Posts

Showing posts from 2010

My solo trek at Ettina Bhuja

Image
Ettina Bhuja view from Bairapura village.           ಹೀಗೊಂದು ದಿನ, ನಾನು ನನ್ನ ಮೂರನೆಯ ಒಂಟಿ ಚಾರಣಕ್ಕೆ ಅಣಿಯಾದೆ. ನಾನು ಹೋಗಬೇಕೆಂದು ಅಂದುಕೊಂಡದ್ದು ಧರ್ಮಸ್ಥಳ, ಬೆಳ್ತಂಗಡಿ ಬಳಿಯ ಶಿಶಿಲ ಎನ್ನುವ ಗ್ರಾಮದಿಂದ ಎತ್ತಿನಭುಜದಂತೆಯ ಕಾಣುವ ಒಂದು ಗುಡ್ಡಕ್ಕೆ. ಅಲ್ಪಸ್ವಲ್ಪ ಜಾಲಾಡಿ ಇಂಟರ್ನೆಟ್ ನಲ್ಲಿ ತಿಳಿದುಕೊಂಡಿದ್ದೆ ನಾದರು ಪೂರ್ಣತಿಳಿದಿರಲಿಲ್ಲ, ಇದು ಒಂಥರಾ ಥ್ರಿಲ್ಲಿಂಗ್ ಆಗಿತ್ತು. ನಿಜವಾದ್ ಥ್ರಿಲ್ಲಿಂಗ್ ಎಂದರೆ ನಾನು ಆ ಗುಡ್ಡ ಹತ್ತಿ ಬಂದ ನಂತರ ಅದೇ ಇಂಟರ್ನೆಟ್ ನಲ್ಲಿ  ಮನುಷ್ಯನಿಗೆ ಒಂದು ಪಾಯಿಂಟ್ ಆಫ಼್ ರೆಫ಼ೆರೆನ್ಸ್ ಅಥವಾ ತಾನು ಹೋಗಬೇಕಾದ ಸ್ಥಳದ ಬಗ್ಗೆ ಸ್ಪಷ್ಟ ಗುರುತು ಇಲ್ಲದಿದ್ದಲ್ಲಿ, ನೇರವಾಗಿ ನಡೆಯಲು ಹೇಳಿದರೆ, ತಾನು ನೇರ ಹೋಗುತ್ತಿದ್ದೇನೆ ಎಂದುಕೊಂಡೇ ವರ್ತುಲಾಕಾರದಲ್ಲಿ ಸುತ್ತು ಹೊಡೆಯುತ್ತಿರುತ್ತಾನೆ. ಅದಕ್ಕೆ ಮಾನವನ ಒಂದು ಕಾಲು ಇನ್ನೊಂದಕ್ಕಿಂತ ಚಿಕ್ಕದಿರುತ್ತದೆ, ಅದರಿಂದ ತನಗರಿವಿಲ್ಲದೆಯೇ ತಾನು ನೇರ ನಡೆಯುತ್ತಿದ್ದೇನೆ ಎಂದುಕೊಳ್ಳುತ್ತಲೇ ಗಿರಕಿ ಹೊಡೆಯುತ್ತಾನೆ, ಎನ್ನುವ ಒಂದು ವಾದವಿದ್ದರೆ, ಭೂಮಿಯ ಗುರುತ್ವಾಕರ್ಷಣೆಯಂತ ತೀವ್ರ ವೈಜ್ಞಾನಿಕ ಸಬೂಬು ಮತ್ತು ಅಂಥಹುದೇ ಹಲವಾರು ಕಾರಣಗಳು ಮತ್ತು ಚರ್ಚೆಗಳಿಗಿದ್ದವು. ಇದನ್ನು ಓದಿ ನಾನು ಆಶ್ಚರ್ಯ ಪಟ್ಟರೂ, ನನ್ನದೇ ಅನುಭವ ಅದೂ ಕೇವಲ ಎರಡು ದಿನಗಳ ಹಿಂದೆ ಆದ ಭಯಂಕರ ಅನುಭವ ಮಾತ್ರ ರೋಮಾಂಚನೀಯ ...
