Posts

Showing posts from December, 2010

My solo trek at Ettina Bhuja

Image
Ettina Bhuja view from Bairapura village.           ಹೀಗೊಂದು ದಿನ, ನಾನು ನನ್ನ ಮೂರನೆಯ ಒಂಟಿ ಚಾರಣಕ್ಕೆ ಅಣಿಯಾದೆ. ನಾನು ಹೋಗಬೇಕೆಂದು ಅಂದುಕೊಂಡದ್ದು ಧರ್ಮಸ್ಥಳ, ಬೆಳ್ತಂಗಡಿ ಬಳಿಯ ಶಿಶಿಲ ಎನ್ನುವ ಗ್ರಾಮದಿಂದ ಎತ್ತಿನಭುಜದಂತೆಯ ಕಾಣುವ ಒಂದು ಗುಡ್ಡಕ್ಕೆ. ಅಲ್ಪಸ್ವಲ್ಪ ಜಾಲಾಡಿ ಇಂಟರ್ನೆಟ್ ನಲ್ಲಿ ತಿಳಿದುಕೊಂಡಿದ್ದೆ ನಾದರು ಪೂರ್ಣತಿಳಿದಿರಲಿಲ್ಲ, ಇದು ಒಂಥರಾ ಥ್ರಿಲ್ಲಿಂಗ್ ಆಗಿತ್ತು. ನಿಜವಾದ್ ಥ್ರಿಲ್ಲಿಂಗ್ ಎಂದರೆ ನಾನು ಆ ಗುಡ್ಡ ಹತ್ತಿ ಬಂದ ನಂತರ ಅದೇ ಇಂಟರ್ನೆಟ್ ನಲ್ಲಿ  ಮನುಷ್ಯನಿಗೆ ಒಂದು ಪಾಯಿಂಟ್ ಆಫ಼್ ರೆಫ಼ೆರೆನ್ಸ್ ಅಥವಾ ತಾನು ಹೋಗಬೇಕಾದ ಸ್ಥಳದ ಬಗ್ಗೆ ಸ್ಪಷ್ಟ ಗುರುತು ಇಲ್ಲದಿದ್ದಲ್ಲಿ, ನೇರವಾಗಿ ನಡೆಯಲು ಹೇಳಿದರೆ, ತಾನು ನೇರ ಹೋಗುತ್ತಿದ್ದೇನೆ ಎಂದುಕೊಂಡೇ ವರ್ತುಲಾಕಾರದಲ್ಲಿ ಸುತ್ತು ಹೊಡೆಯುತ್ತಿರುತ್ತಾನೆ. ಅದಕ್ಕೆ ಮಾನವನ ಒಂದು ಕಾಲು ಇನ್ನೊಂದಕ್ಕಿಂತ ಚಿಕ್ಕದಿರುತ್ತದೆ, ಅದರಿಂದ ತನಗರಿವಿಲ್ಲದೆಯೇ ತಾನು ನೇರ ನಡೆಯುತ್ತಿದ್ದೇನೆ ಎಂದುಕೊಳ್ಳುತ್ತಲೇ ಗಿರಕಿ ಹೊಡೆಯುತ್ತಾನೆ, ಎನ್ನುವ ಒಂದು ವಾದವಿದ್ದರೆ, ಭೂಮಿಯ ಗುರುತ್ವಾಕರ್ಷಣೆಯಂತ ತೀವ್ರ ವೈಜ್ಞಾನಿಕ ಸಬೂಬು ಮತ್ತು ಅಂಥಹುದೇ ಹಲವಾರು ಕಾರಣಗಳು ಮತ್ತು ಚರ್ಚೆಗಳಿಗಿದ್ದವು. ಇದನ್ನು ಓದಿ ನಾನು ಆಶ್ಚರ್ಯ ಪಟ್ಟರೂ, ನನ್ನದೇ ಅನುಭವ ಅದೂ ಕೇವಲ ಎರಡು ದಿನಗಳ ಹಿಂದೆ ಆದ ಭಯಂಕರ ಅನುಭವ ಮಾತ್ರ ರೋಮಾಂಚನೀಯ ...