ಟೊಳ್ಳೋ ಗಟ್ಟಿಯೋ ಗೊತ್ತಿಲ್ಲ ಎಲ್ಲೂ ಪ್ರಕಟವಾಗಿಲ್ಲ ಯಾರೂ ಓದಲಿಲ್ಲ ಕವನಿಸುವ ಹಂಬಲ ಹಾಗಾಗಿ ಅನಾಥ ಕೂಸು ಈ ನನ್ನ ಕವನ! ಇವೆಲ್ಲಾ ನನ್ನ ಸ್ವಗತವಿರಬಹುದು! ನನಗುಂಟಾದ ಭಾವನೆಗಳಿಂದ, ಪ್ರೇರೇಪಣೆಯಿಂದ ಬರೆದ ಯಾವ ಕವನಗಳು ಗೆಳೆಯರ ಮುಂದೆ, ಆಸಕ್ತರ ಮುಂದೆ ಓದುವ ಸಮಯ ಬರಲಿಲ್ಲ, ಹಾಗಂತ ಪ್ರಕಟಿಸುವ ಆಸೆಯಿಂದ ಹೊರ ಬರಲಾಗಲಿಲ್ಲ. ಪ್ರಯತ್ನಿಸಲಿಲ್ಲ ಅಷ್ಟೇ. ವಿದ್ಯುನ್ಮಾನ ಸಾಧ್ಯತೆಗಳೇನಕ, ಅದರ ಮೂಲಕ ಹೊಸ ಹೊಸ ಗೆಳೆಯರ ಆಸಕ್ತರ ತಲುಪುವ ಯತ್ನವೇ ಈ ನನ್ನ ೨೪ ಕವನಗಳು... ಆಸ್ವಾದಿಸಿದ ಗೆಳೆಯರಿಗೆ ವಂದನೆಗಳು! ನನ್ನ ಎರಡೆನೆಯ ಬ್ಲಾಗ್. ಹಾಗೆಯೇ -- ಇನ್ನೊಂದು ಜೀವನದ ಮಜಲು ಹಾಸಿಗೆಯಿದ್ದಷ್ಟು ಕಾಲು ಚಾಚು. ಚಾಚಿದೆನೋ ಮುದುರಿದೆನೋ ಆಸೆಗಳ ದ್ವಂದ್ವಗಳಂತೆ ಜೀರುಡುವ ಜೀರುಂಬೆ ಈ ನನ್ನ ಕವನ! ಈ ಕವನ ಉದಯಿಸಿದ ಸಂದರ್ಭ -- ಮಾನವನ ಅದಮ್ಯ ಆಸೆ ತನಗಾಗಿ ಒಂದು ಮನೆ ಕಟ್ಟಿಕೊಳ್ಳುವುದು. ಮದ್ಯ ತರಗತಿಯ ಜೀವನದ ಜಂಜಡದಲ್ಲಿ ಆದ್ಯತೆಗಳು ಪ್ರಖರವಾದಾಗ ಸಮಯ ಬೆಳಕು ತೋರಿದಾಗ ಯಾರ ಯಾರದ್ದೋ ಸಹಾಯದಿಂದ, ದೈವ ಪ್ರೇರಣೆಯಿಂದ ಸಾಲ ಮಾಡಿ ಮನೆ ಮಾಡಿದೆ. ನಂತರ ಬ್ಯಾಂಕುಗಳ ಲಾಭದಾಸೆಯ ವಿಪರೀತ ಬಡ್ಡಿ ದರಗಳಿಂದ ನಾವು ಪಡುವ ಬವಣೆಗಳೆಷ್ಟೋ. ಇವಲ್ಲೆದರ ನಡುವೆ ತೂರಿಬರುವ ವಿಮರ್ಶೆ 'ಹಾಸಿಗೆಯಿದ್ದಷ್ಟು ಕಾಲು ಚಾಚು.' ಈಗ ಇದು ನನಗೆ ನಾಣ್ನುಡಿಯೋ ವಿಮರ್ಶೆಯೋ ಅರ್ಥವ...
Posts
Showing posts from October, 2010