ   ಭಕ್ತಿಯಿಂದ   ಕರೀತಾನೆ .  ಆದ್ರೆ   ನಾವು   ತಿಳ್ದು   ತಿಳ್ದೂ   ವೋಗಬೌದೇನಪ...