ಟೊಳ್ಳೋ  ಗಟ್ಟಿಯೋ ಗೊತ್ತಿಲ್ಲ ಎಲ್ಲೂ ಪ್ರಕಟವಾಗಿಲ್ಲ ಯಾರೂ ಓದಲಿಲ್ಲ ಕವನಿಸುವ ಹಂಬಲ ಹಾಗಾಗಿ ಅನಾಥ ಕೂಸು ಈ ನನ್ನ ಕವನ! ಇವೆಲ್ಲಾ ನನ್ನ ಸ್ವಗತವಿರಬಹುದು!  ನನಗುಂಟಾದ ಭಾವನೆಗಳಿಂದ, ಪ್ರೇರೇಪಣೆಯಿಂದ ಬರೆದ ಯಾವ ಕವನಗಳು ಗೆಳೆಯರ ಮುಂದೆ,  ಆಸಕ್ತರ ಮುಂದೆ ಓದುವ ಸಮಯ ಬರಲಿಲ್ಲ, ಹಾಗಂತ ಪ್ರಕಟಿಸುವ ಆಸೆಯಿಂದ ಹೊರ ಬರಲಾಗಲಿಲ್ಲ. ಪ್ರಯತ್ನಿಸಲಿಲ್ಲ ಅಷ್ಟೇ. ವಿದ್ಯುನ್ಮಾನ ಸಾಧ್ಯತೆಗಳೇನಕ, ಅದರ ಮೂಲಕ ಹೊಸ ಹೊಸ ಗೆಳೆಯರ ಆಸಕ್ತರ ತಲುಪುವ ಯತ್ನವೇ ಈ ನನ್ನ ೨೪ ಕವನಗಳು...  ಆಸ್ವಾದಿಸಿದ ಗೆಳೆಯರಿಗೆ ವಂದನೆಗಳು! ನನ್ನ ಎರಡೆನೆಯ ಬ್ಲಾಗ್. ಹಾಗೆಯೇ -- ಇನ್ನೊಂದು ಜೀವನದ ಮಜಲು ಹಾಸಿಗೆಯಿದ್ದಷ್ಟು ಕಾಲು ಚಾಚು. ಚಾಚಿದೆನೋ ಮುದುರಿದೆನೋ ಆಸೆಗಳ ದ್ವಂದ್ವಗಳಂತೆ ಜೀರುಡುವ ಜೀರುಂಬೆ ಈ ನನ್ನ ಕವನ! ಈ ಕವನ ಉದಯಿಸಿದ ಸಂದರ್ಭ -- ಮಾನವನ ಅದಮ್ಯ ಆಸೆ ತನಗಾಗಿ ಒಂದು ಮನೆ ಕಟ್ಟಿಕೊಳ್ಳುವುದು. ಮದ್ಯ ತರಗತಿಯ ಜೀವನದ ಜಂಜಡದಲ್ಲಿ ಆದ್ಯತೆಗಳು ಪ್ರಖರವಾದಾಗ ಸಮಯ ಬೆಳಕು ತೋರಿದಾಗ ಯಾರ ಯಾರದ್ದೋ ಸಹಾಯದಿಂದ, ದೈವ ಪ್ರೇರಣೆಯಿಂದ ಸಾಲ ಮಾಡಿ ಮನೆ ಮಾಡಿದೆ. ನಂತರ ಬ್ಯಾಂಕುಗಳ ಲಾಭದಾಸೆಯ ವಿಪರೀತ ಬಡ್ಡಿ ದರಗಳಿಂದ ನಾವು ಪಡುವ ಬವಣೆಗಳೆಷ್ಟೋ. ಇವಲ್ಲೆದರ ನಡುವೆ ತೂರಿಬರುವ ವಿಮರ್ಶೆ 'ಹಾಸಿಗೆಯಿದ್ದಷ್ಟು ಕಾಲು ಚಾಚು.' ಈಗ ಇದು ನನಗೆ ನಾಣ್ನುಡಿಯೋ ವಿಮರ್ಶೆಯೋ ಅರ್ಥವ...